- Home
- Karnataka Districts
- Dakshina Kannada
- ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್ ಶಾಕ್; 2110 ಕೋಟಿ ರಹಸ್ಯ
ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್ ಶಾಕ್; 2110 ಕೋಟಿ ರಹಸ್ಯ
ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.

ಜಾರಿ ನಿರ್ದೇಶನಾಲಯದ ವಶಕ್ಕೆ ಶಿವಾನಂದ ನೀಲಣ್ಣವರ್
ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದುಕೊಂಡಿದ್ದು, ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಆಗಸ್ಟ್ 13ರಂದು ಬಂಧನ
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ.24ರ ವರೆಗೆ ಅಂದರೆ 12 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಕಲಂ 19ರ ಅಡಿಯಲ್ಲಿ ಆ.13ರಂದು ಬಂಧಿಸಲಾಗಿದೆ.
ಎಫ್‌ಐಆರ್ ಆಧರಿಸಿ ಇ.ಡಿ ತನಿಖೆ
ಬೆಳಗಾವಿ ನಗರದ ಮಲಮಾರುತಿ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇ.ಡಿ ತನಿಖೆ ಆರಂಭಿಸಿತ್ತು. ಸಾರ್ವಜನಿಕರಿಗೆ ಅಸಾಮಾನ್ಯ ಪ್ರಮಾಣದ ಹಾಗೂ ಖಾತರಿಪಡಿಸಿದ ಆದಾಯದ ಭರವಸೆ ನೀಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.
ಇದನ್ನೂ ಓದಿ: ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ನಿವೇಶನ ವಿವಾದಕ್ಕೆ ಬಿಗ್ ಟ್ವಿಸ್ಟ್: ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್!
ರೂ.2,110.97 ಕೋಟಿ ಸಂಗ್ರಹ
ತನಿಖೆಯಲ್ಲಿ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯವಸ್ಥಿತ ಜಾಲದ ಮೂಲಕ ಸಾರ್ವಜನಿಕರಿಂದ 2,110.97 ಕೋಟಿ ರು. ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.
ಇದನ್ನೂ ಓದಿ: ಶಿವಾನಂದ ನೀಲಣ್ಣನವರ್ 5 ಕೋಟಿ ಮೌಲ್ಯದ ನಾಲ್ಕು ಐಷಾರಾಮಿ ಕಾರು ಸೀಜ್, ಬೆಳಗಾವಿ ವಂಚನೆ ಕೇಸ್

