ಈ ಖ್ಯಾತ ಕ್ರಿಕೆಟಿಗನ ತಾಯಿಯನ್ನು ಮನೆಯಲ್ಲೇ ಕೂಡಿ ಬೀಗ ಹಾಕುತ್ತಿದ್ದರಂತೆ! ಹೀಗೂ ಇರ್ತಾರಾ?
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನಟ ಯೋಗರಾಜ್ ಸಿಂಗ್, ತಮ್ಮ ಮಗನನ್ನು ಜಗತ್ತಿನ ದಿಗ್ಗಜ ಕ್ರಿಕೆಟಿಗನನ್ನಾಗಿ ಮಾಡಲು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮೊದಲ ಸಲ ಮನಬಿಚ್ಚಿ ಮಾತನಾಡಿದ್ದಾರೆ. ಈ ಪೈಕಿ ಕೆಲವೊಂದು ಮಾತುಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿವೆ.

ಮನಬಿಚ್ಚಿ ಮಾತನಾಡಿದ ಯುವಿ ತಂದೆ
ಭಾರತದ ಮಾಜಿ ಕ್ರಿಕೆಟಿಗ ಹಾಗೂ ನಟ ಯೋಗರಾಜ್ ಸಿಂಗ್ ತಮ್ಮ ಮೊದಲ ಪತ್ನಿ ಶಬ್ನಮ್ ಅವರ ಮೇಲೆ ಹಾಕಿದ ಕಠಿಣ ಕ್ರಮಗಳ ಬಗ್ಗೆ ಇದೇ ಮೊದಲ ಸಲ ಮೆಲುಕು ಹಾಕಿದ್ದಾರೆ. ತಮ್ಮ ಮಗನನ್ನು ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಲು ಅವರ ಹಾಕಿದ ಶ್ರಮದ ಬಗ್ಗೆ ಮಾತನಾಡಿದ್ದಾರೆ.
ಮತ್ತೆ ಸುದ್ದಿಯಲ್ಲಿ ಯೋಗರಾಜ್ ತಂದೆ
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗ ಯುವಿಯನ್ನು ವಿಶ್ವಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಲು ಹೊರಟಾಗ ಅದು ತಮ್ಮ ಕುಟುಂಬದ ಮೇಲೂ ಪರಿಣಾಮ ಬೀರಿತು ಎಂದಿದ್ದಾರೆ.
ಪತ್ನಿಯನ್ನು ಮನೆಯೊಳಗೆ ಕೂಡಿಹಾಕಿದ್ದ ಯೋಗರಾಜ್
ನನ್ನ ಅನುಮತಿ ಇಲ್ಲದೇ ನನ್ನ ಪತ್ನಿ ಮನೆಯಿಂದ ಹೊರಗೆ ಹೋಗಲು ಅವಕಾಶ ಇರಲಿಲ್ಲ. ಆಕೆಯ ಕುಟುಂಬದವರು ನಮ್ಮ ಮನೆಗೆ ಬರಲು ಅವಕಾಶ ಇರಲಿಲ್ಲ. ಆಕೆಯನ್ನು ಮನೆಯಲ್ಲೇ ಕೂಡಿಹಾಕಿರುತ್ತಿದ್ದೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ತಂದೆಯಿಂದ ಕಲಿತ ಕಠಿಣ ಶಿಸ್ತು
ನಾನು ವಿದೇಶಿಯರು ನಡೆಸುವ ಶಾಲೆಗೆ ಹೋಗಿದ್ದೆ. ಅವರು ಮತ್ತು ನನ್ನ ತಂದೆ ನನ್ನಲ್ಲಿ ಬೆಳೆಸಿದ ಶಿಸ್ತನ್ನೇ ನಾನು ಇತರರಿಗೆ ವರ್ಗಾಯಿಸಿದೆ. ಅದು ನನ್ನ ಹೆಂಡತಿಯಿಂದಲೇ ಅರಂಭವಾಯಿತು ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಯುವಿ ತಂದೆಯ ಖಡಕ್ ಮನೋಭಾವ
ನಾನು ರಾತ್ರಿ ಎಂದು ಹೇಳಿದರೆ, ಅದು ರಾತ್ರಿ. ನಾನು ಹಗಲು ಎಂದು ಹೇಳಿದರೆ, ಅದು ಹಗಲು. ನನ್ನ ಕುಟುಂಬಕ್ಕೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ; ಅವರು ಇದು ನನ್ನ ದೌರ್ಬಲ್ಯ ಎಂದು ಭಾವಿಸಿದ್ದರು, ಆದರೆ ಇದು ನನಗೆ ಒಂದು ಉತ್ತೇಜನವನ್ನು ನೀಡಿತು ಎಂದು ಯೋಗರಾಜ್ ಹೇಳಿದ್ದಾರೆ.
ಸೇಡು ತೀರಿಸಿಕೊಳ್ಳುವ ಪ್ರತಿಜ್ಙೆ ಮಾಡಿದ್ದ ಯೋಗರಾಜ್
ನನಗೆ ಮಗ ಜನಿಸಿದಾಗ, ಆತನನ್ನು ಕ್ರಿಕೆಟ್ ದಂತಕಥೆಯನ್ನಾಗಿ ಮಾಡಲು ನನ್ನೊಳಗೆ ಕಿಚ್ಚಿದೆ ಎಂದು ನನ್ನ ತಾಯಿಯ ಬಳಿ ಹೇಳಿದೆ. ಕಪಿಲ್ ದೇವ್ ಸೇರಿದಂತೆ ನನಗೆ ಮಾಡಿದ ಅನ್ಯಾಯದ ಬಗ್ಗೆ ಪ್ರತಿಯೊಬ್ಬರ ಮೇಲೂ ಮಗನ ಮೂಲಕ ಸೇಡು ತೀರಿಸಿಕೊಳ್ಳಲು ನಾನು ಪ್ರತಿಜ್ಞೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಣ್ಣೀರು ಹಾಕಿದ ಯುವಿ ತಂದೆ
ಸಾಮಾನ್ಯವಾಗಿ ದೇವರ ಮುಂದೆ ನಮಸ್ಕರಿಸುವಾಗ ನಾನು ಭಾವುಕನಾಗುತ್ತೇನೆ. ನನ್ನ ತಾಯಿ ಕೊನೆಯುಸಿರೆಳೆದಾಗ ನನ್ನ ಕಣ್ಣಲ್ಲಿ ನೀರು ಬಂತು, ಆ ದಿನ ನಾನು ಭಾವುಕನಾದೆ. ಆ ದಿನ ನಾನು ಅನಾಥನಾದೆ.
ಯೋಗರಾಜ್ ಬಿಟ್ಟುಹೋದ ಯುವಿ-ಯುವಿ ತಾಯಿ
ಯುವಿ ಹಾಗೂ ಆತನ ತಾಯಿ ನನ್ನ ಬಿಟ್ಟು ಹೋದಾಗ ನಾನು ಭಾವುಕನಾದೆ, ಅಳುವುದನ್ನು ತಡೆದುಕೊಂಡೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.