ಮನೆಯಂಗಳವೇ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಟೀಚರ್‌ಗಳ ಐಡಿಯಾ ಇದು!
ದೇಶಾದ್ಯಂತ ಕೊರೋನಾ ಹಾವಳಿ ಮುಂದುವರೆದಿದೆ. ಇದು ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಅತ್ತ ಮಕ್ಕಳೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಮಕ್ಕಳಿಗೆ ಆನ್‌ಲೈನ್ ತರಗತಿ ಮೂಲಕ ಕಲಿಯುವ ಅವಕಾಶ ಸಿಕ್ಕರೆ, ಇನ್ನು ಕೆಲ ಮಕ್ಕಳಿಗೆ ಈ ಸೌಲಭ್ಯವಿಲ್ಲದೇ ಶಾಲೆ, ಪಾಠ, ಶಿಕ್ಷಕರಿಂದ ದೂರವಾಗಿದ್ದಾರೆ. ಹೀಗಿರುವಾಗ ಜಾರ್ಖಂಡ್‌ನ ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಪಾಠ ಹೇಳಿ ಕೊಡಲು ವಿಭಿನ್ನ ಶೈಲಿಯನ್ನು ಅನುಸರಿಸಿದ್ದಾರೆ. ಆನ್‌ಲೈನ್ ಪಾಠ ಮಾಡೋದು ಸಾಧ್ಯವಿಲ್ಲ ಎಂದಾಗ ತಮ್ಮ ವಿನೂತನ ಪ್ರಯೋಗದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಜಾರ್ಖಂಡ್‌ನ ಸರ್ಕಾರಿ ಶಾಲೆಯ ಬಡ ಮಕ್ಕಳು ಇಂಟರ್ನೆಟ್ ಸೌಲಭ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗಿದ್ದರು. ಹೀಗಿರುವಾಗ ಮಕ್ಕಳ ಕುರಿತು ಕಾಳಜಿ ವಹಿಸಿದ ಶಿಕ್ಷಕರು ಮನೆಗೇ ತೆರಳಿ ಪಾಠ ಹೇಳಿ ಕೊಡಲು ಮುಂದಾಗಿದ್ದಾರೆ.
ದುಮ್ಕಾ ಎಂಬ ಹಳ್ಳಿಯ ಶಿಕ್ಷಕರು ಮನೆಗಳ ಗೋಡೆಗಳನ್ನೇ ಬ್ಲ್ಯಾಕ್ ಬೋರ್ಡ್ ಆಗಿ ಮಾರ್ಪಾಡು ಮಾಡಿದ್ದಾರೆ. ಇದರಲ್ಲೇ ಮಕ್ಕಳು ಬರೆದು ಪಾಠ ಕಲಿಯುತ್ತಿದ್ದಾರೆ.
ಜಾರ್ಖಂಡ್‌ನ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಇಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಮಕ್ಕಳೂ ಮನೆ ಬಳಿಯೇ ಉತ್ಸಾಹದಿಂದ ಪಾಠ ಕಲಿಯುತ್ತಿದ್ದಾರೆ.
ನಾಲ್ಕು ಗೋಡೆಗಳಿಲ್ಲದೇ, ಹೊರ ಬದಿಯಲ್ಲಿ ನಡೆಯುತ್ತಿರುವ ಈ ತರಗತಿಯಲ್ಲಿ ಸಾಮಾಜಿಕ ಅಂತರದ ಜೊತೆಗೆ ಪಾಠ ಹೇಳಿಕೊಡುತ್ತಿದ್ದಾರೆ.
ಮನೆ ಜಗಲಿಯಲ್ಲೇ ಕುಳಿತುಕೊಂಡು ಮಕ್ಕಳು ಪಾಠ ಕಲಿಯುತ್ತಿದ್ದರೆ, ಶಿಕಗ್ಷಕರೂ ಅಷ್ಟೇ ಮುತುವರ್ಜಿ ವಹಿಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.