ಕೇರಳದ ಮೊದಲ ತೃತೀಯಲಿಂಗಿ RJ ಆತ್ಮಹತ್ಯೆ
- ಕೇರಳದ ಮೊದಲ ತೃತೀಯಲಿಂಗಿ ಆರ್‌ಜೆ ಆತ್ಮಹತ್ಯೆ
- ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾದ ಅನನ್ಯಾ
![article_image1](https://static-gi.asianetnews.com/images/01fb3qp529yrmwgtb52az6zj5s/1-png_380x351xt.jpg)
ಕೇರಳದ ಮೊದಲ ತೃತೀಯಲಿಂಗಿ ರೇಡಿಯೊ ಜಾಕಿ ಅನನ್ಯಾ ಕುಮಾರಿ ಅಲೆಕ್ಸ್ ತನ್ನ ಕೊಚ್ಚಿ ಫ್ಲ್ಯಾಟ್‌ನಲ್ಲಿ ಮೃತಪಟ್ಟಿದ್ದಾರೆ.
![article_image2](https://static-gi.asianetnews.com/images/01fb3qp7m3vekz8t45p1y0ctkv/2-png_380x347xt.jpg)
ಸಮುದಾಯದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಮೊದಲ ತೃತೀಯಲಿಂಗಿಯೂ ಹೌದು
ಕಲಾಮಸ್ಸೆರಿ ಪೊಲೀಸರ ಪ್ರಕಾರ, ಅನನ್ಯಾ ಅಪಾರ್ಟ್ಮೆಂಟ್ನ ಮಲಗುವ ಕೋಣೆಯೊಳಗೆ ನೇಣು ಹಾಕಿಕೊಂಡಿದ್ದಾರೆ
ಈ ಹಿಂದೆ, 28 ವರ್ಷದ ಈಕೆ 2020 ರಲ್ಲಿ ತನ್ನ ಲಿಂಗ ಶಸ್ತ್ರಚಿಕಿತ್ಸೆಯ ನಂತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಿದ್ದರು.
ಶಸ್ತ್ರಚಿಕಿತ್ಸೆಯ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಲ್ಲಲು ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.
ಶಸ್ತ್ರಚಿಕಿತ್ಸೆಯ ದೋಷಗಳು ಆರೋಗ್ಯದ ತೊಂದರೆಗಳಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ ಆಕೆಯ ಸಾವಿಗೆ ಆಕೆಯ ದೈಹಿಕ ತೊಂದರೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನನ್ಯಾರ ಆರಂಭದ ಮತ್ತು ನಂತರದ ಫೋಟೋ
ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಅನನ್ಯಾ ಅವರ ಸ್ನೇಹಿತರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ಕೊಲ್ಲಂ ಪೆರುಮಾನ್ ಮೂಲದ ಅನನ್ಯಾ ಕುಮಾರಿ ಅಲೆಕ್ಸ್, ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ತೃತೀಯಲಿಂಗಿ ಸಮುದಾಯದ ಮೊದಲ ವ್ಯಕ್ತಿ.
ಆದರೆ, ನಂತರ ಅವರು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿ (ಡಿಎಸ್‌ಜೆಪಿ) ಮುಖಂಡರಿಂದ ಮಾನಸಿಕ ಹಿಂಸೆ ಮತ್ತು ಕೊಲೆ ಬೆದರಿಕೆ ಆರೋಪಿಸಿ ನಾಮಪತ್ರ ಹಿಂತೆಗೆದುಕೊಂಡರು.