ದೇಶದಲ್ಲಿ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿದ ಜಿಲ್ಲೆ ಯಾವುದು? ಜೈಪುರ, ಹೈದರಾಬಾದ್, ಬೆಂಗಳೂರು!
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಇಲಾಖೆ ಸಮೀಕ್ಷೆಯ ಪ್ರಕಾರ 2024ನೇ ಸಾಲಿನಲ್ಲಿ ಬರೋಬ್ಬರಿ 4.32 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಪದವಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಹಾಗಾದರೆ, ನಮ್ಮ ದೇಶದಲ್ಲಿ ಅತ್ಯಧಿಕ ಕಾಲೇಜುಗಳನ್ನು ಹೊಂದಿದ ಜಿಲ್ಲೆ ಯಾವುದು ಗೊತ್ತಾ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...
ದೇಶದಲ್ಲಿ ಅತ್ಯಧಿಕ ಕಾಲೇಜುಗಳನ್ನು ಹೊಂದಿದ ಜಿಲ್ಲೆಯ ಪೈಕಿ 10ನೇ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯದ ನಾಗಪುರ ( Nagpur ) ಜಿಲ್ಲೆಯು 326 ಕಾಲೇಜುಗಳನ್ನು ಹೊಂದಿದೆ. ಇದರಲ್ಲಿ ಎಲ್ಲ ರೀತಿಯ ಪದವಿ ಕಾಲೇಜುಗಳು ಕೂಡ ಒಳಗಿಂಡಿವೆ.
ರಾಜಸ್ಥಾನ ರಾಜ್ಯದ ಶಿಕರ್ (Sikar district) ಒಟ್ಟು 330 ಕಾಲೇಜುಗಳನ್ನು ಹೊಂದುವ ಮೂಲಕ ದೇಶದ ಅತಿಹೆಚ್ಚು ಕಾಲೇಜು ಹೊಂದಿರುವ ಜಿಲ್ಲೆಯಲ್ಲಿ 9ನೇ ಸ್ಥಾನದಲ್ಲಿದೆ.
ದೇಶದಲ್ಲಿ ಅತಿಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶ ರಾಜ್ಯದ ಘಾಜಿಪುರ (Ghajipur) ಜಿಲ್ಲೆಯು 333 ಕಾಲೇಜುಗಳನ್ನು ಹೊಂದಿದೆ. ಈ ಮೂಲಕ 8ನೇ ಸ್ಥಾನದಲ್ಲಿದೆ.
ಮಧ್ಯ ಪ್ರದೇಶ ರಾಜ್ಯದ ಭೋಪಾಲ್ ( Bhopal ) ಜಿಲ್ಲೆಯಲ್ಲಿ ಒಟ್ಟು 344 ಪದವಿ ಕಾಲೇಜುಗಳಿವೆ. ಈ ಮೂಲಕ ದೇಶದಲ್ಲಿ ಅತಿಹೆಚ್ಚು ಕಾಲೇಜು ಹೊಂದಿದ ಜಿಲ್ಲೆಯಲ್ಲಿ 7ನೇ ಸ್ಥಾನ ಹೊಂದಿದೆ.
ದಕ್ಷಿಣ ಭಾರತದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ( Rangareddy ) ಜಿಲ್ಲೆಯು 349 ಕಾಲೇಜುಗಳನ್ನು ಹೊಂದುವ ಮೂಲಕ 6ನೇ ಸ್ಥಾನ ಪಡೆದುಕೊಂಡಿದೆ.
ಉತ್ತರ ಪ್ರದೇಶ ರಾಜ್ಯದ ಮತ್ತೊಂದು ಜಿಲ್ಲೆ ಪ್ರಯಾಗ್ ರಾಜ್ ( Prayagraj )ಜಿಲ್ಲೆಯಲ್ಲಿ 398 ಕಾಲೇಜುಗಳಿವೆ. ಈ ಮೂಲಕ ಅತಿ ಹೆಚ್ಚು ಕಾಲೇಜು ಹೊಂದಿದ ಜಿಲ್ಲೆಗಳ ಪೈಕಿ ದೇಶದಲ್ಲಿ 5ನೇ ಸ್ಥಾನವನ್ನು ಪಡೆದಿದೆ.
ಮಹಾರಾಷ್ಟ್ರ ರಾಜ್ಯದ ಪುಣೆ ( Pune District ) ಜಿಲ್ಲೆಯು 475 ಕಾಲೇಜುಗಳನ್ನು ಹೊಂದುವ ಮೂಲಕ ಅತಿಹೆಚ್ಚಿನ ಕಾಲೇಜುಗಳಿರುವ ಜಿಲ್ಲೆಯಲ್ಲಿ 4ನೇ ಸ್ಥಾನವನ್ನು ಗಳಿಸಿದೆ.
ದಕ್ಷಿಣ ಭಾರತದ ತೆಲಂಗಾಣ ರಾಜ್ಯದ ಮತ್ತೊಂದು ಜಿಲ್ಲೆಯಾದ ಮುತ್ತಿನ ನಗರಿ ಹೈದರಾಬಾದ್ (Hyderabad ) ಬರೋಬ್ಬರಿ 491 ಕಾಲೇಜುಗಳನ್ನು ಹೊಂದಿದೆ. ಈ ಮೂಲಕ ದೇಶದಲ್ಲಿ 3ನೇ ಸ್ಥಾನ ಪಡೆದಿದೆ.
ಭಾರತದ ಪಿಂಕ್ ಸಿಟಿ ಎಂದೇ ಖ್ಯಾತವಾಗಿರುವ ರಾಜಸ್ಥಾನ ರಾಜ್ಯದ ಜೈಪುರ ( Jaipur )ಜಿಲ್ಲೆಯಲ್ಲಿ ಒಟ್ಟು 703 ಕಾಲೇಜುಗಳಿವೆ. ಈ ಮೂಲ ಇಡೀ ದೇಶದಲ್ಲಿ ಅತಿಹೆಚ್ಚು ಕಾಲೇಜು ಹೊಂದಿದ ಜಿಲ್ಲೆಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂದಡಿದೆ.
ದೇಶದಲ್ಲಿ ಅತ್ಯಧಿಕ ಕಾಲೇಜುಗಳನ್ನು ಹೊಂದಿದ ಜಿಲ್ಲೆ ಎಂಬ ಖ್ಯಾತಿಯನ್ನು ಕರ್ನಾಟಕ ರಾಜ್ಯದ ಬೆಂಗಳೂರು ( Bengaluru ) ನಗರ ಜಿಲ್ಲೆಯು ಹೊಂದಿದೆ. ಇಲ್ಲಿ ಬರೋಬ್ಬರಿ 1,106 ಕಾಲೇಜುಗಳಿವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚಿನ ಯುವಜನರು ಬೆಂಗಳೂರಿನಲ್ಲಿ ಶಿಕ್ಷಣ ಪಡೆಯಲು ಬಂದು ನೆಲೆಸಿದ್ದಾರೆ.