MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • ಅಯ್ಯೋ ಐವತ್ತಾಯ್ತು ಅಂತ ಕೂರಬೇಡಿ, ಈ ಸ್ಕಿಲ್ಸ್ ಗೊತ್ತಾ ಟೆಸ್ಟ್ ಮಾಡ್ಕೊಳ್ಳಿ!

ಅಯ್ಯೋ ಐವತ್ತಾಯ್ತು ಅಂತ ಕೂರಬೇಡಿ, ಈ ಸ್ಕಿಲ್ಸ್ ಗೊತ್ತಾ ಟೆಸ್ಟ್ ಮಾಡ್ಕೊಳ್ಳಿ!

ಜೀವನದ ಬಗ್ಗೆ ಅತ್ಯಂತ ಸುಂದರವಾದ ವಿಷಯವೆಂದರೆ ನಾವು ಕಲಿಕೆಯನ್ನು ಎಂದಿಗೂ ನಿಲ್ಲಿಸೋದಿಲ್ಲ, ನಿಲ್ಲಿಸಬಾರದು ಕೂಡ. ನೀವು 9 ಅಥವಾ 99 ಆಗಿರಲಿ, ಹೊಸದನ್ನು ಕಲಿಯಲು ಯಾವಾಗಲೂ ಸಾಧ್ಯವಿದೆ. ಹಾಗಾಗಿ 50 ವರ್ಷ ತುಂಬುವ ಹೊತ್ತಿಗೆ ನಾವೆಲ್ಲರೂ ಕರಗತ ಮಾಡಿಕೊಳ್ಳಬೇಕಾದ ಕೆಲವು ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳೋಣ.    

2 Min read
Suvarna News
Published : Mar 23 2023, 04:51 PM IST
Share this Photo Gallery
  • FB
  • TW
  • Linkdin
  • Whatsapp
112

ಯಾರಿಗಾದರೂ ಮಾರ್ಗದರ್ಶನ ನೀಡಬಹುದು 
ನಿಮಗೆ 50 ವರ್ಷ ತುಂಬುವ ಹೊತ್ತಿಗೆ, ಬಹುಶಃ ನಿಮ್ಮ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಜ್ಞಾನವನ್ನು(Wisdom) ಪಡೆದಿರುತ್ತೀರಿ. ಆ ಬುದ್ಧಿವಂತಿಕೆಯ ಮಾತುಗಳನ್ನು ಅಗತ್ಯವಿರೋವವರಿಗೆ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಮಾರ್ಗದರ್ಶಕರಾಗಲು ಬಯಸೋದಾದ್ರೆ ನಿಮ್ಮ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಬಹುದು.

212

ಏಕಾಂಗಿಯಾಗಿ(Single) ಸಮಯ ಕಳೆಯುವುದು
ಏಕಾಂಗಿಯಾಗಿ ಸಮಯವನ್ನು ಆನಂದಿಸೋದು ಇತರರಿಗಿಂತ ಕೆಲವು ಜನರಿಗೆ ಹೆಚ್ಚು ಸ್ವಾಭಾವಿಕವಾಗಿ ಬರುತ್ತೆ, ಆದರೆ ಇದು ಕಲಿಯಬೇಕಾದ ಒಂದು ಪ್ರಮುಖ ಕೌಶಲ್ಯ. ಏಕಾಂಗಿಯಾಗಿ ಸಮಯ ಕಳೆಯೋದು ಸಂಕೀರ್ಣ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಆಳವಾದ ಏಕಾಗ್ರತೆಯೊಂದಿಗೆ ಕೆಲಸದಲ್ಲಿ ಪ್ರಗತಿ ಸಾಧಿಸಲು ನಮಗೆ ಅವಕಾಶ ನೀಡುತ್ತೆ ಎಂದು ತಜ್ಞರು ಹೇಳುತ್ತಾರೆ

312

ಸುಳ್ಳನ್ನು(Lie) ಪತ್ತೆ ಹಚ್ಚುವುದು 
ಸುಳ್ಳನ್ನು ಕಂಡುಹಿಡಿಯಲು ಕಲಿಯೋದು ತಂತ್ರಗಾರಿಕೆ ಕೌಶಲ್ಯಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ಹೆಚ್ಚಿನ ಮಾಹಿತಿಯನ್ನು ನೀಡಿದರೆ ಮತ್ತು ಅವನ ದೌರ್ಬಲ್ಯ ಮರೆಮಾಡಿದರೆ, ನೀವು ಜಾಗರೂಕರಾಗಿರಬೇಕು. 

412

ಸಂಬಂಧದ ನಿರೀಕ್ಷೆಗಳನ್ನು ಸಮತೋಲನಗೊಳಿಸೋದು
ನೀವು ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದರೆ  (Relationship), ಅಥವಾ ನೀವು ಸ್ವಲ್ಪ ಹೊಸಬರಾಗಿದ್ದರೆ, ಸಂಬಂಧದಲ್ಲಿ ವಿಷಯವು ಯಾವಾಗಲೂ ಒಳ್ಳೆಯದ್ದೇ ಆಗಿರೋದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳೋದು ಮುಖ್ಯ. ಯಾವಾಗಲೂ ಭರವಸೆ ಹೊಂದಿರೋದು ಮುಖ್ಯ.

512

ಒತ್ತಡ(Stress) ನಿರ್ವಹಿಸೋದು
ನೀವು ನಲವತ್ತರ ಹೊಸ್ತಿಲಲ್ಲಿದ್ದರೆ, ಜೀವನವು ಕೆಲವೊಮ್ಮೆ ಒತ್ತಡದಿಂದ ಕೂಡಿರುತ್ತೆ ಎಂಬುದು ತಿಳಿದಿರುತ್ತೆ. ನೀವು ಅವುಗಳನ್ನು ನಿರ್ವಹಿಸಲು ಕಲಿಯೋದು ಮುಖ್ಯ. ಏನನ್ನು ನಿಯಂತ್ರಿಸಬಹುದು ಎಂಬುದರ ಮೇಲೆ ಕಾನ್ಸನ್ಟ್ರೇಟ್ ಮಾಡಿ, ಮತ್ತು ನಿಮ್ಮನ್ನು ಒತ್ತಡಕ್ಕೆ ಒಳಪಡಿಸುವ ವಿಷಯಗಳು ಯಾವುದು ಎಂಬುದರ ಬಗ್ಗೆ ಜಾಗರೂಕರಾಗಿರಿ. ಮಲಗುವ ಮೊದಲು 30 ನಿಮಿಷಗಳ ಕಾಲ ಯಾವುದೇ ಸ್ಕ್ರೀನ್ ಟೈಮ್ ಇರದ ಹಾಗೆ ನೋಡಿಕೊಳ್ಳೋದು ಮುಖ್ಯ.

612

ನಿಮಗಾಗಿ ಮಾತನಾಡೋದು(Talk)
ಇನ್ನು ನೀವು ಕಲಿಯಬೇಕಾದ ಮುಖ್ಯ ವಿಷಯ ಎಂದಾರೆ ನಿಮಗಾಗಿ ಮಾತನಾಡುವುದು. ನಿಮಗೆ ಬೇಕಾದುದಕ್ಕಾಗಿ ನಿಲ್ಲುವುದು ಕೆಲವು ಜನರಿಗೆ ಸ್ವಾಭಾವಿಕವಾಗಿ ಬರುತ್ತೆ, ಆದರೆ ಎಲ್ಲರಿಗೂ ಅಲ್ಲ. ನಿಮಗೆ ಬೇಕಾದುದನ್ನು ನಿಮಗೆ ನೀಡುವಂತೆ ಜನರನ್ನು ತಿಳಿಸುವ ವಿಷಯಕ್ಕೆ ಬಂದಾಗ, ಅದನ್ನು ನೇರವಾಗಿ ಕೇಳಿ. ನಿಮಗಾಗಿ ಮಾತನಾಡಿ.
 

712

ಮಾತನಾಡದೆ ಆಲಿಸೋದು(Listen)
ನಿಮ್ಮ ಸ್ವಂತ ಅನುಭವದ ಬಗ್ಗೆಯೇ ಹೆಚ್ಚು ಮಾತಾಡದೇ ಇತರರ ಮಾತು ಆಲಿಸೋದು ಮುಖ್ಯ. ಯಾವುದೇ ವ್ಯಕ್ತಿಯನ್ನು ಗೌರವದಿಂದ ಕಾಣುವುದು ಮತ್ತು ತಾಳ್ಮೆಯಿಂದಿರುವುದು ಒಂದು ಪ್ರಮುಖ ಕೌಶಲ್ಯ. ಇದನ್ನ ನೀವು ರೂಢಿ ಮಾಡಿಕೊಳ್ಳಬೇಕು.

812

ನಿಮಗೆ ಇಷ್ಟವಾಗದ ವ್ಯಕ್ತಿಯೊಂದಿಗೆ ಕೆಲಸ(Work) ಮಾಡೋದು
ಕೆಲಸದ ಸ್ಥಳದಲ್ಲಿ ಜೀವನದ ಬಗ್ಗೆ ಕಲಿಯಬೇಕಾದ ಪ್ರಮುಖ ಪಾಠವೆಂದರೆ ನೀವು ಯಾವಾಗಲೂ ಇಷ್ಟಪಡದ ಕೆಲವರೊಂದಿಗೆ ಕೆಲಸ ಮಾಡೋದು. ಟ್ರಿಕ್ ಎಂದರೆ ಅವರೊಂದಿಗೆ ಬೆರೆಯುವುದು. ದ್ವೇಷವನ್ನು ಮರೆತು ಒಂದಾಗಿ ಕೆಲಸ ಮಾಡೋದು.

912

ಮ್ಯೂಸಿಕಲ್ ಇನ್ಸ್ಟ್ರುಮೆಂಟ್(Musical instruments)  ಪ್ಲೇ ಮಾಡುವುದು
ಸಂಗೀತ ವಾದ್ಯ ನುಡಿಸೋದನ್ನು ಕಲಿಯುವುದು ಪ್ರಭಾವಶಾಲಿ ಮಾತ್ರವಲ್ಲ, ಅದು ನಿಮ್ಮ ಅರಿವಿನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತೆ. ವಾದ್ಯವನ್ನು ಕಲಿಯೋದು ಏಕಾಗ್ರತೆಯನ್ನು ಹೆಚ್ಚಿಸಲು ಸಹ ಒಳ್ಳೇದು. ನೀವು ಆನ್‌ಲೈನ್ ನಲ್ಲಿ ಸಂಗೀತ ವಾದ್ಯ ಪಾಠಗಳನ್ನು ತೆಗೆದುಕೊಳ್ಳಬಹುದು.

1012

ಸಾರ್ವಜನಿಕ ಭಾಷಣ(Speech)
ವಾರೆನ್ ಬಫೆಟ್ ಅವರ ಪ್ರಕಾರ, ನಿಮ್ಮ ವೃತ್ತಿಜೀವನವನ್ನು (Career) ಮುನ್ನಡೆಸಲು ನೀವು ಬಯಸೋದಾದ್ರೆ ಸಾರ್ವಜನಿಕ ಭಾಷಣ ಮಾಡೋದನ್ನು ಕಲಿಯಬೇಕಾದ್ದು ಪ್ರಮುಖ ಕೌಶಲ್ಯಗಳಲ್ಲಿ ಒಂದಾಗಿದೆ. ಹಾಗೆಯೇ ಪರಿಣಾಮಕಾರಿಯಾಗಿ ಸಂವಹನ (Communication) ನಡೆಸಲು ಸಾಧ್ಯವಾಗೋದ್ರಿಂದ ಕೆಲಸದಲ್ಲಿ ಮಾತ್ರ ಪ್ರಯೋಜನಕಾರಿಯಾಗೋಲ್ಲ. ಉತ್ತಮ ಭಾಷಣಕಾರನಾಗಿರೋದರಿಂದ ನಿಮ್ಮ ಜೀವನದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ನೀವು ಹೆಚ್ಚು ಪ್ರಭಾವಿತರಾಗುವ ಸಾಧ್ಯತೆಯಿದೆ.

1112

ವೈಯಕ್ತಿಕ ಹಣಕಾಸು (Personal Finance)
ನಿಮ್ಮ ಕನಸುಗಳನ್ನು ಸಾಧಿಸಲು ನೀವು ಬಯಸೋದಾದ್ರೆ ನಿಮ್ಮ ಹಣವನ್ನು(Money) ಹೇಗೆ ನಿರ್ವಹಿಸುತ್ತೀರಿ ಅನ್ನೋದು ಅತ್ಯಗತ್ಯ.ವೈಯಕ್ತಿಕ ಹಣಕಾಸಿನ ಬಗ್ಗೆ ಕಲಿಯಲು ಉತ್ತಮ ಮಾರ್ಗವೆಂದರೆ ಓದುವುದು. ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಕಲಿಯೋದ್ರಿಂದ ಜೀವನದಲ್ಲಿ ಹೆಚ್ಚು ಮುಂದೆ ಸಾಗುತ್ತೀರಿ.

1212

ಒಂದು ಹೊಸ ಭಾಷೆ ಕಲಿಯೋದು (Learn)
ಬೇರೆ ಭಾಷೆಯನ್ನು ಕಲಿಯದೆ ತಪ್ಪಿಸಿಕೊಳ್ಳುವ ದಿನಗಳು ಕಳೆದುಹೋಗಿವೆ. ಒಂದು ಹೊಸ ಭಾಷೆ ಕಲಿತುಕೊಂಡು ನಿಮ್ಮ ವೃತ್ತಿಜೀವನವನ್ನು ಬೆಳೆಸಿಕೊಳ್ಳಿ, ನಿಮ್ಮ ವ್ಯವಹಾರವನ್ನು ಬೆಳೆಸಿ ಮತ್ತು ನಿಮ್ಮ ವಿಶ್ವಾಸವನ್ನು ಸುಧಾರಿಸಿಕೊಳ್ಳಬಹುದು.

About the Author

SN
Suvarna News
ಶಿಕ್ಷಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved