ನಿನ್ನ ಮಗಳ ಖಾಸಗಿ ಫೋಟೋ/ವಿಡಿಯೋ ಇದೆ: 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಯುವಕರು ಅರೆಸ್ಟ್
ತರಕಾರಿ ವ್ಯಾಪಾರಿಯೊಬ್ಬರಿಗೆ ಮಗಳ ಖಾಸಗಿ ಫೋಟೋ, ವಿಡಿಯೋ ತೋರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಬೆದರಿಕೆಗೆ ಒಳಗಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು.

ಕಾರವಾರ: ತರಕಾರಿ ವ್ಯಾಪಾರಿ ಎಂಬವರಿಗೆ ಹೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದ ಮೂವರು ಯುವಕರನ್ನು ಭಟ್ಕಳ ಶಹರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಭಟ್ಟಗಾಂವ್, ಕಿದ್ವಾಯಿ ರಸ್ತೆಯ ನಿವಾಸಿ ಅನ್ವರ್ ಭಾಷಾ (57) ಎಂಬವರನ್ನು ಮೂವರು ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ಭಟ್ಕಳ ಅಬ್ದುಹುರೇರಾ ಕಾಲೋನಿ ನಿವಾಸಿ ಮೊಹಮ್ಮದ ಫಾರಿಸ್, ಮೂಸಾನಗರದ ಮೊಹಮ್ಮದ್ ಅರ್ಶದ್ ಮತ್ತು ಕುಂದಾಪುರ ಹಾಲಾಡಿ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿ ಅಮನ್ ಬಂಧಿತ ಆರೋಪಿಗಳು. ಈ ಮೂವರು ವ್ಯಾಪಾರಿಗೆ ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂ. ಸುಲಿಗೆ ಮಾಡಲು ಮುಂದಾಗಿದ್ದರು.
ಏನಿದು ಪ್ರಕರಣ?
ಆರೋಪಿಗಳು ಆಗಸ್ಟ್ 16ರ ರಾತ್ರಿ ಅನ್ವರ್ ಭಾಷಾ ಅವರಿಗೆ ಕರೆ ಮಾಡಿ, ನಿನ್ನ ಮಗಳ ಖಾಸಗಿ ಫೋಟೋ ಮತ್ತು ವಿಡಿಯೋ ನಮ್ಮ ಬಳಿಯಲ್ಲಿದೆ. ತಕ್ಷಣವೇ 20 ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದ್ರೆ ಖಾಸಗಿ ಫೋಟೋ ಮತ್ತು ವಿಡಿನಯೋಗಳನ್ನು ಎಲ್ಲಾ ಕಡೆ ಶೇರ್ ಮಾಡಿ ನಿನ್ನ ಮಾನ ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ನಂತರ ಆಗಸ್ಟ್ 18 ಮತ್ತು 19ರಂದು ವ್ಯಾಪಾರಿ ಅನ್ವರ್ ಭಾಷಾ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ 15 ಲಕ್ಷ ರೂ. ಆದ್ರೂ ನೀಡಬೇಕೆಂದು ಒತ್ತಾಯಿಸಿದ್ದಾರೆ. ಬೆದರಿಕೆಗಳಿಂದ ಕಂಗಾಲಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮಗೂ ಮತ್ತು ಪತ್ನಿಗೆ ಕರೆ ಬಂದಿರುವ ಮಾಹಿತಿಯಯನ್ನು ನೀಡಿದ್ದಾರೆ.
ಅನ್ವರ್ ಭಾಷಾ ದೂರು ದಾಖಲಿಸಿಕೊಂಡು ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್. ಹಾಗೂ ಪಿಎಸ್‌ಐ ನವೀನ್ ಎಸ್. ನಾಯ್ಕ ನೇತೃತ್ವದ ತಂಡ ಕೊಂಚವೂ ತಡಮಾಡದೇ ತನಿಖೆ ಆರಂಭಿಸಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನ ನೀ