ಕಾರಿನ ಮುರಿದ ಹೆಡ್‌ಲೈಟ್ ಬದಲು ಟಾರ್ಚ್ ಅಳವಡಿಸಿದ ಮಾಲೀಕ; ಬಿತ್ತು ದುಬಾರಿ ದಂಡ!
ರಾತ್ರಿ ವೇಳೆ ವಾಹನ ಚಾಲನೆ ಮಾಡುವ ಮೊದಲೇ ಹೆಡ್‌ಲೈಟ್ ಗಮನಿಸಲೇಬೇಕು. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಹೆಡ್‌ಲೈಟ್ ಕೂಡ ಪ್ರಮುಖ ಕಾರಣವಾಗಿದೆ. ಸರಿಯಾದ ಬೆಳಕು ಅತ್ಯವಶ್ಯಕ ಹಾಗಂತೆ ಹೆಚ್ಚಾದರೂ ಅಪಾಯ. ಇಲ್ಲೊರ್ವ ಮಾಲೀಕ ಹೆಡ್‌ಲೈಟ್ ತುಂಡಾದ ಕಾರಣ ಬ್ಯಾಟರಿ ಟಾರ್ಟ್ ಅಳವಡಿಸಲಾಗಿತ್ತು. ಇದಕ್ಕಾಗಿ ಮಾಲೀಕನಿಗೆ ದುಬಾರಿ ದಂಡ ಹಾಕಲಾಗಿದೆ. ಇಷ್ಟೇ ಅಲ್ಲ ಲೈಸೆನ್ಸ್ ತಾತ್ಕಾಲಿಕ ರದ್ದು ಮಾಡಲಾಗಿದೆ.
ರಾತ್ರಿ ಡ್ರೈವಿಂಗ್ ವೇಳೆ ಹೆಡ್‌ಲೈಟ್ ಅತ್ಯಂತ ಅವಶ್ಯಕ. ನಿಯಮದ ಪ್ರಕಾರ ಹೆಡ್‌ಲೈಟ್ ಮಾಡಿಫಿಕೇಶನ್ ಮಾಡುವಂತಿಲ್ಲ. ಹೆಚ್ಚು ಪ್ರಕಾಶಮಾನವಾದ ಹೆಡ್‌ಲೈಟ್ ಬಳಸುವಂತಿಲ್ಲ.
ಇನ್ನು ಹೆಡ್‌ಲೈಟ್ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಹೀಗೆ ಕಾರಿನ ಹೆಡ್‌ಲೈಟ್ ತುಂಡಾಗಿದ್ದ ಕಾರಣ , ದೊಡ್ಡ ಬ್ಯಾಟರಿ ಟಾರ್ಚ್ ಅಳವಡಿಸಿ ಪ್ರಯಾಣ ಮುಂದುವರಿಸಿದ್ದ ಮಾಲೀಕನಿಗೆ ದುಬಾರಿ ದಂಡ ಹಾಕಲಾಗಿದೆ.
ಅಮೆರಿಕ ವಾಶಿಂಗ್ಟನ್ ಪೊಲೀಸರು ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ಟಾರ್ಚ್ ಹೆಡ್‌ಲೈಟ್ ವಾಹನ ಗಮನಿಸಿ ತಡೆದಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಪೊಲೀಸರು ಪರಿಶೀಲನೆ ವೇಳೆ ದೂರದಿಂದ ಡಿಮ್ ಹೆಡ್‌ಲೈಟ್ ಕಾರು ಆಗಮಿಸುತ್ತಿರುವುದು ಕಾಣಿಸಿದೆ. ಈ ಕಾರಿನ ಹೆಡ್‌ಲೈಟ್ ಬೆಳಕು ಸಂಪೂರ್ಣ ಡಿಮ್ ಆಗಿತ್ತು. ಕೆಲ ಹೊತ್ತಲ್ಲೇ ಈ ಲೈಟ್ ಆಫ್ ಆಗುವ ಎಲ್ಲಾ ಸಾಧ್ಯತೆ ಇತ್ತು.
ವಾಶಿಂಗ್ಟನ್ ಸ್ಟೇಟ್ ಪೊಲೀಸರು ಮಾಲೀಕನ ಪ್ರಶ್ನಿಸಿದಾಗ, ಇದು ಕಾರಿನ ಹೆಡ್‌ಲೈಟ್ ತನಗೇನು ಗೊತ್ತಿಲ್ಲ ಎಂದಿದ್ದಾನೆ. ಇತ್ತ ಪೊಲೀಸರು ಬಾನೆಟ್ ತೆಗೆದು ಪರಿಶೀಲಿಸಿದಾಗ, ಇದು ಟಾರ್ಚ್ ಲೈಟ್ ಅನ್ನೋದು ಬೆಳಕಿಗೆ ಬಂದಿದೆ.
ಹಿಂದಿನ ಅಪಘಾತದ ವೇಳೆ ಲೈಟ್ ತುಂಡಾಗಿದೆ. ಹೀಗಾಗಿ ಮಾಲೀಕ ಟಾರ್ಟ್ ಲೈಟ್ ಅಳವಡಿಸಿದ್ದಾನೆ. ಆದರೆ ಇದರ ಬ್ಯಾಟರಿ ಮುಗಿದ ಕಾರಣ ಬೆಳಕು ಪ್ರಕಾಶಮಾನವಾಗಿ ಇರಲಿಲ್ಲ.
ಅಮೆರಿಕದ ಭದ್ರತ ಸ್ಟಾಂಡರ್ಡ್ ನಿಯಮ ಉಲ್ಲಂಘಿಸಿದ ಕಾರಣ ಮಾಲೀಕನಿಗೆ ದಂಡ ಹಾಕಲಾಗಿದೆ. ಪ್ರಕಾಶಮಾನದ ಬೆಳಕಿನಲ್ಲದೆ ವಾಹನ ಚಾಲನೆ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಮಾಲೀಕನ ಲೈಸೆನ್ಸ್ ರದ್ದಾಗಿದೆ.
ಇಷ್ಟೇ ಅಲ್ಲ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಡ ಪಾವತಿಸಿ, ಕಾರಿನ ಹೆಡ್‌ಲೈಟ್ ಸರಿ ಮಾಡಿಸಿ ಕಾರು ಬಿಡಿಸಲು ಪೊಲೀಸರು ಸೂಚಿಸಿದ್ದಾರೆ.