ಸುಹಾನ ಸೈಯದ್ ಬರ್ತ್ ಡೇಗೆ ಕವಿಯಾದ ಗಂಡ ನಿತಿನ್; ಕವನದಲ್ಲಿ ರಿವೀಲ್ ಆಯ್ತು ವಿಶೇಷ ಸಂಗತಿ!
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು, ಅವರ ಪತಿ ನಿತಿನ್ ಶಿವಾಂಶ್ ಸುಂದರವಾದ ಕವನವನ್ನು ಬರೆದು ಶುಭ ಕೋರಿದ್ದಾರೆ.

ಸುಹಾನ ಸೈಯದ್ ಬರ್ತ್ ಡೇ
ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ಹುಟ್ಟುಹಬ್ಬದ ಹಿನ್ನೆಲೆ ಪತಿ ನಿತಿಶ್ ಶಿವಾಂಶ್ ಕವಿಯಾಗಿದ್ದು, ಸುಂದರವಾದ ಕವನ ಬರೆದಿದ್ದಾರೆ. ಈ ಕವನದಲ್ಲಿ ವಿಶೇಷ ಸಂಗತಿಯೊಂದು ರಿವೀಲ್ ಆಗಿದೆ.
ನಮನ ನಮನ ಸಿರಿದೇವಿಗೆ
ಪತ್ನಿ ಸುಹಾನಾ ಜೊತೆಗಿನ ಫೋಟೋಗಳ ರೀಲ್ಸ್ ಮಾಡಿರುವ ನಿತಿನ್ ಶಿವಾಂಶ್ ಅವರು ಇದಕ್ಕೆ ಜೋಡಿ ಹಕ್ಕಿ ಸಿನಿಮಾದ "ನಮನ ನಮನ ಸಿರಿದೇವಿಗೆ" ಹಾಡು ಸೇರಿಸಿಕೊಂಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ಕವನ ಸಹ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಸುಹಾನಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ನಿತಿನ್ ಶಿವಾಂಶ್ ಕವನ
ತೆರೆ ಏರಲಿ ತೆರೆ ಬೀಳಲಿ, ನಾಟಕ ಸಾಗುತಲಿರಲಿ, ಕ್ಷಣ ಕ್ಷಣದ ಸಂಭ್ರಮವು ಮುತ್ತಾಗಿ ಪೋಣಿಸಲಿ.
ಸೋಲು-ಗೆಲುವಿನ ಪಾತ್ರಗಳು ನೂರಾರು ಬರಲಿ, ನಿನ್ನ ನಗುವಿನ ಅಲೆಗಳು ದಡವ ಸೇರಲಿ.
ಹಸಿರಾಗಲಿ ನಿನ್ನ ಬಾಳು, ಸಿಹಿಯಾಗಲಿ ನಿನ್ನ ನುಡಿ,ನಗುತಾ ಬಾಳು ನೀ ಸದಾ, ಹೂವಾಗಿ ಅರಳಲಿ ನಿನ್ನ ಹಾದಿ.
ಬಾಳ ಪಯಣದಲಿ ನೀನು ಸೂರ್ಯನಂತೆ ಪ್ರಜ್ವಲಿಸು, ನೂರಾರು ಕನಸುಗಳನು ನನಸಾಗಿಸಿ ನೀ ಮೆರೆಸು.
ಸಂತಸದಿ ತುಂಬಿರಲಿ ನಿನ್ನ ಮನ, ಉಲ್ಲಾಸದಿ ಪ್ರತಿಕ್ಷಣ. ಹುಟ್ಟು ಹಬ್ಬದ ಶುಭಾಶಯಗಳು
ವಿಶೇಷ ಸಂಗತಿ ರಿವೀಲ್!
ಪತ್ನಿಯನ್ನು ಗಂಡ ನಿಕ್‌ನೇಮ್ ಗಳಿಂದ ಕರೆಯುತ್ತಿರುತ್ತಾರೆ. ಹಾಗೆಯೇ ಪತ್ನಿಯೂ ಗಂಡನನ್ನು ವಿಶೇಷ ಹೆಸರಿನಿಂದ ಕರೆಯುತ್ತಿರುತ್ತಾರೆ. ನಿತಿನ್ ಹಂಚಿಕೊಂಡಿರುವ ಕವನದ ಕೊನೆಗೆ ಪತ್ನಿ ಸುಹಾನಾ ಅವರನ್ನು ಪ್ರೀತಿಯಿಂದ ಗುಬ್ಬಿ ಎಂದು ಕರೆಯುತ್ತಾರೆ ಎಂಬ ವಿಷಯ ರಿವೀಲ್ ಆಗಿದೆ.
ಇದನ್ನೂ ಓದಿ: ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
ಮಂತ್ರಮಾಂಗಲ್ಯ
ಸುಹಾನಾ ಮತ್ತು ನಿತಿನ್ ಶಿವಾಂಶ್ ಪ್ರೀತಿಸಿ ಮಂತ್ರಮಾಂಗಲ್ಯ ಕಲ್ಪನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇತ್ತೀಚೆಗೆ ಸುಹಾನಾ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಫೋಟೋಗಳು ಶೇರ್ ಮಾಡಿಕೊಂಡು ರಾಯರ ಪವಾಡದ ಬಗ್ಗೆ ತಿಳಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

