ಕಾಲ್‌ಗರ್ಲ್ಸ್ ಜೊತೆ ಸಿಕ್ಕಾಕೊಂಡ ಪತ್ರಕರ್ತ: ವಾಟ್ಸಾಪ್‌ನಲ್ಲಿ ಸೆಕ್ಸ್ ರಾಕೆಟ್ ದಂಧೆ!
ಲಾಕ್‌ಡೌನ್ ನಡುವೆ ಪೊಲೀಸರು ಸೆಕ್ಸ್ ರಾಕೆಟ್ ದಂಧೆ ಬಯಲು ಮಾಡಿದ್ದಾರೆ. ಪೊಲೀಸರು ಇಬ್ಬರು ಕಾಲ್‌ಗರ್ಲ್ಸ್, ಓರ್ವ ಪತ್ರಕರ್ತ ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ. ಇವರೆಲ್ಲರೂ ಲಾಕ್‌ಡೌನ್ ನಡುವೆ ಸೆಕ್ಸ್ ರಾಕೆಟ್ ದಂಧೆ ನಡೆಸುತ್ತಿದ್ದರು. ಪೊಲಿಸರ ಅನ್ವಯ ಇಲ್ಲಿ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಡೀಲ್ ನಡೆಯುತ್ತಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಈ ಇಡೀ ಡೀಲ್ ವಾಟ್ಸಾಪ್‌ನಲ್ಲಿ ನಡೆಯುತ್ತಿತ್ತು. ಈ ದಂಧೆ ಕೊಹನಾದ ಆರ್ಯನಗರದಲ್ಲಿ ನಡೆಯುತ್ತಿತ್ತು.
ಸಿಒ ಕಲೆಕ್ಟರ್‌ಗಂಜ್ ಶ್ವೇತಾ ಯಾದವ್ ಸ್ವರೂಪನಗರ ಹಾಗೂ ಕರ್ನಲ್ಗಂಜ್ ಪೊಲೀಸರೊಂದಿಗೆ ಆರ್ಯನಗರದಲ್ಲಿರುವ ಮನೆ ಸಂಖ್ಯೆ 8/58 ಕ್ಕೆ ದಾಳಿ ನಡೆಸಿ ಈ ದಂಧೆ ಬಹಿರಂಗಪಡಿಸಿದ್ದಾರೆ.
ಪೊಲೀಸರು ಕರ್ನಲ್‌ಗಂಜ್ ನಿವಾಸಿ ಸೆಕ್ಸ್ ರಾಕೆಟ್ ನಡೆಸತ್ತಿದ್ದ ಸಂಚಾಲಕ ಮೊಹಮ್ಮದ್ ಯೂನುಸ್, ಔರೆಯಾದ ಟಯರ್ ಉದ್ಯಮಿ ವಿಶಾಲ್ ಹಾಗೂ ಗೌರವ್ಮತ್ತು ನಗರದ ಇಬ್ಬರು ಯುವತಿಯರನ್ನು ಅರೆಸ್ಟ್ ಮಾಡಿದ್ದಾರೆ.
ಸಿಒ ಸ್ವರೂಪ್‌ನಗರ್ ಅಜಿತ್ ಸಿಂಗ್ ಚೌಹಾನ್ ಈ ಸಂಬಂಧ ಮಾಹಿತಿ ನೀಡುತ್ತಾ ಮೊಹಮ್ಮದ್ ಯೂನಿಸ್ ಚಾನೆಲ್ ಒಂದರ ಐಡಿ ಹಿಡಿದು ತಾನೊಬ್ಬ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಎಂದಿದ್ದಾರೆ.
ಇಲ್ಲಿ ಒಂದು ಸಾವಿರದಿಂದ ಐದು ಸಾವಿರದವರೆಗೆ ಇಲ್ಲಿ ಡೀಲ್ ನಡೆಯುತ್ತಿತ್ತು. ಈ ಎಲ್ಲಾ ವ್ವಹಾರ ವಾಟ್ಸಾಪ್ ಮೂಲಕವೇ ನಡೆಯುತ್ತಿತ್ತು. ಯೂನುಸ್ ಹತ್ತು ಸಾವಿರ ರೂಪಾಯಿಗೆ ಮನೆ ಬಾಡಿಗೆಗೆ ಪಡೆದಿದ್ದ.
ಇನ್ನು ಮನೆ ಮಾಲೀಕ ಕೂಡಾ ಈ ದಂಧೆ ನಡೆಯುತ್ತಿದ್ದ ಕಟ್ಟಡದಲ್ಲೇ ವಾಸಿಸುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಹೀಗಾಗಿ ಮನೆ ಮಾಲೀಕನ ವಿಚಾರಣೆಯೂ ಆರಂಭವಾಗಿದೆ.
ಕೆಲ ದಿನಗಳ ಹಿಂದಷ್ಟೇ ಗ್ರೇಟರ್ ನೊಯ್ಡಾದಲ್ಲೂ ಸೆಕ್ಸ್ ರಾಕೆಟ್ ಅಡ್ಡೆ ಮೇಲೆ ದಾಳಿ ನಡೆದಿತ್ತು. ಈ ವೇಳೆ ಇಬ್ಬರು ಯುವತಿಯರು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇಲ್ಲಿ ಭಾರೀ ಪ್ರಮಾಣದಲ್ಲಿ ಕಾಂಡೋಂ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿದ್ದವು.