ಕ್ಯಾಮರಾ ಕ್ಲಿಕ್ಸ್: ಮಂಡ್ಯ ಪ್ರಚಾರದಲ್ಲಿ ನಿಖಿಲ್ ವಿವಿಧ ರೂಪಗಳು!
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದ ಮಂಡ್ಯ ಕ್ಷೇತ್ರ ಭಾರೀ ಕುತೂಹಲ ಮುಡಿಸಿದೆ. ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಅಖಾಡಕ್ಕಿಳಿದಿರುವುದರಿಂದ ಸಿಎಂ ಕುಮಾರಸ್ವಾಮಿಗೆ ತಮ್ಮ ಪುತ್ರ ನಿಖಿಲ್ ಗೆ ಗೆಲುವು ತಂದು ಕೊಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಒಂದೆಡೆ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ. ಇತ್ತ ಕುಮಾರಸ್ವಾಮಿ ಮಗನ ಪರ ಪ್ರಚಾರಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ನಿಖಿಲ್ ಕೂಡಾ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದು ಇದಕ್ಕಾಗಿ ವಿವಿಧ ರೂಪಗಳನ್ನೂ ಧರಿಸಿದ್ದಾರೆ. ಪ್ರಚಾರದ ವೇಳೆ ಎತ್ತಿನ ಗಾಡಿ ನಡೆಸುವುದು, ಭತ್ತ ನಾಟಿ ಹೀಗೆ ಹಲವಾರು ಕಸರತ್ತು ನಡೆಸಿದ್ದಾರೆ. ಇಂತಹ ಕೆಲ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.
19

ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕಣ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಮತದಾರ ಓಲೈಕೆಗಾಗಿ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ.

29
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ವಿರುದ್ಧ ಸ್ಪರ್ಧೆಗಿಳಿದಿರುವ ಸುಮಲತಾರನ್ನು ಸೋಲಿಸುವುದು ಕುಮಾರಸ್ವಾಮಿಗೂ ಈಗ ಚಾಲೆಂಜ್ ಆಗಿದೆ.

39
ಮತದಾರನ ಓಲೈಕೆಗಾಗಿ ನಿಖಿಲ್ ನಾನಾ ಯತ್ನಗಳನ್ನು ನಡೆಸುತ್ತಿದ್ದು, ತಾನೊಬ್ಬ ಜನ ಸಾಮಾನ್ಯ ಎಂಬುವುದನ್ನು ಪ್ರಚಾರದಲ್ಲಿ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ.

49
ಮನೆ ಮನೆಗೆ ತೆರಳಿ ನಿಖಿಲ್ ಮತ ಯಾಚಿಸುತ್ತಿದ್ದು, ತಾನು ಜನ ನಾಯಕ ಅಲ್ಲ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎನ್ನುವ ಮನವಿ ಮಾಡುತ್ತಿದ್ದಾರೆ.

59
ರೈತರ ಮನಗೆಲ್ಲಲು ನಿಖಿಲ್ ತಾವೇ ಖುದ್ದು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ.

69
ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವ ನಿಖಿಲ್ ಪ್ರತಿಯೊಬ್ಬ ಮತದಾರನ ಬಳಿ ತೆರಳಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

79
ಈ ನಡುವೆ ಟೆಂಪಲ್ ರನ್ ಕೂಡಾ ಮುಂದುವರೆದಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಅನುಗ್ರಹವನ್ನು ಪಡೆದಿದ್ದಾರೆ. ಸುಮಲತಾರಿಗೆ ಸಿಗದ ಬಸವಣ್ಣನ ಆಶೀರ್ವಾದ ನಿಖಿಲ್ ಪಡೆದಿದ್ದಾರೆ ಎಂಬುವುದು ಗಮನಾರ್ಹ.

89
ತಾನು ಒಂದು ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿರುವ ನಿಖಿಲ್ ಇತರ ಧರ್ಮದ ಮತದಾರರನ್ನು ಓಲೈಸಲೂ ಯತ್ನಿಸುತ್ತಿದ್ದಾರೆ.

99
ಒಟ್ಟಾರೆಯಾಗಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹಾಗೂ ನಿಖಿಲ್ ನಡುವಿನ ಫೈಟ್ ತಾರಕಕ್ಕೇರಿದ್ದು, ಮತದಾರ ಯಾರ ಪರವಾಗಿದ್ದಾರೆಂದು ಚುನಾವಣಾ ಫಲಿತಾಂಶ ಹೊರ ಬಿದ್ದ ಬಳಿಕವೇ ತಿಳಿಯಲಿದೆ.

Latest Videos