ಹಳದಿ ಸೇರೆ ಆಯ್ತು, ಈಗ ನೀಲಿ ಡ್ರೆಸ್ ಧರಿಸಿದ ಚುನಾವಣಾ ಸಿಬ್ಬಂದಿ ವೈರಲ್!

First Published 13, May 2019, 5:08 PM

ಕಳೆದೆರಡು ದಿನಗಳ ಹಿಂದೆ ಹಳದಿ ಸೀರೆಯುಟ್ಟ ಚುನಾವಣಾ ಅಧಿಕಾರಿಯೊಬ್ಬರ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಆರನೇ ಹಂತದ ಮತದಾನದ ನಡುವೆ ಮತ್ತೊಬ್ಬ ಮಹಿಳೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ನೀಲಿ ಬಟ್ಟೆ ಧರಿಸಿದ ಸುಂದರಿ ಯಾರು? ಇಲ್ಲಿದೆ ವಿವರ 

ಮೇ 12 ರಂದು ಲೋಕಸಭಾ ಚುನಾವಣೆಯ 6 ನೇ ಹಂತದ ಮತದಾನ ನಡೆಯಿತು. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಒಟ್ಟು 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ನಡುವೆ ನೀಲಿ ಡ್ರೆಸ್ ಧರಿಸಿ ಕೈಯ್ಯಲ್ಲಿ ಇವಿಎಂ ಹಿಡಿದಿದ್ದ ಮಹಿಳೆಯೊಬ್ಬರ ಫೋಟೋಗಳು ಇಂಟರ್ನೆಟ್ ನಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.

ಸದ್ಯ ಈ ಮಹಿಳೆಯ ಕುರಿತಾಗಿ ವೀಕ್ಷಕರು ಹಲವರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಚುನಾವಣಾ ಅಧಿಕಾರಿಯನ್ನು ನೇಮಿಸಲಾದ ಮತಗಟ್ಟೆಯಲ್ಲಿ ಶೇ. 100 ರಷ್ಟು ಮತದಾನ ನಡೆದಿದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಅಧಿಕಾರಿಯ ಡ್ರೆಸ್ಸಿಂಗ್ ಸ್ಟ್ರೈಲ್ ಕುರಿತಾಗಿ ಕಮೆಂಟ್ ನೀಡಿದ್ದಾರೆ.

ನೀಲಿ ಡ್ರೆಸ್ ಧರಿಸಿದ್ದ ಮಹಿಳೆ ಮಧ್ಯಪ್ರದೇಶದ ಭೋಪಾಲ ಲೋಕಸಭಾ ಕ್ಷೇತ್ರಕ್ಕೆ ನೇಮಿಸಲಾದ ಅಧಿಕಾರಿ ಎಂದು ಹೇಳಲಾಗಿದೆ. ಈ ಮಹಿಳೆ ಹಳದಿ ಸೀರೆಯುಟ್ಟಿದ್ದ ಅಧಿಕಾರಿಗೆ ಟಕ್ಕರ್ ನೀಡುವಂತಿದ್ದಾರೆ.

ಹಳದಿ ಸೀರೆಯುಟ್ಟು ಮಿಂಚಿದ ಮಹಿಳೆ ರೀನಾ ದ್ವಿವೇದಿ ಎಂದು ತಿಳಿದು ಬಂದಿತ್ತು. ಹಾಗಾದ್ರೆ ಈ ನೀಲಿ ಬಟ್ಟೆ ಧರಿಸಿದ ಸುಂದರಿ ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೂ ಉತ್ತರ ಲಭಿಸಿದೆ.

ಫೇಸ್ ಬುಕ್ ನಲ್ಲಿ ಲಭ್ಯವಾದ ಮಾಹಿತಿ ಅನ್ವಯ ಯೋಗೇಶ್ವರಿ ಕೆನರಾ ಬ್ಯಾಂಕ್ ಉದ್ಯೋಗಿ ಎಂದು ತಿಳಿದು ಬಂದಿದೆ ಹಾಗೂ ಮಧ್ಯಪ್ರದೇಶದ ಬೈತೂಲ್ ನಿವಾಸಿ.

ನೀಲಿ ಬಟ್ಟೆಯುಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿರುವ ಈ ಅಧಿಕಾರಿಯ ಹೆಸರು ಯೋಗೇಶ್ವರಿ. ಇವರು ಭೋಪಾಲ್ ನ ಗೋವಿಂದ ಪುರದ ITIನಲ್ಲಿ ನಿರ್ಮಿಸಲಾದ ಮತಗಟ್ಟೆಗೆ ನೇಮಕಗೊಂಡ ಅಧಿಕಾರಿ.

ಯೋಗೇಶ್ವರಿಯವರು ತಮ್ಮೊಂದಿಗೆ ನೇಮಕಗೊಂಡಿದ್ದ ಇನ್ನಿತರ ಅಧಿಕಾರಿಗಳೊಂದಿಗೆ EVM ಹಿಡಿದು ಪೋಲಿಮಗ್ ಬೂತ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಫೋಟೋ ಪತ್ರಕರ್ತ ಅಜಯ್ ಶರ್ಮಾ ಅವರ ಪೋಟೋ ಕ್ಲಿಕ್ಕಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಲಕ್ನೋ ಚುನಾವಣೆಯ ಮೊದಲು ರೀನಾ ದ್ವಿವೇದಿ ಫೋಟೋಗಳು ಭಾರೀ ವೈರಲ್ ಆಗಿದ್ದವು. ರೀನಾರವರು ಲಕ್ನೋವಿನ PWD ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಫೋಟೋ ಜರ್ನಲಿಸ್ಟ್ ಶುಭಂ ಬಂಸಲ್ ತಮ್ಮ ಕ್ಯಾಮರಾ ಕಣ್ಣಿನಲ್ಲಿ ರೀನಾರವರ ಫೋಟೋ ಸೆರೆ ಹಿಡಿದಿದ್ದರು.