ಮದುಮಿತಾ-ಶಿವಬಾಲಾಜಿ ಲವ್ ಸ್ಟೋರಿ: ಜಾತಕದಲ್ಲಿದ್ದ ದೋಷದಿಂದ ಏನೆಲ್ಲಾ ಆಯ್ತು..!?
ಜಾತಕದಲ್ಲಿ ದೋಷ ಇದ್ದಿದ್ದರಿಂದ ಪ್ರಿಯತಮನಿಂದ ದೂರಾದ ನಟಿ ಮಧುಮಿತಾ, ಆಮೇಲೆ ಅವರನ್ನೇ ಮದುವೆಯಾದ ಬಗ್ಗೆ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

Madhumita - Shiva Balaji Love Story
ಪ್ರೀತಿ ಮಾಡುವಾಗ ಜಾತಕ ನೋಡಲ್ಲ. ಆದ್ರೆ ಮದುವೆ ಅಂದ್ರೆ ಜಾತಕ, ನಕ್ಷತ್ರ ಅಂತ ಜ್ಯೋತಿಷಿಗಳನ್ನ ಹುಡುಕೋದು ಸಹಜ. ಆಗ ಜಾತಕ ಸರಿಯಿಲ್ಲ ಅಂದ್ರೆ ಏನಾಗುತ್ತೆ? ಮದುವೆ ಆದ್ರೆ ತಂದೆ-ತಾಯಿಗೆ ಅಪಾಯ ಅಂದ್ರೆ? ಇಂಥದ್ದೊಂದು ಪ್ರೇಮಕಥೆಯೇ ಕಾಲಿವುಡ್ ನಟಿ ಮಧುಮಿತಾ ಮತ್ತು ನಟ ಶಿವ ಬಾಲಾಜಿ ಅವರದು! ೨೦೦೯ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳಿಗೆ ತಂದೆ-ತಾಯಿಯಾಗಿರೋ ಈ ಜೋಡಿಯ ಪ್ರೇಮಕಥೆ ಈಗ ವೈರಲ್ ಆಗ್ತಿದೆ.
ನಟಿ ಮಧುಮಿತಾ ಪ್ರೇಮಕಥೆ
'ಇಂಗ್ಲಿಷ್‌ಕಾರನ್' ಚಿತ್ರದಲ್ಲಿ ನಟಿಸುವಾಗ ಇಬ್ಬರಿಗೂ ಪ್ರೀತಿ ಶುರುವಾಯ್ತು. ೨೦೦೫ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಚಿತ್ರೀಕರಣದ ವೇಳೆ ಇಬ್ಬರಿಗೂ ಪ್ರೀತಿ ಚಿಗುರಿತು. ನಂತರ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ ಪ್ರೀತಿಸುತ್ತಿರುವುದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ, ಮನಸ್ಸಿನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದು ಗೊತ್ತಿತ್ತು. ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಆದರೆ ಎಲ್ಲಾ ಪ್ರೀತಿಯೂ ಸುಲಭವಾಗಿ ಗೆಲ್ಲುವುದಿಲ್ಲ. ಈ ಜೋಡಿಗೂ ಒಂದು ಅಡ್ಡಿ ಬಂತು. ಅದೂ ಜಾತಕದಲ್ಲಿ!
ಜಾತಕದಿಂದ ನಿಂತ ಮದುವೆ
ಕಾರಣ ಮಧುಮಿತಾ ಅವರ ಜಾತಕ! ಅವರನ್ನು ಮದುವೆಯಾದರೆ ತನ್ನ ತಾಯಿ ತೀರಿಕೊಳ್ಳುತ್ತಾರೆ ಎಂದು ಜಾತಕದಲ್ಲಿ ಇತ್ತಂತೆ! ಇಬ್ಬರ ಜಾತಕವೂ ಹೊಂದಿಕೆಯಾಗಲಿಲ್ಲ ಎಂದು ಶಿವ ಬಾಲಾಜಿ ಮದುವೆಯನ್ನು ನಿಲ್ಲಿಸಿದರು! ಇದನ್ನು ಮಧುಮಿತಾ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. 'ನಾವು ೪ ವರ್ಷ ಪ್ರೀತಿಸಿದೆವು. ಆದರೆ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಲಿಲ್ಲ. ಮದುವೆಯಾಗಲು ನಿರ್ಧರಿಸಿದೆವು. ಬಾಲಾಜಿ ಮದುವೆಗೆ ತುಂಬಾ ಉತ್ಸುಕರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಫೋನ್ ಮಾಡಿ, 'ನಮಗೆ ಹೊಂದಾಣಿಕೆಯಿಲ್ಲ. ಜಾತಕ ಸರಿಯಿಲ್ಲ, ಮದುವೆಯಾದರೆ ನನ್ನ ತಾಯಿ ತೀರಿಕೊಳ್ಳುತ್ತಾರಂತೆ' ಎಂದರು.
ಒಂದೂವರೆ ವರ್ಷ ದೂರ
ಇದನ್ನು ಕೇಳಿ ನನಗೆ ಆಘಾತವಾಯಿತು. ಏನು ಹೇಳಬೇಕೆಂದೇ ತಿಳಿಯಲಿಲ್ಲ. ಅವರನ್ನು ನನ್ನ ಗಂಡ ಎಂದು ಒಪ್ಪಿಕೊಂಡಿದ್ದೆ. ಆದರೆ ಅವರು ಗೆಳೆಯರಾಗಿರೋಣ ಎಂದರು' ಎಂದು ಮಧುಮಿತಾ ಹೇಳಿದರು. 'ನಂತರ ಒಂದೂವರೆ ವರ್ಷ ದೂರ ಇದ್ದೆವು. ಮತ್ತೆ ಹಿರಿಯರನ್ನು ಒಪ್ಪಿಸಿ ಶಿವ ಬಾಲಾಜಿ ಮದುವೆಯಾದರು. ನಮ್ಮ ಮನೆಯಲ್ಲಿ ಜಾತಕವನ್ನು ದೊಡ್ಡದಾಗಿ ಪರಿಗಣಿಸುವುದಿಲ್ಲ. ಆದರೆ ಅವರ ಮನೆಯಲ್ಲಿ ಜಾತಕವನ್ನು ನಂಬುತ್ತಾರೆ. ಒಂದೂವರೆ ವರ್ಷದ ನಂತರ ಮತ್ತೆ ಒಂದಾದೆವು. ಮತ್ತೆ ಜಾತಕ ನೋಡಿದಾಗ ಯಾವುದೇ ದೋಷವಿಲ್ಲ ಎಂದು ಜ್ಯೋತಿಷಿಗಳು ಹೇಳಿದರು. ಹಾಗಾಗಿ ಮದುವೆಯಾಗಿದೆವು' ಎಂದರು.