'ನೀವು ಸೈಲಂಟಾಗಿರಬೇಕು, ಇಲ್ಲವಾದರೆ ಇಂಜಕ್ಷನ್ ಕೊಟ್ಟು ಮಲಗಿಸಬೇಕಾಗ್ತದೆ'

First Published 15, Aug 2020, 10:28 PM

ಮುಂಬೈ(ಆ. 15) ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಕದಡಿದ ಕೊಳವಾಗಿದೆ. ಒಬ್ಬರ ಮೇಲೆ ಒಬ್ಬರು ಹೊಸ ಹೊಸ ಆರೋಪ ಮಾಡುತ್ತಲೇ ಇದ್ದಾರೆ. ಅದಕ್ಕೆ ರೆಕ್ಕೆ ಪುಕ್ಕಗಳು ಕಟ್ಟಿಕೊಳ್ಳುತ್ತಿವೆ.

ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆಗೆ ಮಹೇಶ್‌ ಭಟ್‌ಗೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಇತ್ತು ಎಂಬುದು ದಾಖಲಾಗಿತ್ತು. ಸುಶಾಂತ್ ಸಾವಿನ ತನಿಖೆ ಒಂದು ಕಡೆ ನಡೆಯುತ್ತಿದೆ. ಈಈನಡುವೆ ಮತ್ತೊಂದು ಬ್ರೇಕಿಂಗ್ ಬಾಲಿವುಡ್ ನಿಂದ ಬಂದಿದೆ.

ಅವರ ಇನ್ನೊಂದು ಮುಖದ ಬಗ್ಗೆ ಕಂಗನಾ ರಣಾವತ್‌ ಮುಂತಾದವರು ಮಾಹಿತಿ ಹೊರಹಾಕುತ್ತಿದ್ದಾರೆ. ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜಿಯಾ ಖಾನ್‌ ತಾಯಿ ರಬಿಯಾ ಖಾನ್‌ ಒಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

ಬಾಲಿವುಡ್‌ನಲ್ಲಿ ಆಗತಾನೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ನಟಿ ಜಿಯಾ ಖಾನ್‌ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವು ಅನುಮಾನಾಸ್ಪದ ಆಗಿತ್ತು. ಜಿಯಾ ಸಾವಿಗೆ ಅವರ ಬಾಯ್‌ಫ್ರೆಂಡ್‌ ಸೂರಜ್‌ ಪಾಂಚೋಲಿ ಕಾರಣ ಎಂದು ಆರೋಪಿಸಲಾಗಿತ್ತು. ಇದು ಒಂದು ಮುಖದ ಕತೆ.. ಆದರೆ ಇನ್ನೊಂದು ಮುಖ ಬೇರೆ ಇದೆ.

ಜಿಯಾ ಅವರ ಅಂತ್ಯ ಸಂಸ್ಕಾರದ ದಿನ ನಿರ್ಮಾಪಕ ಮಹೇಶ್‌ ಭಟ್ ಅವರು ಜಿಯಾ ತಾಯಿಗೆ ಬೆದರಿಕೆ ಹಾಕಿದ್ದರು ಎಂಬ ಮಾತು ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಜಿಯಾ ತಾಯಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.

ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ರಬಿಯಾ ಖಾನ್‌ ಹೋರಾಟ ಆರಂಭಿಸಿದ್ದರು. ಆದರೆ ಅವರಿಗೆ ಮಹೇಶ್‌ ಭಟ್‌ ಬೆದರಿಕೆ  ಹಾಕಿದ್ದರು ಎಂದು ರಬಿಯಾ ಹೇಳಿದ್ದಾರೆ. 'ನೀವು ಸುಮ್ಮನೆ ಇರಿ,, ಇಲ್ಲವಾದರೆ ನಿಮ್ಮನ್ನು ಇಂಜೆಕ್ಷನ್ ಕೊಟ್ಟು ಮಲಗಿಸಬೇಕಾಗುತ್ತದೆ'  ಎಂದು ಮಹೇಶ್ ಭಟ್ ಬೆದರಿಕೆ ಹಾಕಿದ್ದರು ಎಂಬ ಅಂಶವನ್ನು ಸಂದರ್ಶನದಲ್ಲಿ ಹೇಳಿದ್ದಾರೆ.

ಮಗಳ ಸಾವಿನ ತನಿಖೆಗೆ ಸಲ್ಮಾನ್ ಖಾನ್ ನಿರಂತರವಾಗಿ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ರಬಿಯಾ ಖಾನ್‌ ಅನೇಕ ಸಾರಿ ಹೇಳಿಕೊಂಡಿದ್ದರು. ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ , ಇದೊಂದು ಕೊಲೆ, ಬಾಲಿವುಡ್ ಮಾಫಿಯಾ ಎಲ್ಲವನ್ನು ನಿಯಂತ್ರಣ ಮಾಡುತ್ತಿದೆ. ನನ್ನ ಮಗಳ ವಿಚಾರದಲ್ಲಿಯೂ ಆಗಿದ್ದು ಇದೆ. ಪೊಲೀಸರು ನಡೆದುಕೊಳ್ಳುತ್ತಿರವ ರೀತಿ ನೋಡಿ ನನ್ನ ಮಗಳ ಸಾವಿನ ವಿಚಾರದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ ಎಂದು ಖಾನ್ ನೊಂದು ನುಡಿದಿದ್ದಾರೆ.

loader