ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ, ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತಿಯೇ ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘೋರ ಕೃತ್ಯದಿಂದಾಗಿ ಗರ್ಭದಲ್ಲಿದ್ದ ಶಿಶು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಹಾವೇರಿ (ನ.10): ನಾಲ್ಕು ವರ್ಷಗಳಿಂದ ಪ್ರೀತಿ ಮದುವೆಯಾಗಿದ್ದ ಪತಿಯೇ ಆರು ತಿಂಗಳ ಗರ್ಭಿಣಿ ಪತ್ನಿಯ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ.

ಬಾಣಂತಿ ಹೊಟ್ಟೆಯಲ್ಲಿದ್ದ ಆರು ತಿಂಗಳ ಮಗು ಸಾವು

ಅಮೀರಬಿ ಮನಿಯಾರ (21) ಪತಿಯಿಂದ ಹಲ್ಲೆಗೊಳಗಾದ ಪತ್ನಿ, ಅಹ್ಮದರಾಜ್ ಮಕ್ತೇಸೂರ್ ಹಲ್ಲೆ ನಡೆಸಿರುವ ಆರೋಪಿ ಪತಿ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಬಾಣಂತಿ ಮಹಿಳೆಯ ಹೊಟ್ಟೆಯಲ್ಲಿದ್ದು ಆರು ತಿಂಗಳ ಶಿಶು ಮೃತಪಟ್ಟಿದೆ.

ನಾಲ್ಕು ವರ್ಷ ಪ್ರೀತಿಸಿದವನೇ ರಾಕ್ಷಸನಾದ

ಕಾರವಾರ ಜಿಲ್ಲೆ ಮುಂಡಗೋಡ ತಾಲೂಕಿನ ಓಣಿಕೇರಿ ಯುವತಿಯಾದ ಅಮೀರಬಿ, ಹಾನಗಲ್ ತಾಲೂಕಿನ ಅಹ್ಮದರಾಜ್ ಮಕ್ತೇಸೂರ್ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆ ನಂತರ ಅಹ್ಮದರಾಜ್ ಮತ್ತು ಅವರ ಕುಟುಂಬಸ್ಥರು ಅಮೀರಬಿಯ ಮೇಲೆ ನಿತ್ಯ ಹಲ್ಲೆ ನಡೆಸುತ್ತಿದ್ದರು ಎಂದು ಗಾಯಾಳು ಅಮೀರಬಿ ಆರೋಪಿಸಿದ್ದಾರೆ. ಗರ್ಭಿಣಿಯಾಗಿದ್ದರೂ ಕನಿಕರ ಕರುಣೆ ಇಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕುತ್ತಿಗೆ, ಕೈ ಕಾಲುಗಳ ಮೇಲೆ ರಕ್ತ ಹೆಪ್ಪುಗಟ್ಟಿದಂತಾಗಿದೆ. ಸದ್ಯ ಗಂಭೀರ ಪೆಟ್ಟುಗಳಿಂದಾಗಿ ಅಮೀರಬಿಯನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.