MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Daily Horoscope
  • ಇಂದು ಶುಭಕರವಾದ ವೃದ್ಧಿ ಯೋಗ; ಇವರಿಗೆ ಸಿಗಲಿದೆ ಪೂರ್ವಜರ ಆಸ್ತಿ, 12 ರಾಶಿಗಳ ಭವಿಷ್ಯ

ಇಂದು ಶುಭಕರವಾದ ವೃದ್ಧಿ ಯೋಗ; ಇವರಿಗೆ ಸಿಗಲಿದೆ ಪೂರ್ವಜರ ಆಸ್ತಿ, 12 ರಾಶಿಗಳ ಭವಿಷ್ಯ

ಶುಕ್ರವಾರ, 22ನೇ ಮೇ 2026 ರ ದಿನಭವಿಷ್ಯ ಇಲ್ಲಿದೆ. ಇಂದಿನ ವಿಶೇಷ ವೃದ್ಧಿ ಯೋಗದಿಂದಾಗಿ ಕೆಲವು ರಾಶಿಯವರಿಗೆ ಪೂರ್ವಜರ ಆಸ್ತಿ ಲಭಿಸುವ ಸಂಭವವಿದೆ. ನಿಮ್ಮ ರಾಶಿಯ ಇಂದಿನ ಫಲಾಫಲಗಳ ಸಂಪೂರ್ಣ ಮಾಹಿತಿ ತಿಳಿಯಿರಿ.

3 Min read
Author : Mahmad Rafik
Published : May 22 2026, 06:45 AM IST
Share this Photo Gallery
  • FB
  • TW
  • Linkdin
  • Whatsapp
113
ಶುಕ್ರವಾರ 22ನೇ ಮೇ 2026
Image Credit : Gemini Generated

ಶುಕ್ರವಾರ 22ನೇ ಮೇ 2026

ಇಂದು ಶುಕ್ರವಾರ 22ನೇ ಮೇ 2026 ಆಗಿದ್ದು, ಷಷ್ಠಿ ತಿಥಿ ಬೆಳಿಗ್ಗೆ 6:24 ರವರೆಗೆ ಇರುತ್ತದೆ. ಸಪ್ತಮಿ ತಿಥಿ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 5:04 ರವರೆಗೆ ಇರಲಿದೆ. ವಿಶೇಷ ಗ್ರಹ ಸ್ಥಾನವು ಇಂದು ಬೆಳಗ್ಗೆ 8:19 ರವರೆಗೆ ವೃದ್ಧಿ ಯೋಗವನ್ನು ಸೃಷ್ಟಿಸೋದರಿಂದ ಕೆಲ ರಾಶಿಯವರಿಗೆ ಪೂರ್ವಜರ ಆಸ್ತಿ ಲಭಿಸುವ ಸಾಧ್ಯತೆಗಳಿವೆ. ಇಂದಿನ ರಾಶಿಗಳ ಭವಿಷ್ಯದ ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred
213
ಮೇಷ ರಾಶಿ
Image Credit : SOCIAL MEDIA

ಮೇಷ ರಾಶಿ

ಇಂದು ಸೃಜನಶೀಲತೆಯ ಗೆಳೆಯರನ್ನು ಭೇಟಿಯಾಗುವ ಸಮಯ ಬರುತ್ತದೆ. ಕಲ್ಲಿದ್ದಲು ಮತ್ತು ಸುಣ್ಣದ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಇಂದು ಇತರರಿಗಿಂತ ಹೆಚ್ಚು ಅಲರ್ಟ್ ಅಗಿರಬೇಕು. ಇಲ್ಲವಾದ್ರೆ ನಿಮ್ಮ ಸ್ಪರ್ಧಿಗಳು ನಿಮ್ಮನ್ನು ಹಿಂದೆ ಹಾಕಬಹುದು.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 9

Related Articles

Related image1
44 ವರ್ಷಗಳ ಬಳಿಕ 3 ರಾಶಿಚಕ್ರದ ಮೇಲೆ ಶನಿ ದೇವನ ದಯೆ; ತೆರೆಯಲಿದೆ ಅದೃಷ್ಟದ ಬಾಗಿಲು
Related image2
Adhik Maas 2026: ಅಧಿಕ ಮಾಸದಲ್ಲಿ ಈ 5 ವಸ್ತು ದಾನ ಮಾಡಿದ್ರೆ… ಅದೃಷ್ಟದ ಬಾಗಿಲು ಓಪನ್
313
ವೃಷಭ ರಾಶಿ
Image Credit : others

ವೃಷಭ ರಾಶಿ

ಇಂದು ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ಜನರು ನಿಮ್ಮನ್ನು ಗುರುತಿಸುತ್ತಾರೆ. ಸೂರ್ಯನಾಮ ಜಪ ಮಾಡಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 2

413
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

ಇಂದು ನೀವು ಮಾನಸಿಕವಾಗಿ ಬಲಶಾಲಿ, ಉತ್ತಮ ಮತ್ತು ಆತ್ಮವಿಶ್ವಾಸದಿಂದ ಕೆಲಸಗಳನ್ನು ಮಾಡುತ್ತೀರಿ. ಅವಕಾಶಗಳು ಬರಲಿದ್ದು, ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ತಜ್ಞರ ಸಲಹೆ ಪಡೆದುಕೊಂಡು ಹೂಡಿಕೆ ಮಾಡಿ. ಇದರಿಂದ ಲಾಭ ಹೆಚ್ಚಾಗುತ್ತದೆ. ಕುಟುಂಬದಲ್ಲಿ ನಡೆಯುತ್ತಿರೋಈ ಬೆಳವಣಿಗ ಬಗ್ಗೆ ಗಮನ ನೀಡೋದನ್ನು ಮರೆಯಬೇಡಿ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 5

513
ಕರ್ಕಾಟಕ
Image Credit : OTHERS

ಕರ್ಕಾಟಕ

ನೀವು ಬಯಸಿದ ಪ್ರೀತಿ ನಿಮ್ಮದಾಗುತ್ತದೆ. ಮನೆಯಲ್ಲಿ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತೀರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಒಲಿದು ಬರಲಿವೆ. ಪ್ರೇಮ ಸಂಬಂಧದ ಕುರಿತು ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿ.ಹಣಕಾಸಿನ ವಹಿವಾಟುಗಳಲ್ಲಿ ವಿಶೇಷವಾಗಿ ಜಾಗರೂಕರಾಗಿರಿ. ನಾಳೆ ದೈಹಿಕವಾಗಿ ಗಾಯಗೊಳ್ಳುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ಹಾಲಿನ ಬಿಳಿ ಬಣ್ಣ

ಅದೃಷ್ಟ ಸಂಖ್ಯೆ: 7

613
ಸಿಂಹ ರಾಶಿ
Image Credit : SOCIAL MEDIA

ಸಿಂಹ ರಾಶಿ

ಹಾರ್ಡ್‌ವರ್ಕ್‌ನಿಂದ ನಿಮ್ಮ ಕುಟುಂಬದ ಸದಸ್ಯರ ಬೇಡಿಕೆಗಳನ್ನು ಈಡೇರಿಸುತ್ತೀರಿ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಅದ್ಭುತ ಮತ್ತು ಪ್ರಗತಿಪರ ದಿನವಾಗಿರುತ್ತದೆ. ಮನಸ್ಸಿನಲ್ಲಿ ತಳಮಳ ಉಂಟಾಗುತ್ತಿದ್ರೆ, ಹಿಟ್ಟಿನಿಂದ ಮಾಡಿದ ಉಂಡೆಗಳನ್ನು ಮೀನುಗಳಿಗೆ ಆಹಾರವಾಗಿ ನೀಡಿ. ಇದರಿಂದ ಇಡೀ ದಿನ ನೆಮ್ಮದಿಯಾಗಿರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಮುತುವರ್ಜಿ ತೆಗೆದುಕೊಳ್ಳಿ.

ಅದೃಷ್ಟ ಬಣ್ಣ: ಚಿನ್ನ

ಅದೃಷ್ಟ ಸಂಖ್ಯೆ: 1

713
ಕನ್ಯಾ ರಾಶಿ
Image Credit : OTHERS

ಕನ್ಯಾ ರಾಶಿ

ಬಿಡುವಿಲ್ಲದೇ ಕೆಲಸ ಮಾಡುವ ಈ ರಾಶಿಯವರಿಗೆ ಇಂದು ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಕಚೇರಿಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ, ತಾಳ್ಮೆ ಕಾಪಾಡಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸರಿಯಾಗಿ ಮಾತನಾಡಿದ ನಂತ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.

ಅದೃಷ್ಟ ಬಣ್ಣ: ಗಾಢ ಹಸಿರು

ಅದೃಷ್ಟ ಸಂಖ್ಯೆ: 6

813
ತುಲಾ ರಾಶಿ
Image Credit : OTHERS

ತುಲಾ ರಾಶಿ

ಇಂದು ಈ ರಾಶಿಯ ಜನರಿಗೆ ಎಲ್ಲಾ ವಲಯದಲ್ಲಿಯೂ ಯಶಸ್ಸು ಸಿಗಲಿದೆ. ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ, ಸಂಬಳ ಏರಿಕೆಯಂತಹ ಸುದ್ದಿಗಳನ್ನು ಕೇಳುತ್ತೀರಿ. ದೀರ್ಘ ಸಮಯದ ಒತ್ತಡಗಳು ನಿವಾರಣೆಯಾಗುತ್ತದೆ. ಹಾಗೆಯೇ ಪೂರ್ವಜರ ಆಸ್ತಿ ವ್ಯಾಜ್ಯಗಳು ನಿವಾರಣೆಯಾಗಿ ಗೆಲುವು ನಿಮ್ಮದಾಗಲಿದೆ.

ಅದೃಷ್ಟ ಸಂಖ್ಯೆ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 8

913
ವೃಶ್ಚಿಕ ರಾಶಿ
Image Credit : OTHERS

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರ ದಿನವಾಗಿದ್ದು, ಮಾಡುವ ಎಲ್ಲಾ ಕೆಲಸ ಮತ್ತು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಸಂಗಾತಿ ಅಥವಾ ಕುಟುಂಬದ ಹಿರಿಯರ ಸಲಹೆಗಳನ್ನು ಪರಿಗಣಿಸಿ. ಸಹೋದ್ಯೋಗಿಗಳ ಜೊತೆ ಕಿರಿಕಿರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಮನೆಯಿಂದ ಹೊರಗೆ ಹೋಗುವ ಮೊದಲು, ನಿಮ್ಮ ಹೆತ್ತವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ. ಇದರಿಂದ ಕೆಲಸದಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.

ಅದೃಷ್ಟ ಬಣ್ಣ: ಕೆಂಗಂದು

ಅದೃಷ್ಟ ಸಂಖ್ಯೆ: 3

1013
ಧನು ರಾಶಿ
Image Credit : OTHERS

ಧನು ರಾಶಿ

ಬುದ್ಧಿವಂತಿಕೆಯಿಂದ ಉತ್ತಮ ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದ್ರೆ ಹಠಾತ್ ವೆಚ್ಚಗಳಿಂದ ಹಣ ಉಳಿತಾಯ ಮಾಡಲು ಕಷ್ಟವಾಗಬಹುದು. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದು, ಆಪ್ತರಿಂದ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಸಿಗಲಿದೆ. ಹೊಸ ವಿಷಯಗಳ ಬಗ್ಗೆ ಜ್ಞಾನ ಸಿಗಲಿದ್ದು, ಸಹೋದ್ಯೋಗಿಗಳಿಂದ ಕಲಹ ಮಾಡಿಕೊಳ್ಳಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 4

1113
ಮಕರ ರಾಶಿ
Image Credit : SOCIAL MEDIA

ಮಕರ ರಾಶಿ

ಯಶಸ್ಸಿಗೆ ಇಂದು ತುಂಬಾ ಶ್ರಮಿಸಬೇಕಾಗುತ್ತದೆ. ಗೆಲುವಿಗಾಗಿ ಪ್ರತಿಯೊಂದು ವಿಷಯದಲ್ಲಿಯೂ ಗಮನ ಹರಿಸಿ ಕೆಲಸ ಮಾಡಿ. ಸಮಾಜದಲ್ಲಿ ಗೌರವ, ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೇ ನಡೆಯಲಿವೆ. ಕಿರಿಯರೊಂದಿಗೆ ವಾದಗಳು ಮತ್ತು ಭಿನ್ನಾಭಿಪ್ರಾಯಗಳ ಸಾಧ್ಯತೆ ಇದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ.

ಅದೃಷ್ಟ ಬಣ್ಣ: ಕಪ್ಪು

ಅದೃಷ್ಟ ಸಂಖ್ಯೆ: 10

1213
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

ಇಂದು ಕುಂಭ ರಾಶಿಯವರಿಗೆ ಸಂಪೂರ್ಣವಾಗಿ ಅನುಕೂಲಕರ ಮತ್ತು ಸಕಾರಾತ್ಮಕವಾಗಲಿದೆ.ಹೊಸ ವ್ಯವಹಾರ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ವೃತ್ತಿಜೀವನದಲ್ಲಿ ನಿಮಗೆ ಅನೇಕ ಶುಭ ಅವಕಾಶಗಳು ಸಿಗುತ್ತವೆ. ಅನಗತ್ಯ ಜಗಳ, ಗಾಸಿಪ್‌ಗಳಿಂದ ಅಂತರ ಕಾಯ್ದುಕೊಂಡ ಕೆಲಸದತ್ತ ಗಮನ ನೀಡಿ

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 11

1313
ಮೀನ ರಾಶಿ
Image Credit : OTHERS

ಮೀನ ರಾಶಿ

ಅನೇಕ ಹೊಸ ಮತ್ತು ಅತ್ಯುತ್ತಮ ವಿಚಾರಗಳು ನಿಮಗೆ ತಿಳಿಯಲಿವೆ. ಯಾವುದೇ ಹೊಸ ಕೆಲಸಗಳು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ ಮತ್ತು ಲಾಭವನ್ನು ನೀಡುತ್ತವೆ. ಸಹೋದ್ಯೋಗಿಗಳು ನಿಮ್ಮ ಕೆಲಸದ ಶೈಲಿಗೆ ಅತೃಪ್ತರಾಗಬಹುದು. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 12

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ದಿನ ಭವಿಷ್ಯ
ಜ್ಯೋತಿಷ್ಯ

Latest Videos
Recommended Stories
Recommended image1
ಏಳು ರಾಶಿಗೆ ಇಂದು ಬಂಪರ್‌ ರಾಜಯೋಗದಿಂದ ಹಠಾತ್ ಲಾಭ, 12 ರಾಶಿ ಭವಿಷ್ಯ ಇಲ್ಲಿದೆ
Recommended image2
ಮೇ 19 ರಂದು 6 ಯೋಗಗಳ ನಿರ್ಮಾಣ, ಈ 8 ರಾಶಿಗಳಿಗೆ ಅದೃಷ್ಟದ ಸುರಿಮಳೆ,12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ
Recommended image3
ಇಂದು 6 ರಾಶಿಗಳಿಗೆ ಸಮಸ್ಯೆಗಳ ಸುರಿಮಳೆ, 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ
Related Stories
Recommended image1
44 ವರ್ಷಗಳ ಬಳಿಕ 3 ರಾಶಿಚಕ್ರದ ಮೇಲೆ ಶನಿ ದೇವನ ದಯೆ; ತೆರೆಯಲಿದೆ ಅದೃಷ್ಟದ ಬಾಗಿಲು
Recommended image2
Adhik Maas 2026: ಅಧಿಕ ಮಾಸದಲ್ಲಿ ಈ 5 ವಸ್ತು ದಾನ ಮಾಡಿದ್ರೆ… ಅದೃಷ್ಟದ ಬಾಗಿಲು ಓಪನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved