Career Advice : 40 ನೇ ವಯಸ್ಸಿನಲ್ಲಿ ವೃತ್ತಿಜೀವನ ಬದಲಾಯಿಸೋರ ಗಮನಕ್ಕೆ….
ಜೀವನದಲ್ಲಿ ಯಶಸ್ಸು ಯಾವಾಗ ಬೇಕಾದರೂ ಕದ ತಟ್ಟಬಹುದು. ಅದಕ್ಕೆ ಇಂತಿಷ್ಟೇ ವಯಸ್ಸಾಗಬೇಕೆಂದೇನೂ ಇಲ್ಲ. 60 -70ರ ಹರೆಯದಲ್ಲೂ ಯಶಸ್ಸು ಕಂಡವರು ಅನೇಕ ಜನರಿದ್ದಾರೆ. ಹಾಗಿದ್ರೆ 40 ನೇ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡೋದ್ರಲ್ಲಿ ತಪ್ಪೇನಿಲ್ಲ ಬಿಡಿ.
ಸುವರ್ಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ವೃತ್ತಿಜೀವನಕ್ಕೆ(Career) ಹೊಸ ಆಯಾಮವನ್ನು ನೀಡೋದು ಅವಶ್ಯಕ. ಇದಕ್ಕಾಗಿ, ಕೆಲವರು ಉದ್ಯೋಗವನ್ನು ಬದಲಾಯಿಸುತ್ತಾರೆ, ಆದರೆ ಕೆಲವರು ಕ್ಷೇತ್ರವನ್ನು ಬದಲಾಯಿಸುತ್ತಾರೆ. ಆದರೆ, ವಯಸ್ಸಿನ ಬಗ್ಗೆ ಸಂದಿಗ್ಧತೆ ಇದ್ದೇ ಇರುತ್ತೆ. ಯಾವ ವಯಸ್ಸಿನಲ್ಲಿ ನೀವು ಕ್ಷೇತ್ರ ಬದಲಾಯಿಸಬಹುದು, 30 ರಿಂದ 40 ರ ನಡುವೆ ಕ್ಷೇತ್ರ ಬದಲಾಯಿಸಬಹುದು ಎಂದು ಕೆಲವರು ಹೇಳುತ್ತಾರೆ. ಅದರ ನಂತರ ವೃತ್ತಿಜೀವನದಲ್ಲಿ ಸ್ಥಿರತೆ ಅಗತ್ಯ.
ನೀವು 40ನೇ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಲು ಬಯಸೋದಾದ್ರೆ, ಈ ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು(Success) ಖಂಡಿತಾ ಸಿಗುತ್ತದೆ. ಅದಕ್ಕಾಗಿ ನೀವು ಒಂದಿಷ್ಟು ರಿಸರ್ಚ್ ಮಾಡೋದು, ಬದ್ಧತೆ ಪ್ರದರ್ಶಿಸೋದು ತುಂಬಾನೆ ಮುಖ್ಯ.
ವೃತ್ತಿಜೀವನಕ್ಕೆ ಹೊಸ ಆಯಾಮವನ್ನು ನೀಡಲು ಸಂಶೋಧನೆ ಅವಶ್ಯಕ. ಅರ್ಧ, ಅಪೂರ್ಣ ಮಾಹಿತಿಯೊಂದಿಗೆ ವೃತ್ತಿ ಜೀವನಕ್ಕೆ ಹೊಸ ಆಯಾಮ ನೀಡಲು ಸಾಧ್ಯವಿಲ್ಲ. ಅದರಲ್ಲಿ ತೊಂದರೆಯೂ ಇದ್ದೇ ಇರುತ್ತೆ. ಇದಕ್ಕಾಗಿ, ಉದ್ಯೋಗಗಳನ್ನು (Job) ಬದಲಾಯಿಸುವ ಮೊದಲು ಅಥವಾ ಕ್ಷೇತ್ರ ಬದಲಾವಣೆಗಳಿಗೆ ಮೊದಲು ಸಂಶೋಧನೆ ಅವಶ್ಯಕ.
ಸಂಶೋಧನೆಗಾಗಿ ನೀವು ಸೋಶಿಯಲ್ ಮೀಡಿಯಾವನ್ನು ಆಶ್ರಯಿಸಬಹುದು. ಇದಕ್ಕಾಗಿ, ಲಿಂಕ್ಡ್ಇನ್ನಲ್ಲಿರುವ(Linked) ಹಿರಿಯ ವ್ಯಕ್ತಿಗಳಿಂದ ನೀವು ಸಲಹೆ ಕೂಡ ಪಡೆಯಬಹುದು. ಇದು ನಿಮಗೆ ಬಹಳಷ್ಟು ಸಹಾಯ ಮಾಡುತ್ತೆ. ಉತ್ತಮ ವೃತ್ತಿಗಳನ್ನು ಆಯ್ಕೆ ಮಾಡಲು ಇದು ನೆರವು ನೀಡುತ್ತೆ.
ಉದ್ಯೋಗವನ್ನು ಬದಲಾಯಿಸೋದು ಯಾಕೆ?
ಪ್ರತಿ ಸಂದರ್ಶನದಲ್ಲಿ(Interview), ನೀವು ಒಂದು ಪ್ರಶ್ನೆಯನ್ನು ಕಾಮನ್ ಆಗಿ ಎದುರಿಸಬೇಕಾಗುತ್ತೆ. ಪ್ರಶ್ನೆಯೆಂದರೆ- ನೀವು ಉದ್ಯೋಗಗಳನ್ನು ಏಕೆ ಬದಲಾಯಿಸಲು ಬಯಸುತ್ತೀರಿ? ನೀವು ಉದ್ಯೋಗ ಅಥವಾ ಕ್ಷೇತ್ರಗಳನ್ನು ಏಕೆ ಬದಲಾಯಿಸಲು ಬಯಸುತ್ತೀರಿ ಎಂಬ ಪ್ರಶ್ನೆಗಳನ್ನು ನಿಮಗೇ ನೀವು ಸಹ ಕೇಳಿ. ಅದಕ್ಕೆ ನಿಮ್ಮ ಬಳಿ ಸರಿಯಾದ ಮತ್ತು ದೃಢವಾದ ಉತ್ತರ ಇದ್ದರೆ, ನೀವು ಮುಂದುವರಿಯಬಹುದು. ಇದಕ್ಕಾಗಿ, ನೀವು ಗೊಂದಲಕ್ಕೊಳಗಾಗಬಾರದು.
ಕೌಶಲ್ಯಗಳನ್ನು ಹೆಚ್ಚಿಸಿ
ನೀವು ಹೋಗಲು ಬಯಸುವ ಕ್ಷೇತ್ರ ಯಾವುದೆಂದು ಆಯ್ಕೆ ಮಾಡಿ. ಆ ಕ್ಷೇತ್ರದ ಮಾಹಿತಿಯನ್ನು ಹೆಚ್ಚಿಗೆ ತಿಳಿದುಕೊಳ್ಳಿ. ಇದಕ್ಕಾಗಿ, ಅಧ್ಯಯನ ಮಾಡಬೇಕು. ಇದರರ್ಥ ನೀವು ಸಿವಿಯಲ್ಲಿ ಉಲ್ಲೇಖಿಸಲು ಕೌಶಲ್ಯವನ್ನು ಹೆಚ್ಚಿಸಬೇಕು ಎಂದಲ್ಲ, ಆದರೆ ಕ್ಷೇತ್ರ ಜ್ಞಾನವು (Knowledge) ಅವಶ್ಯಕ.
ನಿಮ್ಮ ಕೌಶಲ್ಯಗಳು ಯಾವುವು ಅನ್ನೋದನ್ನು ತಿಳಿಯಿರಿ
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಭಾವಂತ. ಅವನಲ್ಲಿ ವಿಶೇಷ ಪ್ರತಿಭೆ ಇದ್ದೇ ಇರುತ್ತೆ . ನೀವು 40ನೇ ವಯಸ್ಸಿನಲ್ಲಿ ನಿಮ್ಮ ಪ್ರತಿಭೆಯನ್ನು ಪತ್ತೆ ಮಾಡಬಹುದು. ಈ ವಯಸ್ಸಿನಲ್ಲಿ, ನೀವು ಈಗ ಏನು ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕೆಂದು ನಿಮಗೆ ತಿಳಿದಿರುತ್ತೆ. ನಿಮ್ಮ ಕನಸನ್ನು(Dream) ಈಡೇರಿಸಲು ನಿಮ್ಮ ಪ್ರತಿಭೆಯನ್ನು ಪೋಷಿಸಬಹುದು.
ನೀವು ಏನು ಮಾಡಬಹುದು?
40ನೇ ವಯಸ್ಸಿನಲ್ಲಿ, ವೃತ್ತಿಜೀವನಕ್ಕೆ ಹೊಸ ಆಯಾಮವನ್ನು ನೀಡಲು ನೀವು ಸ್ವತಂತ್ರ ಬರಹಗಾರ, ಪ್ರಾಜೆಕ್ಟ್ ಮ್ಯಾನೇಜರ್ (Project manager), ಈವೆಂಟ್ ಪ್ಲಾನರ್, ಮಾರ್ಕೆಟಿಂಗ್ ಮ್ಯಾನೇಜರ್ (Marketing Manager), ರಿಯಲ್ ಎಸ್ಟೇಟ್ ಏಜೆಂಟ್ (Real Estate Agent), ಹಣಕಾಸು ಸಲಹೆಗಾರ (Economic Advisor) ಇತ್ಯಾದಿ ಕ್ಷೇತ್ರದಲ್ಲಿ ಪ್ರಯತ್ನಿಸಬಹುದು. ಇದಲ್ಲದೆ, ನೀವೇ ಸ್ವಂತವಾಗಿ ಸಹ ಪ್ರಾರಂಭಿಸಬಹುದು.