- Home
- News
- Crime
- Divya Vasanth ಸಭ್ಯಸ್ಥ, ಗೌರವಾನ್ವಿತ ಹೆಣ್ಣು ಮಗಳು; CD, ಬಿಯರ್ ಕುಡಿದ ಬಗ್ಗೆಯೂ ಆನಂದ್ ಗುರೂಜಿ ರಿಯಾಕ್ಷನ್
Divya Vasanth ಸಭ್ಯಸ್ಥ, ಗೌರವಾನ್ವಿತ ಹೆಣ್ಣು ಮಗಳು; CD, ಬಿಯರ್ ಕುಡಿದ ಬಗ್ಗೆಯೂ ಆನಂದ್ ಗುರೂಜಿ ರಿಯಾಕ್ಷನ್
ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರು ಇತ್ತೀಚೆಗೆ ದಿವ್ಯಾ ವಸಂತ ಎನ್ನುವವರ ವಿರುದ್ಧ ಆರೋಪ ಮಾಡಿದ್ದರು. “ನನಗೆ ಮೋಸ ಆಗಿದೆ. ನನ್ನ ವಿಡಿಯೋ ಇದೆ ಅಂತ ಹೆದರಿಸುವುದಲ್ಲದೆ, ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ” ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಆನಂದ್ ಗುರೂಜಿ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

“ನಿಮ್ಮ ಸಿಡಿ ನನ್ನ ಬಳಿ ಇದೆ. ಡೀಲ್ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್ ಆಗುವುದು. ನಿಮ್ಮ ಆಶ್ರಮವೂ ಸರ್ಕಾರಿ ಜಾಗದ್ದು” ಎಂದು ಆನಂದ್ ಗುರೂಜಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತಂತೆ. ಹೀಗಾಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈಗ ಈ ವಿಚಾರವಾಗಿ ಆನಂದ್ ಗುರೂಜಿ ಅವರು ಅವನಿಯಾನ ಎನ್ನುವ ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ.
“ಆನಂದ್ ಗುರೂಜಿ ಹೆಸರು ಹೇಳಿ, ನಿಮ್ಮ ಮೋಜು ಮಸ್ತಿಗೋಸ್ಕರ ಬಳಸಿಕೊಳ್ಳಿ. ನನ್ನ ಹೆಸರು ಹೇಳಿಕೊಂಡು ದುಡ್ಡು ಮಾಡಿದ್ರೆ ಒಳ್ಳೆಯ ಕಾರ್ಯಕ್ಕೆ ಮಾಡಿಕೊಳ್ಳಿ. ಕೆಲ ಯುಟ್ಯೂಬರ್‌ಗಳು ನನ್ನ ಬಗ್ಗೆ ಇಲ್ಲಸಲ್ಲದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಧರ್ಮದ ಗುರುವನ್ನು ಬಿಡದೆ ಈ ಥರ ಮಾಡಿದೋರು, ಅಪ್ಪ-ಅಮ್ಮನನ್ನು ಕೂಡ ಬಿಡೋದಿಲ್ಲ” ಎಂದು ಆನಂದ್ ಗುರೂಜಿ ಹೇಳಿದ್ದಾರೆ.
“ಕೃಷ್ಣಮೂರ್ತಿ ಎನ್ನುವಾತ ನನ್ನ ಬಗ್ಗೆ ಇಲ್ಲಸಲ್ಲದ ವಿಡಿಯೋಗಳನ್ನು ಮಾಡಿದ್ದಾನೆ. ಇವರ ಜೊತೆ ದಿವ್ಯಾ ವಸಂತ ಎನ್ನುವಂತಹ ಹೆಣ್ಣು ಮಗಳಿದ್ದಾಳೆ. ಅವಳು ಸಭ್ಯಸ್ಥೆ, ರಾಜ್ಯದಲ್ಲಿ ಗೌರವಾನ್ವಿತ ವ್ಯಕ್ತಿ, ಹೆಣ್ಣು ಅಂದ್ರೆ ಈಕೆಯನ್ನೇ ನೋಡಬೇಕು. ಇವಳಲ್ಲಿರುವ ಗುಣ ಬೇರೆ ಮನೆಯ ಹೆಣ್ಣು ಮಕ್ಕಳಿಗೆ ಬಂದುಬಿಟ್ರೆ.. ಏನಾಗತ್ತೆ ಅನ್ನೋದನ್ನು ನಾನು ಹೇಳೋದಿಲ್ಲ” ಎಂದು ಆನಂದ್ ಗುರೂಜಿ ಹೇಳಿದ್ದಾರೆ.
“ಆನಂದ್ ಗುರೂಜಿ ಗಂಡಸರಾಗಿದ್ರೆ…. ಅಂತ ದಿವ್ಯಾ ವಸಂತಾ ಹೇಳ್ತಾಳೆ. ನನಗೂ ಅವಳ ವಯಸ್ಸಿನ ಮಗಳಿದ್ದಾಳೆ. ಈ ಥರ ಮಾತಾಡಿದರೆ ಅವಳ ಗಂಡ ಹೇಗೆ ಸಹಿಸಿಕೊಳ್ಳಬೇಕು. ಅವಳ ಪ್ರೀತಿಸುವ ಹುಡುಗನಿಗೆ ಇಷ್ಟ ಆಗಬಹುದು. ನನ್ನ ಬಗ್ಗೆ ಸ್ಕ್ರಿಪ್ಟ್ ಬರೆದುಕೊಟ್ಟರೆ ಅದಿಕ್ಕೆ ಸಾಕ್ಷಿ ಏನು ಅಂತ ಕೇಳದೆ, ನ್ಯೂಸ್ ಓದುವ ದಿವ್ಯಾ ವಸಂತಗೆ ಏನು ಹೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
“ಲಕ್ಷಾಂತರ ಜನರು ಪ್ರಸಾದ ಸ್ವೀಕರಿಸೋ ಈ ಜಾಗವನ್ನು ಸರ್ಕಾರಿ ಜಾಗ ಅಂತ ಹೇಳ್ತಾಳೆ, ಇದಕ್ಕೆ ಏನು ಹೇಳಬೇಕು. ನನ್ನ ಸ್ವಂತ ಜಾಗದಲ್ಲಿ ನಾನು ಆಶ್ರಮ ಮಾಡಿದ್ದೇನೆ. ಇಂಥ ನೀಚ ಕೆಲಸ ಮಾಡೋ ಬದಲು ಬೇರೆಯವರ ಮನೆ ಬಚ್ಚಲು ಬಾಚಿದ್ರೆ ತಪ್ಪಿಲ್ಲ” ಎಂದು ಅವರು ಹೇಳಿದ್ದಾರೆ.
“ಕೃಷ್ಣಮೂರ್ತಿ ಎನ್ನುವವನ ಬಳಿ ಏನೇ ದಾಖಲುಗಳಿದ್ದರೂ ಕೂಡ, ಅದನ್ನು ಅದಕ್ಕೆ ಸಂಬಂಧಪಟ್ಟ ಡಿಪಾರ್ಟ್‌ಮೆಂಟ್‌ಗೆ ತಂದುಕೊಡಿ. ಕೋರ್ಟ್‌ನಲ್ಲಿರೋ ಇಂಜೆಕ್ಷನ್ ಆರ್ಡರ್ ಉಲ್ಲಂಘಿಸಿ ಕೃಷ್ಣಮೂರ್ತಿ ಅವರು ಸುದ್ದಿಗೋಷ್ಠಿ ಮಾಡಿದ್ರೆ ಕಾನೂನಿಗೆ ಕೂಡ ಬೆಲೆ ಕೊಡಲ್ಲ ಅಂತಾಯ್ತು. ನಾನು ಬಿಯರ್ ಕುಡಿಯುವೆ ಎಂದು ಹೇಳಿರೋ ವ್ಯಕ್ತಿಯ ಪರಿಚಯ ಇದೆ. ನನಗೂ ಅವನಿಗೂ ವಯಸ್ಸಿನ ಅಂತರ ಇದೆ. ನಾನು ಬಾರ್‌ನಲ್ಲಿ ಬಿಯರ್ ಕುಡಿಯುವಾಗ ಆ ಹುಡುಗ ಅಲ್ಲಿಗೆ ಬಂದಿದ್ನಾ?” ಎಂದು ಪ್ರಶ್ನೆ ಮಾಡಿದ್ದಾರೆ.
“ಒಂಭತ್ತು ವರ್ಷಗಳ ಹಿಂದೆ ತಮಿಳುನಾಡು ಗಂಡ-ಹೆಂಡತಿಯ ಸಿಡಿಗೆ ನನ್ನ ಸಿಡಿ ಎಂದು ಹೇಳಿದ್ದರು. ಇದರ ಬಗ್ಗೆ ಕೋರ್ಟ್ ಮೆಟ್ಟಿಲೇರಿದೆ. ಏಳರಿಂದ ಎಂಟು ವರ್ಷಗಳ ಕಾಲ ಅದು ಕೋರ್ಟ್‌ನಲ್ಲಿತ್ತು. ಯಾರು ವಿಡಿಯೋ ಹಾಕಿದ್ರೋ ಅವ್ರಿಗೆ ಕೋರ್ಟ್‌ಗೆ ಅಲೆಯೋಕೆ ದುಡ್ಡಿಲ್ಲ ಅಂತ ಒಂದು ಸೆಟಲ್‌ಮೆಂಟ್‌ಮಾಡಬೇಕು ಅಂತಾಯ್ತು. ಹೀಗಾಗಿ ಅವನು ಕ್ಷಮಾ ಪತ್ರ ಬರೆದುಕೊಟ್ಟಿದ್ದನು. ಅದನ್ನು ಇಟ್ಟುಕೊಂಡು ಕೃಷ್ಣಮೂರ್ತಿ ಒಂದಷ್ಟು ವಿಡಿಯೋ ಮಾಡಿದ್ದಾನೆ” ಎಂದು ಹೇಳಿದ್ದಾರೆ.