- Home
- News
- Crime
- ಇನ್‌ಫ್ಲುಯೆನ್ಸರ್ ಸಾಧನಾ ಶೆಟ್ಟಿ ಹನಿಟ್ರ್ಯಾಪ್ ಕೇಸ್‌ಗೆ ರೋಚಕ ಟ್ವಿಸ್ಟ್: ಗಂಡನ ಕಳ್ಳಾಟ ಹೆಂಡ್ತಿಯಿಂದ ರಿವೀಲ್
ಇನ್‌ಫ್ಲುಯೆನ್ಸರ್ ಸಾಧನಾ ಶೆಟ್ಟಿ ಹನಿಟ್ರ್ಯಾಪ್ ಕೇಸ್‌ಗೆ ರೋಚಕ ಟ್ವಿಸ್ಟ್: ಗಂಡನ ಕಳ್ಳಾಟ ಹೆಂಡ್ತಿಯಿಂದ ರಿವೀಲ್
ಬೆಂಗಳೂರಿನ ಉದ್ಯಮಿ ಕಾರ್ತಿಕ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾಧನಾ ಶೆಟ್ಟಿ ತನ್ನನ್ನು ಹನಿಟ್ರಾಪ್ ಮಾಡಿದ್ದಾರೆಂದು ದೂರು ನೀಡಿದ್ದರು. ಆದರೆ, ಕಾರ್ತಿಕ್ ಪತ್ನಿ ಹರ್ಷಿತಾ, ಪತಿಯೇ ಸಾಧನಾಗೆ ಮದುವೆ ನೆಪದಲ್ಲಿ ಕಿರುಕುಳ ನೀಡಿ, ಈಗ ತಪ್ಪಿಸಿಕೊಳ್ಳಲು ಈ ಸಂಚು ರೂಪಿಸಿದ್ದಾನೆ ಎಂದು ಆರೋಪಿಸಿದ್ದಾರೆ

ಬೆಂಗಳೂರಿನ ಹನಿಟ್ಯಾಪ್ ಕೇಸ್
ಬೆಂಗಳೂರಿನ 31ರ ಹರೆಯದ ಉದ್ಯಮಿಯನ್ನು ಹನಿಟ್ರಾಪ್ ಬಲೆಗೆ ಬೀಳಿಸಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾಧನಾ ಶೆಟ್ಟಿ 1.5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು ಎನ್ನುವ ಕೇಸ್‌ಗೆ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ. ಈಕೆಯ ವಿರುದ್ಧ ಬೆಂಗಳೂರಿನ ಜಯನಗರದ ಪೊಲೀಸ್ ಠಾಣೆಯಲ್ಲಿ ಉದ್ಯಮಿ ದೂರು ದಾಖಲಿಸಿದ್ದರು, ಆದರೆ ಇದೀಗ ಕೇಸ್ ಉಲ್ಟಾ ಹೊಡೆದಿದೆ.

ನಾಟಕೀಯ ತಿರುವು
ಈಗ ಘಟನೆ ನಾಟಕೀಯ ತಿರುವು ಪಡೆದುಕೊಂಡಿದೆ. ಉದ್ಯಮಿ ಕಾರ್ತಿಕ್ ಎನ್ನುವವರು ಈಕೆಯ ವಿರುದ್ಧ ದೂರು ದಾಖಲಿಸಿದ್ದರೆ, ಇದೀಗ ಕಾರ್ತಿಕ್ ಪತ್ನಿ ಹರ್ಷಿತಾ ಸಾಧನಾ ಶೆಟ್ಟಿ ಪರವಾಗಿ ನಿಂತಿದ್ದು, ಪತಿಯೇ ತಪ್ಪಿತಸ್ಥರು ಎಂದಿದ್ದಾರೆ. ಸಾಧನಾ ಶೆಟ್ಟಿ ಭಾರಿ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದ ಕಾರ್ತಿಕ್‌ನೇ ಈ ಹಗರಣದ ಹಿಂದಿನ ನಿಜವಾದ ಅಪರಾಧಿ ಎಂದು ಅವರು ಆರೋಪಿಸಿದ್ದಾರೆ.
ಕಾರ್ತಿಕ್ ಹೇಳಿದ್ದೇನು?
ಕಾರ್ತಿಕ್ ನೀಡಿರುವ ದೂರಿನಲ್ಲಿ ಕೆಲ ಘಟನೆಗಳನ್ನು ಉಲ್ಲೇಖಿಸಿದ್ದರು. ಹಲವು ಬಾರಿ ಕಾಫಿ ಶಾಪ್ ಸೇರಿದಂತೆ ಇತೆರೆಡೆ ಭೇಟಿಯಾಗಿದ್ದೇವೆ. ಈ ವೇಳೆ ಸಾಧಾನ ಶೆಟ್ಟಿ ರಹಸ್ಯವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಆತ್ಮೀಯತೆಯಿಂದ ಚಾಟಿಂಗ್ ಮಾಡಿದ್ದಾರೆ. ಕೆಲ ಫೋಟೋ, ವಿಡಿಯೋಗಳನ್ನು ಮುಂದಿಟ್ಟುಕೊಂಡು ಇದೀಗ ಸಾಧಾನ ಶೆಟ್ಟಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಆರೋಪಿಸಿದ್ದರು.
ಪತಿಯ ಕಿತಾಪತಿ
ಆದರೆ ಇದೀಗ ಕಾರ್ತಿಕ್ ಅವರ ಪತ್ನಿ ಹರ್ಷಿತಾ, ಮದುವೆಯ ನೆಪದಲ್ಲಿ ಸಾಧನಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಮತ್ತು ನಂತರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಪೈಶಾಚಿಕ ಯೋಜನೆಯನ್ನು ರೂಪಿಸಿದ್ದು ಪತಿಯೇ ಎಂದಿದ್ದಾರೆ. ಕ್ಲಿನಿಕ್‌ನ ನಿರ್ದೇಶಕಿ ಎಂದು ಹೇಳಲಾಗುವ ಹರ್ಷಿತಾ, ಕಾರ್ತಿಕ್ ಪ್ರಮುಖ ಉದ್ಯಮಿಯಲ್ಲ, ಆದರೆ ಕ್ಲಿನಿಕ್‌ನ ಮಾರ್ಕೆಟಿಂಗ್ ನಿರ್ವಹಿಸುವ ಉದ್ಯೋಗಿ ಎಂದು ಈಗ ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ತಾನು ಕಾರ್ತಿಕ್‌ನ ದುಷ್ಟ ಸಂಚಿಗೆ ಬಿದ್ದೆ ಎಂದು ಅವಳು ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಲೈಂ*ಗಿಕ ಕಿರುಕುಳ
ಹರ್ಷಿತಾ ಅವರ ಪ್ರಕಾರ, ಸಾಮಾಜಿಕ ಮಾಧ್ಯಮ ತಾರೆ ಕಾರ್ತಿಕ್ ವಿವಾಹದ ನೆಪದಲ್ಲಿ ಲೈಂ*ಗಿಕ ಕಿರುಕುಳ ನೀಡಿದ್ದರು. ಕಾರ್ತಿಕ್ ಸಾಧನಾಳನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕರೆದೊಯ್ದು ಹೈದರಾಬಾದ್‌ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

