- Home
- Sports
- Cricket
- Yuvraj Samra: ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ
Yuvraj Samra: ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ
ಕೆನಡಾದ ಆರಂಭಿಕ ಆಟಗಾರ ಯುವರಾಜ್ ಸಮ್ರಾ, ಕೇವಲ 19ನೇ ವಯಸ್ಸಿನಲ್ಲಿ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ಮುರಿದು, ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
16

Image Credit : Getty
ಚೆನ್ನೈನಲ್ಲಿ ಯುವರಾಜ್ ಸಮ್ರಾ ಸ್ಪೋಟಕ ಶತಕ
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ 'ಡಿ' ಗುಂಪಿನ ಪಂದ್ಯದಲ್ಲಿ ಕೆನಡಾದ ಆರಂಭಿಕ ಆಟಗಾರ ಯುವರಾಜ್ ಸಮ್ರಾ, ನ್ಯೂಜಿಲೆಂಡ್ ವಿರುದ್ಧ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದರು. ಅಲ್ಲದೆ, ಸಹಾಯಕ ರಾಷ್ಟ್ರವೊಂದರಿಂದ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
26
Image Credit : Getty
ಅಹ್ಮದ್ ಶೆಹಜಾದ್ ದಾಖಲೆ ನುಚ್ಚುನೂರು
ಈ ಸ್ಫೋಟಕ ಇನ್ನಿಂಗ್ಸ್ ಆಡುವಾಗ ಯುವರಾಜ್ ಸಮ್ರಾಗೆ ಕೇವಲ 19 ವರ್ಷ 141 ದಿನ ವಯಸ್ಸಾಗಿತ್ತು. ಇದರೊಂದಿಗೆ, 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ಪಾಕಿಸ್ತಾನದ ಅಹ್ಮದ್ ಶೆಹಜಾದ್ (22 ವರ್ಷ 127 ದಿನ) ಅವರ ದಶಕದ ಹಳೆಯ ದಾಖಲೆಯನ್ನು ಮುರಿದರು.
ಟಿ20 ವಿಶ್ವಕಪ್‌ನಲ್ಲಿ ಅತೀ ಕಿರಿಯ ಶತಕವೀರರು
- ಯುವರಾಜ್ ಸಮ್ರಾ (ಕೆನಡಾ): 19 ವರ್ಷ 141 ದಿನ (v ನ್ಯೂಜಿಲೆಂಡ್, 2026)
- ಅಹ್ಮದ್ ಶೆಹಜಾದ್ (ಪಾಕಿಸ್ತಾನ): 22 ವರ್ಷ 127 ದಿನ (v ಬಾಂಗ್ಲಾದೇಶ, 2014)
- ಸುರೇಶ್ ರೈನಾ (ಭಾರತ): 23 ವರ್ಷ 156 ದಿನ (v ದಕ್ಷಿಣ ಆಫ್ರಿಕಾ, 2010)
- ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್): 25 ವರ್ಷ 83 ದಿನ (v ಶ್ರೀಲಂಕಾ, 2014)
36
Image Credit : Getty
ಟಿ20 ವಿಶ್ವಕಪ್‌ನಲ್ಲಿ ಅತೀ ಕಿರಿಯ ಶತಕವೀರರು
- ಯುವರಾಜ್ ಸಮ್ರಾ (ಕೆನಡಾ): 19 ವರ್ಷ 141 ದಿನ (v ನ್ಯೂಜಿಲೆಂಡ್, 2026)
- ಅಹ್ಮದ್ ಶೆಹಜಾದ್ (ಪಾಕಿಸ್ತಾನ): 22 ವರ್ಷ 127 ದಿನ (v ಬಾಂಗ್ಲಾದೇಶ, 2014)
- ಸುರೇಶ್ ರೈನಾ (ಭಾರತ): 23 ವರ್ಷ 156 ದಿನ (v ದಕ್ಷಿಣ ಆಫ್ರಿಕಾ, 2010)
- ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್): 25 ವರ್ಷ 83 ದಿನ (v ಶ್ರೀಲಂಕಾ, 2014)
46
Image Credit : Getty
ಕೆನಡಾಗೆ ಸ್ಪೋಟಕ ಆರಂಭ ಒದಗಿಸಿಕೊಟ್ಟ ಯುವರಾಜ್ ಸಮ್ರಾ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೆನಡಾಕ್ಕೆ ಸಮ್ರಾ ಸ್ಫೋಟಕ ಆರಂಭ ನೀಡಿದರು. ನಾಯಕ ದಿಲ್‌ಪ್ರೀತ್ ಬಜ್ವಾ ಜೊತೆ ಮೊದಲ ವಿಕೆಟ್‌ಗೆ 116 ರನ್‌ಗಳ ಜೊತೆಯಾಟವಾಡಿದರು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಳಿಕ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್ ಅವರಂತಹ ಬೌಲರ್‌ಗಳನ್ನು ದಂಡಿಸಿದರು. ಒಟ್ಟು 65 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಿತ 110 ರನ್ ಗಳಿಸಿ, ಗ್ಲೆನ್ ಫಿಲಿಪ್ಸ್‌ಗೆ ಕ್ಯಾಚ್ ನೀಡಿ ಔಟಾದರು. 103 ರನ್ ಗಳಿಸಿದ್ದಾಗ ಜಿಮ್ಮಿ ನೀಶಮ್ ಕ್ಯಾಚ್ ಕೈಬಿಟ್ಟು ಜೀವದಾನ ನೀಡಿದ್ದರು.
56
Image Credit : Getty
ಯುವರಾಜ್ ಕ್ರಿಕೆಟಿಗನಾಗಲು ತಂದೆಯ ಪಾತ್ರ
ಯುವರಾಜ್ ಸಮ್ರಾ ಯಶಸ್ಸಿನ ಹಿಂದೆ ತಂದೆ ಬಲ್ಜೀತ್ ಬಾಲಿ ಸಮ್ರಾ ಅವರ ಶ್ರಮವಿದೆ. ಯುವರಾಜ್ ಸಿಂಗ್ ಅವರ ದೊಡ್ಡ ಅಭಿಮಾನಿಯಾಗಿರುವ ಅಮೃತಸರ ಮೂಲದ ಬಲ್ಜೀತ್, ಮಗನಿಗೆ ಅದೇ ಹೆಸರಿಟ್ಟರು. ಕೆನಡಾದಲ್ಲಿ ನೆಲೆಸಿದ್ದರೂ, ಮಗನ ತರಬೇತಿಗಾಗಿ ಭಾರತ, ಅಮೆರಿಕ, ಕೆರಿಬಿಯನ್ ದೇಶಗಳಿಗೆ ಕರೆದೊಯ್ದಿದ್ದರು. ಅಮರಿಂದರ್ ಭಿಂದರ್, ಗಗನ್‌ದೀಪ್ ಸಿಂಗ್ ಅವರಂತಹ ಕೋಚ್‌ಗಳ ಬಳಿ ತರಬೇತಿ ಪಡೆದ ಸಮ್ರಾ, ಇಂದು ದೊಡ್ಡ ವೇದಿಕೆಯಲ್ಲಿ ಮಿಂಚಿದ್ದಾರೆ.
66
Image Credit : Getty
ಪಂದ್ಯ ಸೋತರು ಅಭಿಮಾನಿಗಳ ಮನಗೆದ್ದ ಸಮ್ರಾ
ಸಮ್ರಾ ಅವರ ಶತಕದ ಬಲದಿಂದ ಕೆನಡಾ 20 ಓವರ್‌ಗಳಲ್ಲಿ 173/4 ರನ್ ಗಳಿಸಿತು. ಆದರೆ, ನ್ಯೂಜಿಲೆಂಡ್ ಈ ಗುರಿಯನ್ನು 15.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ರಚಿನ್ ರವೀಂದ್ರ (59*) ಮತ್ತು ಗ್ಲೆನ್ ಫಿಲಿಪ್ಸ್ (76*) ಕಿವೀಸ್‌ಗೆ 8 ವಿಕೆಟ್‌ಗಳ ಜಯ ತಂದುಕೊಟ್ಟರು. ಪಂದ್ಯ ಸೋತರೂ, ಸಮ್ರಾ ಅವರ ಆಟ ಟೂರ್ನಿಯ ಹೈಲೈಟ್ ಆಗಿದೆ. ಐಪಿಎಲ್‌ನಂತಹ ಲೀಗ್‌ಗಳಲ್ಲಿ ಆಡುವ ತಾಕತ್ತು ತನಗಿದೆ ಎಂದು ಅವರು ನಿರೂಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

