ರಣಾವತ್ ಸಹೋದರಿಯರಿಗೆ ಬಿಗ್ ರಿಲೀಫ್... ಟಚ್ ಮಾಡಂಗಿಲ್ಲ ಎಂದ ಕೋರ್ಟ್!
ಮುಂಬೈ (ನ 24) ದೇಶದ್ರೋಹದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ರಣಾವತ್ ಸಹೋದರಿಯರಿಗೆ ಬಾಂಬೆ ಹೈಕೋರ್ಟ್ ರಿಲೀಫ್ ನೀಡಿದೆ. ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿಗೆ ಮುಂಬೈ ಹೈಕೋರ್ಟ್ ಇಂದು ಮಧ್ಯಂತರ ಚಾಮೀನು ನೀಡಿದೆ.
ದಾಖಲಾಗಿರುವ ಕೋಮುದ್ವೇಷ ಮತ್ತು ದೇಶದ್ರೋಹ ಪ್ರಕರಣಗಳಿಗೆ ಸಂಭಂದಿಸಿ ಜನವರಿ 8 ರಂದು ಮುಂಬೈ ಪೊಲೀಸರ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಕೋಮು ದ್ವೇಷ ಹರಡಲು ಪ್ರಯತ್ನಿಸಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಮುಂಬೈ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಮನವಿ ಸಲ್ಲಿಸಿದ್ದರು.
ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿರುವ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿ ನಿಗದಿ ಮಾಡಿರುವ ದಿನಾಂಕದ ಒಳಗೆ ಪೊಲೀಸರು ಸಹೋದರಿಯರ ವಿಚಾರಣೆಗೆ ತೆರಳುವಂತೆ ಇಲ್ಲ ಮತ್ತು ಕಂಗನಾ ಹಾಗೂ ರಂಗೋಲಿ ಇದರ ಬಗ್ಗೆ ಅಲ್ಲಿಯವರೆಗೆ ಯಾವಿದೆ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ತಿಳಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕಟೀವ್ ಆಗಿರುವ ಕಂಗನಾ ಬೋಲ್ಡ್ ಹೇಳಿಕೆ ನೀಡುವುದಕ್ಕೆ ಹೆಸರುವಾಸಿ.
ಕೆಲವೊಮ್ಮೆ ತಮಗೆ ಸಂಬಂಧ ಇಲ್ಲದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ.