ಶಾರುಖ್ ಸೇರಿ ದಿಗ್ಗಜರ ಹಿಂದಿಕ್ಕಿದ ಕೊಹ್ಲಿಗೆ ಅತೀ ಜನಪ್ರಿಯ ಏಷ್ಯನ್ ಪರ್ಸನಾಲಿಟಿ ಕಿರೀಟ!
ವಿರಾಟ್ ಕೊಹ್ಲಿಗೆ ಮತ್ತೊಂದು ಸಾಧನೆ ಕಿರೀಟ ಸೇರಿಕೊಂಡಿದೆ. ಶಾರೂಖ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ದಿಗ್ಗಜರನ್ನು ಹಿಂದಿಕ್ಕಿರುವ ವಿರಾಟ್ ಕೊಹ್ಲಿ ಮೋಸ್ಟ್ ಪಾಪ್ಯುಲರ್ ಏಷ್ಯನ್ ಪರ್ಸನಾಲಿಟಿ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಗೆ ದೇಶ ವಿದೇಶದಲ್ಲಿ ಅಭಿಮಾನಿಗಳಿದ್ದಾರೆ. ಫುಟ್ಬಾಲ್‌ಗೆ ಹೋಲಿಸಿದರೆ ಕ್ರಿಕೆಟ್ ವ್ಯಾಪ್ತಿ ಸೀಮಿತವಾಗಿದ್ದರೂ, ಕೊಹ್ಲಿ ಜನಪ್ರೀಯತೆಗೆ ಯಾವುದೇ ಗಡಿಗಳಿಲ್ಲ. ಖ್ಯಾತಿ, ಜನಪ್ರಿಯತೆ, ಫಾಲೋವರ್ಸ್, ಲೈಕ್ಸ್, ಕಮೆಂಟ್ಸ್ ಸೇರಿದಂತೆ ಹಲವು ವಿಚಾರಗಳಲ್ಲಿ ವಿರಾಟ್ ಕೊಹ್ಲಿ ಇತರ ಎಲ್ಲಾ ಅಥ್ಲೀಟ್‌ಗಳಿಗಿಂತ ಮುಂಚೂಣಿಯಲ್ಲಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ಕಿರೀಟ ಸೇರಿಕೊಂಡಿದೆ. ಹೌದು, ವಿರಾಟ್ ಕೊಹ್ಲಿ 2023ರಲ್ಲಿ ವಿಕಿಪೀಡಿಯಾದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಏಷ್ಯಾ ಸೆಲೆಬ್ರೆಟಿಗಳ ವ್ಯಕ್ತಿಗಳ ಪೈಕಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಎಫ್‌ಪಿಜೆ 2023ರ ವರದಿ ಪ್ರಕಾರ ವಿರಾಟ್ ಕೊಹ್ಲಿ ಏಷ್ಯಾನ್ ಮೋಸ್ಟ್ ಪಾಪ್ಯುಲರ್ ಪರ್ಸನಾಲಿಟಿ ಅನ್ನೋ ದಾಖಲೆ ಬರೆದಿದ್ದಾರೆ. ವಿಕಿಪೀಡಿಯಾದಲ್ಲಿ ವಿರಾಟ್ ಕೊಹ್ಲಿ ಪ್ರೊಫೈಲನ್ನು 10.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ 7.7 ಮಿಲಿಯನ್ ವೀಕ್ಷಣೆ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಪ್ರಿಯಾಂಕ ಚೋಪ್ರಾ 6.5 ಮಿಲಿಯನ್ ವೀಕ್ಷಣೆ ಪಡೆದಿದ್ದಾರೆ.
ಏಷ್ಯಾದ ಸೆಲೆಬ್ರೆಟಿಗಳ ಪೈಕಿ ಕೊಹ್ಲಿ ಕಿಂಗ್. ವೀಕ್ಷಣೆ, ಫಾಲೋವರ್ಸ್ ಸೇರಿದಂತೆ ಜನಪ್ರಿಯತೆಯಲ್ಲಿ ಕೊಹ್ಲಿಯೇ ನಂಬರ್ 1 ಆಗಿದ್ದಾರೆ. ಇತ್ತ ಆನ್ ಫೀಲ್ಡ್‌ನಲ್ಲೂ ಕೊಹ್ಲಿಯೇ ನಂಬರ್ 1.
2023ರಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಿಟ್ಟ ಹೋರಾಟ ನೀಡಿದ್ದಾರೆ. ಆದರೆ ಪ್ರಶಸ್ತಿ ಕೈತಪ್ಪಿತ್ತು.ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಮರಳಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು
ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಮರಳಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು
ಜನವರಿ 3 ರಿಂದ ಟೀಂ ಇಂಡಿಯಾ ಸೌತ್ ಆಫ್ರಿಕಾ ವಿರುದ್ದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಡಲಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಲು ಭಾರತ ಸಜ್ಜಾಗಿದೆ.