MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಇಂಥ ಫಿಲ್ಮ್‌ಗಳಲ್ಲಿ ಇನ್ನು ನಟಿಸಲ್ವಂತೆ ಮಿಲ್ಕಿ ಬ್ಯೂಟಿ ತಮನ್ನಾ!

ಇಂಥ ಫಿಲ್ಮ್‌ಗಳಲ್ಲಿ ಇನ್ನು ನಟಿಸಲ್ವಂತೆ ಮಿಲ್ಕಿ ಬ್ಯೂಟಿ ತಮನ್ನಾ!

ಇತ್ತೀಚಿನ ದಿನಗಳಲ್ಲಿ ತನ್ನ ಮಾದಕ ಲುಕ್‌ ಹಾಗೂ ಮಾದಕ ನಟನೆಯಿಂದಲೇ ಪ್ರಸಿದ್ಧಿ ಪಡೆದಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಭವಿಷ್ಯದ ದಿನಗಳಲ್ಲಿ ಕೆಲವೊಂದು ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದಾರೆ.

2 Min read
Author : Santosh Naik
Published : Oct 03 2023, 10:41 PM IST
Share this Photo Gallery
  • FB
  • TW
  • Linkdin
  • Whatsapp
113

ದಕ್ಷಿಣ ಭಾರತದ ಚಿತ್ರಗಳ ಮೂಲಕವೇ ಪ್ರಸಿದ್ಧಿ ಪಡೆದುಕೊಂಡ ತಾರೆ ತಮನ್ನಾ ಭಾಟಿಯಾ. ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಈಕೆ ದೊಡ್ಡ ಸ್ಟಾರ್‌.

213

ಇದರ ನಡುವೆ ಮಿಲ್ಕಿ ಬ್ಯೂಟಿ ಬಾಲಿವುಡ್‌ನಲ್ಲಿ ಹಲವು ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಅಲ್ಲಿ ಯಶಸ್ಸು ಕಾಣಲು ಮಾತ್ರ ತಮನ್ನಾ ಪರದಾಡುತ್ತಿದ್ದಾರೆ.

313

ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಬಾಲಿವಡ್‌ ಚಿತ್ರಗಳಿಗಿಂತ ಹೆಚ್ಚಾಗಿ ತಮನ್ನಾ ಭಾಟಿಯಾ ವೆಬ್‌ ಸಿರೀಸ್‌ಗಳಲ್ಲಿ ನಟನೆ ಮಾಡುತ್ತಿದ್ದಾರೆ. ವೆಬ್‌ ಸಿರೀಸ್‌ಗಳಲ್ಲಿ ಅವರ ಮಾದಕ ಸೀನ್‌ಗಳು ವೈರಲ್‌ ಆಗಿವೆ.

413

ಆದರೆ, ಇತ್ತೀಚೆಗೆ ತಮನ್ನಾ ಫಿಲ್ಮ್‌ಫೇರ್‌ ಮ್ಯಾಗಝೀನ್‌ಗೆ ನೀಡಿದ ಸಂದರ್ಶನ ವೈರಲ್‌ ಆಗಿದೆ. ಅದಕ್ಕೆ ಕಾರಣ, ಈ ಸಂದರ್ಶನದಲ್ಲಿ ಅವರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಆಡಿದ ಮಾತುಗಳು.

513

ದಕ್ಷಿಣ ಭಾರತದ ಚಿತ್ರರಂಗ ಹೆಚ್ಚಾಗಿ ಕಮರ್ಷಿಯಲ್‌ ಸಿನಿಮಾಗಳನ್ನು ಮಾತ್ರವೇ ಮಾಡುತ್ತದೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೂ ಹಾಗೂ ಸಿನಿಮಾಗೂ ಸಂಬಂಧವೇ ಇರೋದಿಲ್ಲ ಎಂದು ತಮನ್ನಾ ಹೇಳಿದ್ದಾರೆ.

613

ಕೆಲವೊಂದು ವೇಳೆ ಸ್ವತಃ ನಾನೇ ನಿರ್ದೇಶಕರಿಗೆ ನನ್ನ ಪಾತ್ರಗಳನ್ನು ಇನ್ನಷ್ಟು ಟೋನ್‌ ಮಾಡುವಂತೆ, ಇನ್ನಷ್ಟು ಹರಿತವಾಗಿರುವಂತೆ ಕೇಳಿಕೊಳ್ಳುತ್ತೇನೆ ಎಂದು ತಮನ್ನಾ ತಿಳಿಸಿದ್ದಾರೆ.

713

ಪುರುಷತ್ವವನ್ನು ಸಂಭ್ರಮಿಸುವ ಚಿತ್ರಗಳಲ್ಲಿ ನಟಿಸದೇ ಇರುವಂಥ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದೇನೆ. ಇಂಥ ಫಿಲ್ಮ್‌ಗಳಲ್ಲಿ ಇನ್ನು ನಟಿಸಲೇ ಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದಿದ್ದಾರೆ.

813

ಇದೇ ವೇಳೆ ತಾವು ಬಾಲಿವುಡ್‌ನಲ್ಲಿ ಯಶಸ್ವಿ ಹೀರೋಯಿನ್‌ ಅಲ್ಲ ಎನ್ನುವುದನ್ನು ತಮನ್ನಾ ಭಾಟಿಯಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

913

ನಾನು ಬಾಲಿವುಡ್‌ನಲ್ಲಿ ಯಶಸ್ವಿ ಹೀರೋಯಿನ್‌ ಅಲ್ಲ. ಆದರೆ ನಾನು ಅದನ್ನು ನನ್ನ ವೈಯಕ್ತಿಕ ವೈಫಲ್ಯ ಎಂದು ಎಂದಿಗೂ ನೋಡುವುದಿಲ್ಲ ಏಕೆಂದರೆ ಚಿತ್ರವು ಅನೇಕ ಜನರ ಕೊಡುಗೆಯಾಗಿದೆ ಮತ್ತು ನನ್ನದಲ್ಲ ಎಂದಿದ್ದಾರೆ.

1013

ನನ್ನ ಯಶಸ್ಸು ಮತ್ತು ವೈಫಲ್ಯಗಳಿಂದ ನಾನು ಸ್ವಲ್ಪ ನಿರ್ಲಿಪ್ತನಾಗಿದ್ದೇನೆ. ನಾನು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ' ಎಂದು ತಮನ್ನಾ ಸ್ಪಷ್ಟಪಡಿಸಿದ್ದಾರೆ.

1113


ತಮನ್ನಾ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಆಕ್ರಿ ಸಚ್‌ ಎನ್ನುವ ವೆಬ್‌ ಸಿರೀಸ್‌ನಲ್ಲಿ, ಈ ನಡುವೆ ಅವರ ಬಾಂದ್ರಾ ಮಲಯಾಳಂ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗುತ್ತಿದೆ.

1213

ಅದರೊಂದಿಗೆ ಸಿ. ಸುಂದರ್‌ ಅವರ ಅರಮನೈ-4 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಹಿಂದಿ ಚಿತ್ರ ವೇದಾದಲ್ಲೂ ಅವರು ಹೀರೋಯಿನ್‌ ಆಗಿದ್ದಾರೆ. 

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

1313

ಬಾಂದ್ರಾ ತಮನ್ನಾ ಭಾಟಿಯಾ ಅವರ ಮೊದಲ ಮಲಯಾಳಂ ಸಿನಿಮಾ ಆಗಿದ್ದು, ಅರುಣ್‌ ಗೋಪಿ ಇದರ ನಿರ್ದೇಶಕರಾಗಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

ನಟ ವಿಜಯ್​ ಜೊತೆ ಸೆಕ್ಸ್​ ಕುರಿತು ಹೇಳಿದ್ದ ತಮನ್ನಾಗೆ ಮದ್ವೆ ಬಗ್ಗೆ ಕೇಳಿದ್ರೆ ಹೀಗೆ ಹೇಳಿದ್ರು...

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ತಮನ್ನಾ ಭಾಟಿಯಾ

Latest Videos
Recommended Stories
Recommended image1
Amruthadhaare Serial: ಅವ್ರೇ ನನ್​ ಗಂಡ ಎಂದ ಭೂಮಿಕಾ- ಬೆಚ್ಚಿಬಿದ್ದ ವಠಾರದ ಮಂದಿ!
Recommended image2
ರಾಜಕೀಯ ನನಗೆ ಕೊನೆಯಾಗಲಿ ಅಂತ ಅಪ್ಪ ಹೇಳಿದ್ದಾರೆ: ಜಮೀರ್‌ ಅಹ್ಮದ್‌ ಪುತ್ರ ಝೈದ್‌ ಖಾನ್!
Recommended image3
'ನಮ್ಮ ಕಾಲದ ಧೀರ ಮಹಿಳೆ..' ಸುನೀತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್‌ ರಾಜ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved