ದೇಸಿ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿವೆ 3 ಅಪರೂಪದ ದಾಖಲೆಗಳು
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವಾರು ದಾಖಲೆಯ ಒಡೆಯರಾಗಿ ಬೆಳೆದು ನಿಂತಿದ್ದಾರೆ. 3 ಮಾದರಿಯ ಕ್ರಿಕೆಟ್‌ನಲ್ಲೂ ಕೊಹ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ಬರೆದಿರುವ ಕೊಹ್ಲಿ, ದೇಸಿ ಕ್ರಿಕೆಟ್‌ನಲ್ಲೂ ರನ್ ಮಷೀನ್ ಕೊಹ್ಲಿ ಮೂರು ಅಪರೂಪದ ದಾಖಲೆ ಬರೆದಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಕೊಹ್ಲಿ ಹೆಸರಿನಲ್ಲಿರುವ ದಾಖಲೆಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
16

1. ದೇವಧರ್ ಟ್ರೋಫಿ ಗೆದ್ದ ಅತಿ ಕಿರಿಯ ನಾಯಕ
1. ದೇವಧರ್ ಟ್ರೋಫಿ ಗೆದ್ದ ಅತಿ ಕಿರಿಯ ನಾಯಕ
26
2009-10ಸಾಲಿನ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಉತ್ತರ ವಲಯವನ್ನು ಮುನ್ನಡೆಸಿದ್ದ ಕೊಹ್ಲಿ ತಂಡವನ್ನು ಚಾಂಪಿಯನ್ನು ಪಟ್ಟಕ್ಕೇರಿಸಿದ್ದರು. ಆಗ ಕೊಹ್ಲಿ ವಯಸ್ಸು 21 ವರ್ಷ, 124 ದಿನಗಳು. ಈ ಮೂಲಕ ದೇವಧರ್ ಟ್ರೋಫಿ ಗೆದ್ದ ಅತಿ ಕಿರಿಯ ನಾಯಕ ಎನ್ನುವ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆ ಶುಭ್‌ಮನ್ ಗಿಲ್(20 ವರ್ಷ, 57) ಹೆಸರಿನಲ್ಲಿದೆ.

36
2. ಡೆಲ್ಲಿ ಪರ ದಾಖಲೆಯ ಜೊತೆಯಾಟ
2. ಡೆಲ್ಲಿ ಪರ ದಾಖಲೆಯ ಜೊತೆಯಾಟ
46
ವಿರಾಟ್ ಕೊಹ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಕಾಶ್ ಚೋಪ್ರಾ ಜೊತೆಗೂಡಿ 385 ರನ್‌ಗಳ ಜತೆಯಾಟವಾಡಿದ್ದರು. ಇದು ಡೆಲ್ಲಿ ಪರ ಎರಡನೇ ವಿಕೆಟ್‌ಗೆ ಗರಿಷ್ಠ ಜತೆಯಾಟವಾಗಿ ಉಳಿದಿದೆ. ನಿಸಾರ್ ಟ್ರೋಫಿಯಲ್ಲಿ ಕೊಹ್ಲಿ 274 ಎಸೆತಗಳಲ್ಲಿ 30 ಬೌಂಡರಿ ಸಹಿತ 197 ರನ್ ಸಿಡಿಸಿದ್ದರು.

56
3. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿಹೆಚ್ಚು ಶತಕ

66
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರಾದರೂ, ಎರಡನೇ ಅವಕಾಶಕ್ಕಾಗಿ ಒಂದು ವರ್ಷ ಕಾಯಬೇಕಾಯಿತು. 2008-09ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ 534 ರನ್ ಬಾರಿಸಿ ಗಮನ ಸೆಳೆದರು. ಈ ಟೂರ್ನಿಯಲ್ಲಿ ಕೊಹ್ಲಿ 4 ಶತಕ ಚಚ್ಚಿದ್ದರು. ವಿಜಯ್ ಹಜಾರೆ ಟೂರ್ನಿಯೊಂದರಲ್ಲಿ(4 ಶತಕ) ಗರಿಷ್ಠ ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos