ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವರು, ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಸುರೇಶ್ ಕುಮಾರ್ ಶ್ರಮ...!
ಸರಳ-ಸಜ್ಜನ ಎಂದೇ ಹೆಸರಾದವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್. ಇವರು ಹಲವು ಕಾರ್ಯಗಳ ಮೂಲಕ ಅವರು ತಾವೆಷ್ಟು ಸರಳ ಜೀವಿ ಎಂಬುವುದನ್ನು ಹಲವು ಬಾರಿ ಪ್ರೂವ್ ಮಾಡಿದ್ದಾರೆ. ಅಲ್ಲದೇ ಅಷ್ಟೇ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಶಿಸ್ತುಬದ್ಧವಾಗಿ ಕಾರ್ಯನಿರ್ವಹಸಿರುವ ಸುರೇಶ್ ಕುಮಾರ್ ಅವರು ಕೊರೋನಾ ಭೀತಿ ನಡುವೆಯೂ ಯಶಸ್ವಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿಕೊಟ್ಟರು. ಇದೀಗ ಶಾಲೆ ತೆರೆಯಲು ಅವಕಾಶ ಇಲ್ಲದಿದ್ದರಿಂದ ಮಕ್ಕಳ ನಿರಂತರ ಕಲಿಕೆಗೆ ಶ್ರಮವಹಿಸುತ್ತಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಇಂದು ಬೆಳಗ್ಗೆ ಮಾಗಡಿ ತಾಲ್ಲೂಕಿನ ವಿವಿಧ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಲ್ಲೂರು, ವರದೇನಹಳ್ಳಿ, ಬಾಚೇನಹಳ್ಳಿ, ತಗಚುಗುಪ್ಪೆ, ಬಂಟರಕುಪ್ಪೆ ಕಾಲೋನಿ, ಬಂಟರಕುಪ್ಪೆ, ಬೆಳಗುಂಬ ಮತ್ತು ಮಾಗಡಿಯಲ್ಲಿ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳ ಕಲಿಕೆಯನ್ನು ಪರಾಮರ್ಶಿಸಿದರು.

ಕೊರೋನಾ ಕುರಿತು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅವರಲ್ಲಿನ ಮಾಹಿತಿ ಪರೀಕ್ಷಿಸಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಚಿವರು. ಮಕ್ಕಳೊಂದಿಗೆ ಕಲೆತು ಮಾತನಾಡಿದೆ. ಅವರೇನು ಕಲಿಯುತ್ತಿದ್ದಾರೆಂದು ವಿಚಾರಿಸಿದೆ. ಕೆಲ ಪ್ರಶ್ನೆಗಳನ್ನು ಸಹ ಕೇಳಿದೆ ಎಂದರು.

ಎಲ್ಲಾ ಮಕ್ಕಳು ಮಾಸ್ಕ್ ಧರಿಸಿದ್ದು, ಶಾರೀರಿಕ ಅಂತರ ಕಾಪಾಡಿಕೊಂಡಿದ್ದು ಗಮನಾರ್ಹ. ಮಕ್ಕಳೆಲ್ಲ ಖುಷಿಯಾಗಿ ಇದ್ದದ್ದನ್ನು ಕಂಡು ಸಂತಸವಾಯಿತು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವರು

ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವರು