ತಂಡದ ಒಳಿತಿಗಾಗಿ BCCI Rules ಬ್ರೇಕ್ ಮಾಡಿದ ಜಡೇಜಾ, ಆಲ್ರೌಂಡರ್‌ಗೆ ಶಿಕ್ಷೆ ಆಗುತ್ತಾ?
ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯ ಎರಡನೇ ಪಂದ್ಯವು ರೋಚk ಹಂತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಆಲ್ರೌಂಡರ್ ರವೀಂದ್ರ ಜಡೇಜಾ, ತಂಡದ ಹಿತಕ್ಕಾಗಿ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಮೇಲುಗೂ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಸ್ವತಃ ನಾಯಕ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕ(261) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಬಾರಿಸಿದ ಅಮೂಲ್ಯ 81 ಇನ್ನಿಂಗ್ಸ್ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಇನ್ನು ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 20 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದ್ದು, ಇನ್ನೂ 510 ರನ್‌ಗಳ ಹಿನ್ನೆಡೆಯಲ್ಲಿದೆ.
ಇದೆಲ್ಲದರ ನಡುವೆ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ರವೀಂದ್ರ ಜಡೇಜಾ ಬಿಸಿಸಿಐ ರೂಲ್ಸ್ ಉಲ್ಲಂಘಿಸಿ ಸುದ್ದಿಯಾಗಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮೊದಲೇ ಬಿಸಿಸಿಐ ಕೆಲವೊಂದು ಮಹತ್ವದ ನಿಯಮಗಳನ್ನು ಆಟಗಾರರಿಗೆ ಹಾಗೂ ಅವರ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಿತ್ತು.
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮೊದಲೇ ಬಿಸಿಸಿಐ ಕೆಲವೊಂದು ಮಹತ್ವದ ನಿಯಮಗಳನ್ನು ಆಟಗಾರರಿಗೆ ಹಾಗೂ ಅವರ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಿತ್ತು.
ಈ ನಿಯಮಗಳ ಪೈಕಿ ಎಲ್ಲಾ ಕ್ರಿಕೆಟಿಗರು ಹೋಟೆಲ್‌ನಿಂದ ಸ್ಟೇಡಿಯಂಗೆ ತಂಡದ ಬಸ್‌ನಲ್ಲಿಯೇ ಬರಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಿತ್ತು. ಆದರೆ ಜಡೇಜಾ ಬಿಸಿಸಿಐ ರೂಲ್ಸ್ ಬ್ರೇಕ್ ಮಾಡಿ, ಪ್ರತ್ಯೇಕವಾಗಿ ಸ್ಟೇಡಿಯಂಗೆ ಬಂದಿದ್ದರು.
ಭಾರತ ತಂಡದ ಆಟಗಾರರು ಮೈದಾನಕ್ಕೆ ಬರುವ ಮೊದಲೇ ಜಡ್ಡು ಬೇರೆ ವಾಹನದಲ್ಲಿ ಮೊದಲೇ ಬಂದು ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದರು. ಮೊದಲ ದಿನದಾಟದಂತ್ತಕ್ಕೆ 41 ರನ್ ಗಳಿಸಿದ್ದ ಜಡ್ಡು, ಎರಡನೇ ದಿನ ಗಿಲ್ ಜತೆ ದ್ವಿಶತಕದ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು.
ಇದೀಗ ಬಿಸಿಸಿಐ ನೀತಿ ಉಲ್ಲಂಘಿಸಿದ ಜಡ್ಡುಗೆ ಶಿಕ್ಷೆಯಾಗುತ್ತಾ ಅಥವಾ ಅವರ ತಂಡದ ಒಳಿತಿಗಾಗಿ ತೆಗೆದುಕೊಂಡ ತೀರ್ಮಾನಕ್ಕೆ ಬಿಸಿಸಿಐ ಶಬ್ಬಾಶ್ ಹೇಳುತ್ತಾ ಕಾದು ನೋಡಬೇಕಿದೆ.