'ಮಳೆಯಲಿ ಜತೆಯಲಿ' ಎಂದಿದ್ದ ನಟಿ ಯುವಿಕಾ ಚೌಧರಿ ಅರೆಸ್ಟ್!
ಮುಂಬೈ(ಅ. 19) ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Siingh) ಅವರನ್ನು ಬಂಧಿಸಿ ಬಿಡುಗಡೆ ಮಾಡಿದ ರೀತಿಯಲ್ಲಿಯೇ ನಟಿ ಯುವಿಕಾ ಚೌಧರಿ (Yuvika Chaudhary ) ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಏನಿದು ಪ್ರಕರಣ ಇಲ್ಲಿ ಇದೆ ವಿವರ.

ಇದು ಸುಮಾರು ಐದು ತಿಂಗಳ ಹಿಂದಿನ ಜಾತಿ ನಿಂದನೆ ವಿಡಿಯೋ ಪ್ರಕರಣ. ನಟಿ ಮೇಲೆ ಜಾತಿ ನಿಂದನೆ ದೂರು ದಾಖಲಾಗಿತ್ತು. ಸೋಮವಾರ ನಟಿಯನ್ನು ಹನಸಿ ಪೊಲೀಸರು ಬಂಧಿಸಿದ್ದರು.
ತನ್ನ ಮೇಲೆ ದಾಖಲಾದ ಪ್ರಕರಣ ಕೈ ಬಿಡಲು ನಟಿ ಮನವಿ ಸಲ್ಲಿಸಿದ್ದು ಪಂಜಾಬ್ ಹರ್ಯಾಣ ಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ತನ್ನ ಬ್ಲಾಗ್ ಮೂಲಕ ಜಾತಿ ನಿಂದನೆ ಮಾಡಿದ್ದ ಆರೋಪ ನಟಿ ಮೇಲೆ ಬಂದಿತ್ತು.
Yuvika Choudhary
ರಜತ್ ಕಲ್ಸನ್ ಎಂಬುವರು ನಟಿ ಮೇಲೆ ದೂರು ದಾಖಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕು ರಕ್ಷಣೆ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಯುವಿಕಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುವ ನಟಿ ಓಂ ಶಾಂತಿ ಓಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮಿಂಚಿದ್ದದರು. ಸೋಶಿಯಲ್ ಮೀಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಜತೆ ಮಳೆಯಲಿ ಜೊತೆಯಲಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಪ್ರಕರಣದಲ್ಲಿ ನಟಿ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.