ಹೆಲ್ಮೆಟ್ ಇಲ್ಲದ ಚಾಲನೆ, ರಸ್ತೆ ಅಪಘಾತಕ್ಕೆ ಬಲಿಯಾದ ರಿಪೋರ್ಟರ್
ನ್ಯೂಯಾರ್ಕ್(ಜು.21) ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಇಂಡೋ ಅಮೆರಿಕನ್ ವರದಿಗಾರ್ತಿ ನೀನಾ ಕಪೂರ್ ಸಾವನ್ನಪ್ಪಿದ್ದಾರೆ. ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
ರಸ್ತೆ ಅಪಘಾತಕ್ಕೆ ಬಲಿಯಾದ ಇಂಡೋ ಅಮೆರಿಕನ್ ವರದಿಗಾರ್ತಿ
ಅಮೇಜಿಂಗ್ ಸ್ಟೋರಿ ಟೆಲ್ಲರ್ ಎಂದೇ ಹೆಸರು ಮಾಡಿದ್ದ ಕಪೂರ್ ನ್ಯೂಯಾರ್ಕ್ ನಲ್ಲಿ ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ನೀನಾ ನಮ್ಮ ವಾಹಿನಿ ಸೇರಿದ್ದರು. ಅತ್ಯುತ್ತಮ ವರದಿಗಾರ್ತಿ ಎಂದು ಹೆಸರು ಸಂಪಾದನೆ ಮಾಡಿದ್ದರು ಎಂದು ನಿನಾ ಅವರನ್ನು ಸಿಬಿಎಸ್2 ವಾಹಿನಿ ನೆನಪು ಮಾಡಿಕೊಳ್ಳುತ್ತದೆ.
ಬಾಡಿಗೆ ಸ್ಕೂಟರ್ ನಲ್ಲಿ 26 ವರ್ಷದ ವ್ಯಕ್ತಿಯೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡಿದ್ದ ಕಪೂರ್ ಮತ್ತು ಸಣ್ಣ ಪುಟ್ಟ ಗಾಯಗಳಾಗಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಪೂರ್ ಮೃತಪಟ್ಟಿದ್ದಾರೆ.
ನ್ಯೂಟೌನ್ ನಿವಾಸಿಯಾಗಿದ್ದ ನಿನಾ ತಮ್ಮ ಅಜಯ್ ಮತ್ತು ತಂದೆಯೊಂದಿಗೆ ವಾಸವಿದ್ದರು.
ಈ ಬಗ್ಗೆ ತನಿಖೆ ನಡೆಯುತ್ತಿದ್ದು ವಾಹನದಲ್ಲಿದ್ದ ಇಬ್ಬರು ಹೆಲ್ಮೆಟ್ ಧರಿಸಿಲ್ಲ ಎಂಬುದು ಆರಂಭದ ತನಿಖೆಯಲ್ಲಿ ಗೊತ್ತಾಗಿದೆ.
ರೋಜ್ ನರ್ ಸೆಡ್ ನತಿಂಗ್, ಬಿಹೈಂಡ್ ದ ಸೀನ್ಸ್ ಮೂಲಕ ನೀನಾ ಜನರಿಗೆ ಹತ್ತಿರವಾಗಿದ್ದರು.
CBS2 ಸೇರುವುದಕ್ಕೆ ಮುನ್ ನೀನಾ ನ್ಯೂಸ್ 12 ನಲ್ಲಿ ಕೆಲಸ ಮಾಡುತ್ತಿದ್ದರು.
ನ್ಯೂಸ್ 12 ಸಿಬ್ಬಂದಿ ಸಹ ನಿನಾ ಕಪೂರ್ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ.
ಡಿಜಿಟಲ್ ಪತ್ರಿಕೋದ್ಯಮದಲ್ಲಿಯೂ ನಿನಾ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.