ಪತ್ನಿ ಕಿರುಕುಳಕ್ಕೆ ಗಂಡನ ದುರಂತ ಅಂತ್ಯ ಪ್ರಕರಣ, ಅನೈತಿಕ ಸಂಬಂಧ ಆರೋಪದಲ್ಲೂ ಟ್ವಿಸ್ಟ್
ಪತ್ನಿ ಕಿರುಕುಳಕ್ಕೆ ಗಂಡನ ದುರಂತ ಅಂತ್ಯ ಪ್ರಕರಣ, ಅನೈತಿಕ ಸಂಬಂಧ ಆರೋಪದಲ್ಲೂ ಟ್ವಿಸ್ಟ್, ಆರೋಪಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪತ್ನಿ ಕಿರುಕುಳ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಅನೈತಿಕ ಸಂಬಂಧ ಆರೋಪ ಹಿಂದೆ ಹಲವು ಅನುಮಾನ ಕಾಡುತ್ತಿದೆ.

ಗಗನ್ ರಾವ್ ದುರಂತ ಅಂತ್ಯ ಹೇಗಾಯ್ತು?
ಬೆಂಗಳೂರಿನ ಗಿರಿನಗರ ನಿವಾಸಿ ಗಗನ್ ರಾವ್ ದುರಂತ ಅಂತ್ಯಕಂಡಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ರಾವ್ ಪತ್ನಿ ಕಿರುಕುಳದಿಂದ ಬದುಕು ಅಂತ್ಯಗೊಳಿಸಿದ್ದಾರೆ. ಗಗನ್ ರಾವ್ ಕುಟುಂಬಸ್ಥರು ಪತ್ನಿ ಕಿರುಕುಳ ಹಾಗೂ ಪತ್ನಿಗೆ ಅನೈತಿಕ ಸಂಬಂಧ ಆರೋಪ ಮಾಡಿದ್ದಾರೆ. ಆದರೆ ಪತ್ನಿ ಮೇಘನಾ ಜಾದವ್ ಆರೋಪ ನಿರಾಕರಿಸಿದ್ದಾರೆ.
ಮೃತನ ತಂಗಿ ಆರೋಪ ನಿರಾಕರಿಸಿ ಮೆಘನಾ ರಾವ್
ಎಂಟು ತಿಂಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಎರಡೇ ದಿನಕ್ಕೆ ಪತಿಗೆ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿತ್ತು ಎಂದು ಮೆಘನಾ ಜಾದವ್ ಹೇಳಿದ್ದಾರೆ. ಇಬ್ಬರ ಜೊತೆ ಪತಿಗೆ ಅನೈತಿಕ ಸಂಬಂಧ ಇತ್ತು. ಬಲವಂತ ಮಾಡಿ ಅವರ ಕುಟುಂಬದವರು ನನ್ನ ಜೊತೆ ಮದುವೆ ಮಾಡಿಸಿದ್ದಾರೆ ಎಂದು ಮೆಘನಾ ಜಾದವ್ ಆರೋಪಿಸಿದ್ದಾರೆ.
ನೀನು ಚೆನ್ನಾಗಿರು ಅಂತ ಹೇಳಿ ರೂಮ್ ಬಾಗಿಲು ಹಾಕಿಕೊಂಡಿದ್ರು
ಅವರ ಕುಟುಂಬದಲ್ಲಿ ಅವರ ಅಕ್ಕ ನಮ್ಮ ಮದುವೆಗೆ ಬಂದಿರಲಿಲ್ಲ. ಇಬ್ಬರ ಜೊತೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಬೇರೆಯವರ ಸಹವಾಸ ಬಿಟ್ಟುಬಿಡಿ ,ನಾವಿಬ್ರೂ ಚೆನ್ನಾಗಿರೋಣ ಅಂತ ಹೇಳಿದ್ದೆ. ನೆನ್ನೆ ಮನೆಗೆ ಬಂದವರೆ ನೀನು ಚೆನ್ನಾಗಿರು ಅಂತ ಹೇಳಿ ರೂಮ್ ಬಾಗಿಲು ಹಾಕಿಕೊಂಡಿದ್ರು ಎಂದು ಮೆಘನಾ ಹೇಳಿದ್ದಾರೆ.
ಕೊನೆಯ ಕ್ಷಣದಲ್ಲಿ ನಡೆದಿದ್ದೇನು?
ರೂಂಗೆ ತೆರಳಿ ಬಾಗಿಲು ಹಾಕಿಕೊಂಡ ಪತಿ ಗಗನ್ ರಾವ್, ರೂಮ್ ಲಾಕ್ ಮಾಡಿದ್ದರು. ಕೆಳಗಡೆ ಅಣ್ಣನನ್ನು ಕರೆದು ರೂಂ ತೆಗೆಸಿ ನೋಡುವಾಗ ಎಲ್ಲವೂ ಮುಗಿದ್ದು. ನೇತಾಡುತ್ತಿದ್ದ ದೇಹವನ್ನು ಇಳಿಸುವಾಗ ಸ್ಲಿಪ್ ಆಗಿ ಹಣೆಗೆ ಗಾಯವಾಗಿತ್ತು. ಬಳಿಕ ಆಸ್ಪತ್ರೆ ದಾಖಲು ಮಾಡಲಾಗಿತ್ತು ಎಂದು ಮೆಘನಾ ಹೇಳಿದ್ದಾರೆ. ಬೇರೆ ಯುವತಿ ಸಂಬಂಧದ ವಿಚಾರವಾಗಿಯೇ ಬದುಕು ಅಂತ್ಯಗೊಳಿಸಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ.
ಕೊನೆಯ ಕ್ಷಣದಲ್ಲಿ ನಡೆದಿದ್ದೇನು?
ಮೆಘನಾ ವಿರುದ್ದ ಗನನ್ ಕುಟುಂಬಸ್ಥರ ಗಂಭೀರ ಆರೋಪ
ಮೆಘನಾ ಜಾದವ್‌ಗೆ ಅನೈತಿಕ ಸಂಬಂಧ ಇತ್ತು. ಒಂದು ಬಾರಿ ಗಗನ್ ರಾವ್‌ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬ್ದಿದ್ದಳು. ಈ ವಿಚಾರವಾಗಿ ಜಗಳ ನಡೆಯುತ್ತಿತ್ತು. ಅವರ ಅನೈತಿಕ ಸಂಬಂಧದ ಕಾರಣವೇ ಈ ದುರಂತ ನಡೆದಿದೆ. ಗಗನ್ ಫ್ರೆಂಡ್, ಸಂಬಂಧಿಕರ ನಂಬರ್ ತಗೊಂಡು ಕಾಲ್ ಮಾಡ್ತಾ ಇದ್ಲು ಎಂದು ಮೃತ ಗನನ್ ಅಕ್ಕ ರಮ್ಯಾ ಆರೋಪಿಸಿದ್ದಾರೆ.
ಮೆಘನಾ ವಿರುದ್ದ ಗನನ್ ಕುಟುಂಬಸ್ಥರ ಗಂಭೀರ ಆರೋಪ
ವಾಮಾಚಾರ ಆರೋಪ
ಗಗನ್ ರಾವ್ ಯಾರ ಜೊತೆ ಮಾತನಾಡಿದರೂ ಜಗಳ ಮಾಡುತ್ತಿದ್ದಳು. ಸಂಶಯದಿಂದ ನೋಡುತ್ತಿದ್ದಳು. ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದ ಮೇಘನ, ಬಳಿಕ ವಾಪಸ್ ಬಂದು ಗಂಡನ ಮನೆಯಲ್ಲಿ ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಿಸಿದ್ದಾಳೆ ಎಂದು ಗಗನ್ ಕುಟುಂಬಸ್ಥರು ಆರೋಪಿಸಿದ್ದಾರೆ. ನಿನ್ನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ನೇಹಿತರು ಬಂದು ನೋಡಿದಾಗ ಡೋರ್ ಲಾಕ್ ಆಗಿತ್ತು. ಬಳಿಕ ಇತರರ ನೆರವಿನಿಂದ ಡೋರ್ ತೆರೆಯಲಾಗಿತ್ತು. ಈ ವೇಳೆ ಘಟನೆ ಬೆಳೆಕಿಗೆ ಬಂದಿದೆ ಎಂದು ರಮ್ಯಾ ಹೇಳಿದ್ದಾರೆ.