ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!
ಮೋದಿ ಸರ್ಕಾರದಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಮತ್ತೊರ್ವ ಸಚಿವ ಅಂದರೆ ಅದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ. ಗಡ್ಕರಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಹೆದ್ದಾರಿ ಸ್ವರೂಪ ಬದಲಾಗಿದೆ. ಅತ್ಯಾಧುನಿಕ ರಸ್ತೆಗಳು ನಿರ್ಮಾಣವಾಗುತ್ತಿದೆ. ಇದೀಗ ಹೆದ್ದಾರಿ ಪ್ರಾಧಿಕಾರ ವಿಶ್ವ ದಾಖಲೆ ನಿರ್ಮಿಸಿದೆ. ಈ ಕುರಿತ ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ದೇಶದ ಮೂಲೆ ಮೂಲೆಗೂ ರಸ್ತೆ ನಿರ್ಮಾಣ ಕಾರ್ಯದ ವೇಗವನ್ನು ಹೆಚ್ಚಿಸಿದೆ. ಹಿಂದೆಂದು ಕಾಣದ ರೀತಿಯಲ್ಲಿ ಭಾರತದಲ್ಲಿ ರಸ್ತೆಗಳ ನಿರ್ಮಾಣವಾಗುತ್ತಿದೆ. ಅತ್ಯಾಧುನಿಕ ರಸ್ತೆಗಳು, ಸೇತುವೆ, ಸುರಂಗ ಮಾರ್ಗಗಳು ಭಾರತದ ಸಂಚಾರ ರೀತಿಯನ್ನೇ ಬದಲಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಇದೀಗ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆ ಬರೆದಿದೆ. ಹೌದು 24 ಗಂಟೆಯಲ್ಲಿ ಸುಮಾರು 10.32 ಕಿಲೋಮೀಟರ್ ಚತುಷ್ಪಥ ರಸ್ತೆ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದೆ.
NHAI ಕಾಂಟ್ರಾಕ್ಟರ್ ಪೆಟೇಲ್ ಕನ್ಸ್‌ಸ್ಟ್ರಕ್ಶನ್ ಈ ದಾಖಲೆ ನಿರ್ಮಿಸಿದೆ. ಫೆಬ್ರವರಿ 1 ರಂದು ಬೆಳಗ್ಗೆ 8 ಗಂಟೆಗೆ ಆರಂಭಿಸಿ ಸತತ 2 4 ಗಂಟೆಯಲ್ಲಿ 18.75 ಮೀಟರ್ ಅಗಲದ 2,580 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದೆ.
ವಿಶ್ವದ ಯಾವುದೇ ದೇಶದಲ್ಲಿ, ಟಾವುದೇ ಕಂಪನಿಗೆ, ಕಾಂಟ್ರಾಕ್ಟರ್‌ಗೆ ಇಷ್ಟು ಉದ್ದನೆಯ ರಸ್ತೆಯನ್ನು 24 ಗಂಟೆಯಲ್ಲಿ ಮಾಡಲು ಸಾಧ್ಯವಾಗಿಲ್ಲ. ಬೇಗನೆ ಮುಗಿಸಿದ್ದಾರೆ ಎಂದು ಗುಣಮಟ್ಟದಲ್ಲೂ ರಾಜಿಯಾಗಿಲ್ಲ. ಅತ್ಯುತ್ತಮ ಗುಣಮಟ್ಟದ ರಸ್ತೆಯನ್ನೇ ನಿರ್ಮಿಸಿದೆ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಂಕ್ರೀಟ್ ರಸ್ತೆ ನಿರ್ಮಾಣ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲಾಗಿದೆ.
ದೆಹಲಿ-ಮುಂಬೈ-ವಡೋದರ 8 ಲೇನ್ ರಸ್ತೆ ನಿರ್ಮಾಣದಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಅಲ್ಟ್ರಾ ಕಾಂಕ್ರೀಟ್ ಪವೇರ್ ಮಶೀನ್‌ನಲ್ಲಿ ಈ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ
2020ರ ಎಪ್ರಿಲ್‌ನಿಂದ 2021ರ ಜನವರಿ ವರೆಗೆ 8,169 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ 28.11 ಕಿ.ಮೀ ಸರಾಸರಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಇದೇ ವೇಗದಲ್ಲಿ ನಿರ್ಮಾಣಕಾರ್ಯ ಸಾಗಿದರೆ ಮಾರ್ಚ್ 31ರೊಳಗೆ 11,000 ಕಿ.ಮೀ ರಸ್ತೆ ನಿರ್ಮಾಣ ಮಾಡಲು ಸಾಧ್ಯ ಎಂದು NHAI ಸಚಿವಾಲಯ ಹೇಳಿದೆ