ಗೌರಿ, ಗಣೇಶ ಪೂಜೆ ಮಾಡುವಾಗ ಲಕ್ಷಣವಾಗಿ ರೆಡಿ ಆದರೆ ಎಷ್ಟು ಚೆಂದ ಅಲ್ವಾ?
ಗಣೇಶ ಚತುರ್ಥಿ ಆಚರಣೆಗಾಗಿ ಯಾವ ರೀತಿಯ ಡ್ರೆಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ನೀವು ಯೋಚಿಸುತ್ತಿದ್ರೆ, ಇಲ್ಲಿದೆ ನಿಮಗಾಗಿ ಸಲಹೆ. ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಫ್ಯೂಷನ್ ಉಡುಪುಗಳವರೆಗೆ, ಈ ಡ್ರೆಸ್ ಗಳಲ್ಲಿ ನೀವು ಹಬ್ಬವನ್ನು ಎಂಜಾಯ್ ಮಾಡಬಹುದು.
ಇನ್ನೇನು ಗಣೇಶ ಹಬ್ಬ (Ganesha Chaturthi) ಬಂದೇ ಬಿಟ್ಟಿತು. ಹಬ್ಬಕ್ಕೆ ಗಣೇಶನ ಕೂರಿಸುವ ಎಲ್ಲಾ ತಯಾರಿ, ಇಷ್ಟರಲ್ಲಾಗಲೇ ನಡೆದೇ ಇರುತ್ತೆ ಅಲ್ವಾ? ಹಾಗಿದ್ರೆ ಈವಾಗ ಡ್ರೆಸ್ ಬಗ್ಗೆನೂ ಗಮನ ಹರಿಸಬೇಕು ತಾನೆ? ಈ ಬಾರಿ ಹಬ್ಬಕ್ಕೆ ಯಾವ ರೀತಿ ರೆಡಿಯಾಗೋದು ಎಂದು ನೀವು ಯೋಚನೆ ಮಾಡ್ತಿದ್ರೆ, ಇಲ್ಲಿದೆ ನಿಮಗಾಗಿ ಸಲಹೆಗಳು.
ಸಾಂಪ್ರದಾಯಿಕ ಸೀರೆ (Traditional Saree)
ಹಬ್ಬದ ಉತ್ಸಾಹವನ್ನು ಪ್ರತಿಬಿಂಬಿಸುವ ರೋಮಾಂಚಕ ಬಣ್ಣಗಳು ಮತ್ತು ಅದ್ಭುತ ವಿನ್ಯಾಸಗಳನ್ನು ಹೊಂದಿರುವ ಸೀರೆಯನ್ನು ಆಯ್ಕೆ ಮಾಡಿ. ಮ್ಯಾಚಿಂಗ್ ಬ್ಲೌಸ್ ಮತ್ತು ಸಾಂಪ್ರದಾಯಿಕ ಆಭರಣಗಳು ನಿಮ್ಮ ಲುಕ್ ಅನ್ನು ಪರ್ಫೆಕ್ಟ್ ಆಗಿಸುತ್ತೆ.
ಕಾಂಜೀವರಮ್ ಸೀರೆ (Kanjivaram saree)
ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಕಾಂಜೀವರಂ ಸೀರೆ ಸುಂದರವಾಗಿ ಕಾಣಿಸುತ್ತೆ. ನೀವು ಇದರಲ್ಲಿ ಕೆಂಪು ಮತ್ತು ಗೋಲ್ಡ್ ಕಾಂಬಿನೇಶನ್, ಹಳದಿ ಮತ್ತು ಪಿಂಕ್ ಕಾಂಬಿನೇಶನ್, ಗೋಲ್ಡ್ ಮತ್ತು ಪರ್ಪಲ್ ಕಾಂಬಿನೇಶನ್ ಆಯ್ಕೆ ಮಾಡಿದ್ರೆ ಇನ್ನೂ ಚೆನ್ನಾಗಿ ಕಾಣಿಸುತ್ತೆ.
ಅನಾರ್ಕಲಿ ಸೂಟ್ (Anarkali Suit)
ಅನಾರ್ಕಲಿ ಸೂಟ್ ಗಳು ಹಬ್ಬದ ಸಂದರ್ಭಗಳಿಗೆ ಧರಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಹೆವಿ ಲುಕ್ ಗಾಗಿ ಕಸೂತಿ ಅಥವಾ ಮಿರರ್ ವರ್ಕ್ ಇರುವಂತಹ ಕೆಂಪು, ಕಿತ್ತಳೆ ಅಥವಾ ಹಳದಿಯಂತಹ ಬ್ರೈಟ್ ಕಲರ್ ಅನಾರ್ಕಲಿ ಸೂಟ್ ಆರಿಸಿ.
ಲಂಗ -ದಾವಣಿ (Half saree)
ಹೆಂಗಳೆಯರು ಈ ಬಾರಿ ಹಬ್ಬಕ್ಕೆ ಲಂಗ -ದಾವಣಿ ಟ್ರೈ ಮಾಡಿದ್ರೆ ಅದ್ಭುತವಾಗಿರುತ್ತೆ. ಯಾಕಂದ್ರೆ ಈ ಲುಕ್ ಹುಡುಗಿಯರಿಗೆ ಸಖತ್ತಾಗಿ ಕಾಣಿಸುತ್ತೆ, ಇದರ ಜೊತೆಗೆ ಉದ್ದ ಜಡೆ ಬಿಟ್ಟು, ಹೂವ ಮುಡಿದು, ಜುಮುಕಿ, ಓಲೆ ಧರಿಸಿದ್ರೆ, ಕೈಯಲ್ಲಿ ಗಾಜಿನ ಬಳೆ ತೊಟ್ರೆ ತುಂಬಾನೆ ಚೆನ್ನಾಗಿರುತ್ತೆ.
ಲೆಹೆಂಗಾ (Lehenga)
ಸಾಂಪ್ರದಾಯಿಕ ಮತ್ತು ಟ್ರೆಂಡಿ ಎರಡು ಮಿಕ್ಸ್ ಆಗಿರುವ ಲುಕ್ ಬಯಸುವವರಿಗೆ ಲೆಹೆಂಗಾ ಚೋಲಿ ಸೂಕ್ತ. ಹೆವಿ ಕಸೂತಿ ಮಾಡಿದ ಲೆಹೆಂಗಾವನ್ನು ವಿಭಿನ್ನ ಚೋಲಿ ಮತ್ತು ಹೊಂದಿಕೆಯಾಗುವ ದುಪಟ್ಟಾದೊಂದಿಗೆ ಜೋಡಿಸಿ. ಸುಂದರವಾಗಿ ಕಾಣುವಿರಿ.
ಕುರ್ತಾ ಜೊತೆಗೆ ಪಲಾಜೋ ಪ್ಯಾಂಟ್ (Kurta and Palazo)
ಪಲಾಜೋ ಪ್ಯಾಂಟ್ ನೊಂದಿಗೆ ಜೋಡಿಯಾಗಿ ಕುರ್ತಿಯನ್ನು ಧರಿಸಿ. ಹಬ್ಬದ ಪ್ರಿಂಟ್ ಗಳು ಅಥವಾ ಅಲಂಕಾರಗ ಹೊಂದಿರುವ ಕುರ್ತಿಗಳನ್ನು ಆಯ್ಕೆ ಮಾಡಿ, ಮತ್ತು ಸ್ಟೇಟ್ಮೆಂಟ್ ಇಯರಿಂಗ್ಸ್, ಜ್ಯುವೆಲ್ಲರಿ ಧರಿಸೋ ಮೂಲಕ ನಿಮ್ಮ ಲುಕ್ ಪೂರ್ಣಗೊಳಿಸಿ.