MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಅಮಿತಾಬ್ ಪುತ್ರಿ ಶ್ವೇತಾ ಜೊತೆ ಮದುವೆಗೂ ಮೊದಲೇ ಇತ್ತು ಅಳಿಯ ನಿಖಿಲ್ ನಂದಾಗೆ ಬಾಲಿವುಡ್‌ ಲಿಂಕ್

ಅಮಿತಾಬ್ ಪುತ್ರಿ ಶ್ವೇತಾ ಜೊತೆ ಮದುವೆಗೂ ಮೊದಲೇ ಇತ್ತು ಅಳಿಯ ನಿಖಿಲ್ ನಂದಾಗೆ ಬಾಲಿವುಡ್‌ ಲಿಂಕ್

Amitabh Bachchan, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹೀಗೆ ನಟನಟಿಯರಿಂದಲೇ ಕೂಡಿರುವ ಬಚ್ಚನ್ ಕುಟುಂಬದ ಅಳಿಯನಾಗಿರುವ Nikhil Nanda ಅವರು ಬಹುತೇಕ ಪ್ರಚಾರದಿಂದ ದೂರ ಉಳಿದಿರುವ ವ್ಯಕ್ತಿ. ಆದರೆ ಪ್ರಚಾರದಿಂದ ದೂರ ಉಳಿದ ಮಾತ್ರಕ್ಕೆ ಅವರೇನು ಸಾಮಾನ್ಯರಲ್ಲ, ಸುಮಾರು 7 ಸಾವಿರ ಕೋಟಿ ಬೃಹತ್ ಸಂಸ್ಥೆಯ ಒಡೆಯ.

2 Min read
Anusha Kb
Published : Dec 17 2023, 06:39 PM IST| Updated : Dec 17 2023, 06:51 PM IST
Share this Photo Gallery
  • FB
  • TW
  • Linkdin
  • Whatsapp
111

1997ರಲ್ಲಿ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಅವರನ್ನು ಮದುವೆಯಾದ ನಿಖಿಲ್ ನಂದಾ ಮಾಧ್ಯಮಗಳಲ್ಲಿ ಉದ್ಯಮಿ ಅನ್ನೋದಕ್ಕಿಂತ ಹೆಚ್ಚಾಗಿ ಅಮಿತಾಭ್ ಬಚ್ಚನ್ ಅಳಿಯನೆಂದೇ ಗುರುತಿಸಲ್ಪಟ್ಟಿದ್ದಾರೆ. ಆದರೆ ಅವರು ದೇಶದ ಓರ್ವ ಖ್ಯಾತ ಉದ್ಯಮಿ ಹಾಗೂ ಮತ್ತೊಂದು ಬಾಲಿವುಡ್ ಕುಟುಂಬದ ಕುಡಿ. 

211

ಮತ್ತೊಂದು ಬಾಲಿವುಡ್ ಕುಟುಂಬವಾಗಿರುವ ರಣ್‌ಬೀರ್ ಕಪೂರ್ ಕುಟುಂಬಕ್ಕೆ ಹತ್ತಿರದ ಸಂಬಂಧಿ ಈ ನಿಖಿಲ್ ನಂದಾ, ಅಮಿತಾಭ್ ಬಚ್ಚನ್‌ ಪುತ್ರಿ ಶ್ವೇತಾ ಬಚ್ಚನ್ ವಿವಾಹವಾಗಿ ಬಚ್ಚನ್ ಮನೆಯ ಅಳಿಯನಾದ ನಿಖಿಲ್ ನಂದಾ ಅವರು ಎಸ್ಕಾರ್ಟ್ ಕುಬೊಟಾ ಲಿಮಿಟೆಡ್‌ನ  ಛೇರ್‌ಮ್ಯಾನ್ ಆಗಿದ್ದಾರೆ. 

311

ಭಾರತದ ಕೃಷಿ ಕ್ಷೇತ್ರದಲ್ಲಿ ಅಚ್ಚಳಿಯ ಹೆಸರಾಗಿರುವ ಈ ಕೃಷಿ ವಾಹನ ಸಂಸ್ಥೆಯ ಪ್ರಸ್ತುತ ಮಾಲೀಕರಾಗಿದ್ದಾರೆ ನಿಖಿಲ್ ನಂದಾ, ಇವರ ತಂದೆ ಹರ್ ಪ್ರಸಾದ್ ನಂದಾ ಹಾಗೂ ಯುದಿ ನಂದಾ ಅವರು 1944ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಪ್ರಸ್ತುತ ಈ ಸಂಸ್ಥೆ ಜಾಗತಿಕವಾಗಿ ಹಬ್ಬಿದೆ.

411

ಒಟ್ಟು 40 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಆಟೋಮೊಬೈಲ್ ಸಂಸ್ಥೆಯೂ ಕೋಟ್ಯಾಂತರ ಬೆಲೆ ಬಾಳುತ್ತಿದ್ದು, ನಿಖಿಲ್ ನಂದಾ ಅವರು ದೇಶದ ಉತ್ತಮ ದೂರದೃಷ್ಟಿತ್ವ ಹೊಂದಿರುವ ಉದ್ಯಮಿ ಎನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ  ಕೃಷಿ ಯಂತ್ರೋಪಕರಣ ಉದ್ಯಮದಲ್ಲಿ

511

2021ರಲ್ಲಿ ನಿಖಿಲ್ ನಂದಾ ಅವರಿಗೆ ಬ್ಯುಸಿನೆಸ್ ಟುಡೇ ಮಾಧ್ಯಮವೂ ಬೆಸ್ಟ್ ಸಿಇಒ ಪ್ರಶಸ್ತಿ ನೀಡಿ ಗೌರವಿಸಿದೆ.  ಹಾಗೆಯೇ 2001ರಲ್ಲಿ  ಜಾಗತಿಕ ಆರ್ಥಿಕ ಫಾರಂ ಐವರು ಭಾರತೀಯರನ್ನು ಜಾಗತಿಕ ನಾಯಕರೆಂದು ಗುರುತಿಸಿದ್ದು, ಅದರಲ್ಲಿ ನಿಖಿಲ್ ನಂದಾ ಕೂಡಾ ಒಬ್ಬರು. ಆದರೂ ಅವರು ಮಾತ್ರ ಅಮಿತಾಭ್ ಬಚ್ಚನ್ ಅಳಿಯನಾಗಿ ಶ್ವೇತಾ ಬಚ್ಚನ್ ಪತಿಯಾಗಿ ಮಾತ್ರ ಮುನ್ನೆಲೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. 

611

1974ರಲ್ಲಿ ನವದೆಹಲಿಯಲ್ಲಿ ರಾಜನ್ ನಂದಾ ಹಾಗೂ ರೀತು ನಂದಾ ಮಗನಾಗಿ ಜನಿಸಿದ ನಿಖಿಲ್ ನಂದಾ ಅವರು ಓರ್ವ ಹೊಸತನವನ್ನು ಬಯಸುವ ಉದ್ಯಮಿಯಾಗಿದ್ದಾರೆ. ಡೆಹ್ರಾಡೂನ್‌ನಲ್ಲಿ  ಪ್ರಾಥಮಿಕ ಶಿಕ್ಷಣ ಮುಗಿಸಿರುವ ನಿಖಿಲ್ ನಂದ ನಂತರ ಯುಎಸ್‌ಎಯ ಪೆನ್ಸಿಲ್ವೇನಿಯಾ ವಿವಿಯ ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಮಾಡಿದ್ದಾರೆ. ಶಿಕ್ಷಣದ ನಂತರ ಇಂಗ್ಲೆಂಡ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ ನಿಖಿಲ್ ಭಾರತಕ್ಕೆ ಮರಳಿದರು

711

ಆರಂಭದಲ್ಲಿ ಯಮಹಾ ಮೋಟರ್ ವಾಹನ ಸಂಸ್ಥೆ ಸೇರಿದ ಅವರು ಅಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಇದಾದ ನಂತರ 2005 ರಲ್ಲಿ ಅವರು ತಮ್ಮದೇ ಕುಟುಂಬದ ಎಸ್ಕಾರ್ಟ್ ಲಿಮಿಟೆಡ್‌ಗೆ ಮರಳಿದ ಅವರು ಅಲ್ಲಿ ತಮ್ಮ 31ನೇ ವಯಸ್ಸಿಗೆ ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಂಸ್ಥೆಯನ್ನು ಬೇರೆಯದ್ದೇ ಹಂತಕ್ಕೆ ಕೊಂಡೊಯ್ದ ಅವರು 7014 ಕೋಟಿ ನಿವ್ವಳ ಮೊತ್ತಕ್ಕೆ ಸಂಸ್ಥೆಯನ್ನು ಏರಿಸಿದರು. ಪ್ರಸ್ತುತ ಈ ಸಂಸ್ಥೆ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತಿದೆ. 

811

1997ರಲ್ಲಿ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಅವರನ್ನು ಮದುವೆಯಾದ ನಿಖಿಲ್ ನಂದಾ ಮಾಧ್ಯಮಗಳಲ್ಲಿ ಉದ್ಯಮಿ ಅನ್ನೋದಕ್ಕಿಂತ ಹೆಚ್ಚಾಗಿ ಅಮಿತಾಭ್ ಬಚ್ಚನ್ ಅಳಿಯನೆಂದೇ ಗುರುತಿಸಲ್ಪಟ್ಟಿದ್ದಾರೆ. ಅಮಿತಾಭ್ ಪುತ್ರಿಯ ಮದುವೆಯಿಂದಲೇ ಅವರಿಗೆ ಬಾಲಿವುಡ್‌ ಜೊತೆ ನಂಟಿದೆ ಎಂದು ಸಾಮಾನ್ಯವಾಗಿ ಗೊತ್ತು. ಆದರೆ ನಿಖಿಲ್ ನಂದಾ ಇನ್ನೊಂದು ಬಾಲಿವುಡ್‌ ಕುಟುಂಬದ ಕುಡಿ ಎಂಬುದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ.

911

ನಿಖಿಲ್ ಅವರ ತಾಯಿ ರೀತು ನಂದಾ ಅವರು ರಣ್‌ಬೀರ್ ಕಾಪೂರ್ ಅಜ್ಜ ರಾಜ್ ಕಪೂರ್ ಹಾಗೂ ಕರೀಷ್ಮಾ ಕಪೂರ್ ಅವರ ಮಗಳಾಗಿದ್ದು, ಹೀಗಾಗಿ ಒಂದು ಕಾಲದ ಹಿಂದಿ ಚಿತ್ರರಂಗದ ಶೋ ಮ್ಯಾನ್‌ ಎನಿಸಿದ ರಾಜ್‌ ಕಪೂರ್ ಅವರ ಮೊಮ್ಮಗ ಎನಿಸಿದ್ದಾರೆ

1011

ನಿಖಿಲ್ ನಂದಾ. ನಿಖಿಲ್ ನಂದಾ ಅವರ ಅಮ್ಮ ರೀತು ನಂದಾ ಅವರ ಒಡಹುಟ್ಟಿದವರೇ ರೀಮಾ ಕಪೂರ್, ರಾಜೀವ್ ಕಪೂರ್, ರಣಧೀರ್ ಕಪೂರ್ ಹಾಗೂ ರಿಷಿ ಕಪೂರ್, ಹೀಗಾಗಿ ನಿಖಿಲ್ ಅವರಿಗೆ ರಿಷಿ ಕಪೂರ್ ಕುಟುಂಬದೊಂದಿಗೆ ಉತ್ತಮವಾದ ಒಡನಾಟವಿದೆ. 

1111

ನಿಖಿಲ್ ನಂದಾ ಅವರ ತಾಯಿಯ ಕಡೆಯಿಂದಾಗಿ ರಣಬೀರ್ ಕಪೂರ್, ಕರೀಷ್ಮಾ ಕಪೂರ್, ಕರೀನಾ ಕಪೂರ್ ಖಾನ್ ಅರ್ಮನ್ ಜೈನ್ ಅದರ್ ಜೈನ್ ಅವರು ನಿಖಿಲ್‌ಗೆ ಸೋದರ ಸಂಬಂಧಿಗಳಾಗಿದ್ದಾರೆ. ಶ್ವೇತಾ ಬಚ್ಚನ್ ಜೊತೆ ವಿವಾಹದ ನಂತರ ಇಬ್ಬರು ಮಕ್ಕಳನ್ನು ಶ್ವೇತಾ-ನಿಖಿಲ್ ನಂದಾ ಜೋಡಿ ಹೊಂದಿದ್ದಾರೆ. ಮೊದಲ ಪುತ್ರಿ ನವ್ಯಾ ನವೇಲಿ ಅಪ್ಪನಂತೆ ಉದ್ಯಮಿಯಾಗಿ ಫೇಮಸ್ ಆಗಿದ್ದರೆ, ಪುತ್ರ ಅಗಸ್ತ್ಯ ನಂದಾ ಇತ್ತೀಚೆಗೆ ದಿ ಆರ್ಕೀಸ್ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಮೊದಲ ಡೆಬ್ಯುಟ್ ನೀಡಿದ್ದಾರೆ.  

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಅಮಿತಾಭ್ ಬಚ್ಚನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved