ಬೆಂಗಳೂರಿನ ಡ್ಯಾನ್ಸರ್ ತುಂಗಭದ್ರಾ ಹೊಳೆಯಲ್ಲಿ ಮುಳುಗಿ ಸಾವು
ಬೆಂಗಳೂರಿನ ಡ್ಯಾನ್ಸರ್ ತುಂಗಭದ್ರಾ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲರ್ ಡ್ಯಾನ್ಸ್ ಟೀಮ್ ಇನ್ ಚಾರ್ಜ್ ಆಗಿದ್ದ ಗಿರೀಶ್ ಎಂಬಾತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕಲರ್ಸ್ ಡ್ಯಾನ್ಸ್ ಟೀಮ್ ತಂಡದ ಸದಸ್ಯನಾಗಿದ್ದ ಈತ ತಂಡದೊಂದಿಗೆ ಶುಕ್ರವಾರ ಕಾರ್ಯಕ್ರಮಕ್ಕೆಂದು ಹೊನ್ನಾಳಿಗೆ ಬಂದಿದ್ದ. ಹೊನ್ನಾಳಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಪ್ರವಾಸಿ ಮಂದಿರದಲ್ಲಿ ಸ್ಟೇ ಆಗಿದ್ದರು.
ಬಿಸಿಲು , ಸೆಕೆ ಇದ್ದುದರಿಂದ ತುಂಗಭದ್ರಾ ಹೊಳೆಗೆ ಸ್ನಾನಕ್ಕೆ ಹೋಗಿದ್ದ ಗಿರೀಶ್ ಹಾಗು ಆತನ ಸ್ನೇಹಿತ. ಸ್ನೇಹಿತನನ್ನು ರಕ್ಷಿಸಲು ಹೋಗಿ ಹರಿಯುತ್ತಿದ್ದ ಹೊಳೆ ನೀರಿನಲ್ಲಿ ಸಿಲುಕಿ ಸಾವು.
ತುಂಗ ಭದ್ರಾ ಹೊಳೆಗೆ ಮೊದಲು ಬಿದ್ದ ಸ್ನೇಹಿತ ಬಚಾವ್, ಸ್ನೇಹಿತನನ್ನು ಉಳಿಸಲು ಹೋಗಿ ದುರಂತ ಸಾವು ಕಂಡ ಡಾನ್ಸರ್ ಗಿರೀಶ್ .