ಸಲಿಂಗಿಯಾಗಿದ್ದ ಮಗ, ತನ್ನ ಜೊತೆ ಸಂಬಂಧ ಬೆಳೆಸಲು ಸೊಸೆಗೆ ಒತ್ತಾಯಿಸಿದ ಮಾಜಿ ಡಿಜಿಪಿ!
ಜಾರ್ಖಂಡ್‌ನ ಮಾಜಿ ಡಿಜಿಪಿ ಡಿಕೆ ಪಾಂಡೆ ಸೊಸೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಗಂಡ ಓರ್ವ ಸಲಿಂಗಿ, ಹೀಗಾಗಿ ತನ್ನ ಮಾವ ತನ್ನೊಂದಿಗೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪಾಂಡೆ ಜಾರ್ಖಂಡ್ ಡಿಜಿಪಿಯಾಗಿದ್ದ ವೇಳೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದರು. ಅವರು ಮಹಿಳೆಯರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಎಂಬ ಆಪ್ ಕೂಡಾ ಲಾಂಚ್ ಮಾಡಿದ್ದರು. ಆದರೀಗ ಖುದ್ದು ಅವರ ಸೊಸೆ ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಹಾಕಿದೆ. ಅವರ ಸೊಸೆ ರೇಖಾ ಮಿಶ್ರಾ ಶನಿವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ ತನ್ನ ಮಾವ ಬೇರೆಯವರೊಂದಿಗೂ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದಾರೆಂದು ಅವರು ದೂರಿದ್ದಾರೆ. ಸದ್ಯ ಪೊಲೀಸರು ಡಿಕೆ ಪಾಂಡೆ, ಅವರ ಪತ್ನಿ ಪೂನಂ ಹಾಗೂ ಪತಿ ಶುಭಾಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೇಖಾ ಹಾಗೂ ಶುಭಾಂಕರ್ ವಿವಾಹ ನಡೆದಿತ್ತು.
ರೇಖಾ ತನ್ನ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನೂ ಮಾಡಿದ್ದಾರೆ. ವರದಕ್ಷಿಣೆಗಾಗಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆಂದು ರೇಖಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ವಿರೋಧಿಸಿದಾಗ ಗಂಡನ ಮನೆಯವರು ಬೆದರಿಕೆ ಹಾಕುತ್ತಿದ್ದರು. ಈ ಹಿಂಸೆ ತಡೆಯಲು ಸಾಧ್ಯವಾಗದಾಗ ತಾನು ತಾಯಿ ಮನೆಗೆ ತೆರಳಿದೆ ಎಂದಿದ್ದಾರೆ. ರೇಖಾ ಬಿಜೆಪಿ ನಾಯಕ ಗಣೇಶ್ ಮಿಶ್ರಾ ಮಗಳು ಎಂಬುವುದು ಉಲ್ಲೇಖನೀಯ. ರೇಖಾ ಒಂದು ಎನ್‌ಜಿಒ ಕೂಡಾ ನಡೆಸುತ್ತಿದ್ದಾರೆ. ಗಣೇಶ್ ಮಿಶ್ರಾ ಖುದ್ದು ಮಗಳ ವಿಚಾರ ಸಂಬಂಧ ಡಿಎಸ್‌ಪಿ ಭೇಟಿಯಾಗಿದ್ದರು. ಇದಾದ ಬಳಿಕವೇ ಅವರು ದೂರು ದಾಖಲಿಸಿದ್ದಾರೆ. ಈ ಫೋಟೋ 2016ರ ಫೆಬ್ರವರಿಯಲ್ಲಿ ಮಹಾಶಿವರಾತ್ರಿ ವೆಳೆ ಕ್ಲಿಕ್ಕಿಸಿದ್ದಾಗೊದೆ.
ರೇಖಾ ಹಾಗೂ ಶುಭಾಂಕರ್ ವಿವಾಹ 2016ರ ಫೆಬ್ರವರಿ 15ಕ್ಕೆ ಅದ್ಧೂರಿಯಾಗಿ ನಡೆದಿತ್ತು. ಮದುವೆ ಬಳಿಕ ಅವರು ಅತ್ತೆ ಮಾವನ ಜೊತೆ ಜಮ್ಶೇಡ್‌ಪುರದ ಸರ್ಕಿಟ್ ಹೌಸ್ ಬಳಿಕ ಅಪಾರ್ಟ್‌ಮೆಂಟ್ ಒಂದರಲ್ಲಿ ಉಳಿದುಕೊಂಡಿದ್ದರು. ಇನ್ನು ಮದುವೆಯಾದ ಮರುದಿನವೇ ತನ್ನ ಗಂಡ ಸಲಿಂಗಿ ಎಂಬ ವಿಚಾರ ತನಗೆ ತಿಳಿಯಿತು, ಇದನ್ನು ಅಅತ್ತೆ ಮಾವವನಿಗೆ ತಿಳಿಸಿದಾಗ ಅವರು ಏನೂ ಆಗೇ ಇಲ್ಲವೆಂಬಂತೆ ವರ್ತಿಸಿದರು ಎಂದಿದ್ದಾರೆ ರೇಖಾ. ಅತ್ತೆ ಮಾವನಿಗೆ ಈ ಬಗ್ಗೆ ತಿಳಿದಿತ್ತು, ಹೀಗಾಗೇ ಅವರು ಶುಭಾಂಕರ್‌ಗೆ ಚಿಕಿತ್ಸೆ ನಿಡುವುದಾಗಿ ಹೇಳಿದರು ಎಂದೂ ತಿಳಿಸಿದ್ದಾರೆ.
ಹೀಗಾಗೇ ತಾನು ಶುಭಾಂಕರ್‌ನಲ್ಲಿ ಬದಲಾವಣೆಯಾಗಬಹುದೆಂದು ಮೂರು ವರ್ಷ ಕಾದೆ. ಆದರೆ ಅಷ್ಟರಲ್ಲಿ ಅತ್ತೆ ಮಾವ ಬೇರೆಯವರೊಂದಿಗೆ ಸಂಬಂಧ ಬೆಳೆಸಲು ಒತ್ತಾಯಿಸಿದರು. ಒಂದು ಬಾರಿ ನಾನು ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮಾವ ಅವರೊಒಂದಿಗೆ ಸಂಬಂಧ ಬೆಳೆಸಲು ಒತ್ತಾಯಿಸಿದರು. ಹೀಗಾಗೇ ಭಯದಿಂದ ಣಾನು ನನ್ನ ತಾಯಿ ಮನೆಗೆ ತೆರಳಿದೆ ಎಂದಿದ್ದಾರೆ ರೇಖಾ.
ಹಲವಾರು ಬಾರಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಇಂತಹ ಸಂದರ್ಭದಲ್ಲಿ ಅತ್ತೆ ಯಾವತ್ತೂ ನನ್ನ ಬಳಿ ಬಂದು ಎನ್‌ಜಿಒ ಮೇಲೆ ಗಮನ ಕೇಂದ್ರೀಕರಿಸುವಂತೆ ಸೂಚಿಸುತ್ತಿದ್ದರು ಎಂದಿದ್ದಾರೆ ರೇಖಾ. ಇನ್ನು ಈ ಹಿಂದೆ ಹೆಂಡತಿ ಹೆಸರಿನಲ್ಲಿ ಅಕ್ರಮವಾಗಿ ಕಟ್ಟಡ ಖರೀದಿಸುವ ಆರೋಪವೂ ಪಾಂಡೆ ವಿರುದ್ಧ ಕೇಳಿ ಬಂದಿತ್ತು.
ಜಾರ್ಖಂಡ್ ಡಿಜಿಪಿಯಾಗಿದ್ದ ವೇಳೆ ಡಿಕೆ ಪಾಂಡೆ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಭಾರೀ ಪ್ರಸಿದ್ಧಿ ಗಳಿಸಿದ್ದರು. ಆದರೀಗ ಅವರ ಸೊಸೆ ಮಾಡಿದ ಆರೋಪದಿಂದ ಅವರ ಹೆಸರಿಗೆ ಕಳಂಕ ಅಂಟಿಕೊಂಡಿದೆ..