ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸ್!
ಟ್ರಾಫಿಕ್ ನಿಯಮ ಉಲ್ಲಂಘನೆ ತಪ್ಪಿಸಲು, ದಂಡ ಮರುಪಾವತಿಯನ್ನು ಮಾಡಲು ಬೆಂಗಳೂರು ಪೊಲೀಸರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ನಿಯಮ ಉಲ್ಲಂಘಿಸಿ, ದಂಡ ಪಾವತಿಸಿದವರಿಂದ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಟ್ರಾಫಿಕ್ ನಿಯಮಗಳು ಕಟ್ಟು ನಿಟ್ಟಾಗಿದೆ. ಮೋಟಾರು ವಾಹನ ತಿದ್ದುಪಡಿ ಬಳಿಕ ದುಬಾರಿ ದಂಡ ಪದ್ದತಿ ಜಾರಿಯಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸುವವರಿಗೆ ದಂಡದ ಜೊತೆಗೆ ಕಠಿಣ ಶಿಕ್ಷೆಯೂ ಜಾರಿಯಲ್ಲಿದೆ.
2017ರಿಂದ 2020ರ ವರೆಗೆ ನೂರಾರು ಕೋಟಿ ಹಣ ಟ್ರಾಫಿಕ್ ದಂಡ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಇದರ ವಸೂಲಿಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ದಂಡ ಬಾಕಿ ಉಳಿಸಿಕೊಂಡವರ ವಾಹನ ಸೀಝ್ ಮಾಡಲಿದ್ದಾರೆ.
ದುಬಾರಿ ದಂಡ ಜಾರಿಯಾದ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಹಲವರು ನಿಯಮ ಉಲ್ಲಂಘಿಸುತ್ತಲೇ ಇದ್ದಾರೆ.
ಪೊಲೀಸರ ಕಣ್ತಪ್ಪಿಸಿ ನಿಯಮ ಉಲ್ಲಂಘಿಸಿದರೂ, ಸಿಸಿಟಿವಿ ಸೇರಿದಂತೆ ಇತರ ತಂತ್ರಜ್ಞಾನಗಳಿಂದ ನಿಯಮ ಉಲ್ಲಂಘಿಸುವವರಿಗೆ ಇ ಚಲನ್ ನೀಡಲಾಗುತ್ತದೆ. ಆದರೆ ಹಲವರು ದಂಡ ಪಾವತಿಸಿದರೆ ಮತ್ತೆ ಹಲವರು ಪಾವತಿಲ್ಲ.
ದಂಡ ಪಾವತಿಸದವರಿಂದ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದಂಡ ಉಳಿಸಿಕೊಂಡರೆ ವಾಹನವನ್ನು ಜಪ್ತಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡವರಿಗೆ ಆಯಾ ಠಾಣೆಯಿಂದ ನೊಟೀಸ್ ಕಳುಹಿಸಲಾಗಿದೆ. ಇಷ್ಟೇ ಅಲ್ಲ ಅಂತಿಮ ಗಡುವು ಕೂಡ ನೀಡಲಾಗಿದೆ.
ಪೊಲೀಸರು ನೀಡಿದ ದಿನಾಂಕದ ಒಳಗೆ ಬಾಕಿ ಉಳಿಸಿಕೊಂಡ ದಂಡ ಪಾವತಿ ಮಾಡದಿದ್ದರೆ, ವಾಹನ ಎಲ್ಲಿ ಕಂಡರೂ ಸೀಝ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ವಾಹನ ಸವಾರರು, ಮಾಲೀಕರು ಟ್ರಾಫಿಕ್ ಪೊಲೀಸರ ಅಧೀಕೃತ ವೆಬ್‌ಸೈಟ್ ಮೂಲಕ ನಿಮ್ಮ ವಾಹನದ ಟ್ರಾಫಿಕ್ ನಿಯಮ ಟ್ರಾಕ್ ಪರಿಶೀಲಿಸಿಕೊಳ್ಳುವುದು ಉತ್ತಮ.
ಒಂದು ವೇಳೆ ದಂಡ ಬಾಕಿ ಉಳಿಸಿಕೊಂಡಿದ್ದರೆ, ಕಟ್ಟಿ ವಾಹನ ಜಪ್ತಿಯಾಗದಂತೆ ತಡೆಯಬಹುದು.