KSCA ಚುನಾವಣೆಗೂ ಮೊದಲೇ ಗೆದ್ದುಬೀಗಿದ ವೆಂಕಟೇಶ್ ಪ್ರಸಾದ್; ಅವಿರೋಧ ಅಧ್ಯಕ್ಷರಾಗಿ ಆಯ್ಕೆ!
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆ
ಪ್ರತಿಷ್ಠಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯು ಹಲವು ಕಸರತ್ತುಗಳ ಬಳಿಕ ಮುಂಬರುವ ಡಿಸೆಂಬರ್ 07ಕ್ಕೆ ನಿಗಧಿಯಾಗಿದೆ. ಹೀಗಿರುವಾಗಲೇ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ರಿಜೇಶ್ ಪಟೇಲ್ ಬಣದಿಂದ ಶಾಂತಕುಮಾರ್ ಸ್ಪರ್ಧೆ
ಈ ಬಾರಿಯ ಕೆಎಸ್‌ಸಿಎ ಚುನಾವಣೆಯಲ್ಲಿ ಬ್ರಿಜೇಶ್ ಪಟೇಲ್ ಅವರ ಬಣದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಕೆ ಎನ್ ಶಾಂತಕುಮಾರ್ ಸ್ಪರ್ಧಿಸಿದ್ದರು.
ಗೇಮ್ ಚೇಂಜರ್ ಬಣದಿಂದ ವೆಂಕಿ ಸ್ಪರ್ಧೆ
ಇನ್ನೊಂದೆಡೆ ಗೇಮ್ ಚೇಂಜರ್ ಬಣದಿಂದ ಅಧ್ಯಕ್ಷ ಸ್ಥಾನಕ್ಕಾಗಿ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಿದ್ದರು.
ಗೇಮ್ ಚೇಂಜರ್ ಬಣಕ್ಕೆ ದಿಗ್ಗಜರ ಬೆಂಬಲ
ವೆಂಕಟೇಶ್ ಪ್ರಸಾದ್ ನೇತೃತ್ವದ ಗೇಮ್ ಚೇಂಜರ್ ಬಣಕ್ಕೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸೇರಿದಂತೆ ಹಲವು ದಿಗ್ಗಜರು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದರು.
ಪತ್ರಿಕೋದ್ಯಮಿ ಕೆ ಎನ್ ಶಾಂತಕುಮಾರ್ ತಿರಸ್ಕೃತ
ಇದೆಲ್ಲದರ ನಡುವೆ ಬ್ರಿಜೇಶ್ ಪಟೇಲ್ ಬೆಂಬಲಿತ ಪತ್ರಿಕೋದ್ಯಮಿ ಕೆ ಎನ್ ಶಾಂತಕುಮಾರ್ ಅವರ ನಾಮಪತ್ರ ತಾಂತ್ರಿಕವಾಗಿ ತಿರಸ್ಕೃತಗೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಹೀಗಾಗಿ ವೆಂಕಟೇಶ ಪ್ರಸಾದ್ ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ ಎನ್ ಶಾಂತಕುಮಾರ್ ನಾಮಪತ್ರ ಅಸಿಂಧು
ನವೆಂಬರ್ 24ರ ನಾಮಪತ್ರ ಪರಿಶೀಲನೆ ವೇಳೆ, ಶಾಂತಕುಮಾರ್ ಅವರ ಕೆಎಸ್‌ಸಿಎ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಯಾವುದೋ ಒಂದು ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರವನ್ನು ಅಸಿಂಧುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 07ಕ್ಕೆ ಕೆಎಸ್‌ಸಿಎ ಚುನಾವಣೆ
ಸದ್ಯ ಕೆಎಸ್‌ಸಿಎ ಅಧ್ಯಕ್ಷ ಸ್ಥಾನ ಅಂತಿಮವಾಗಿದ್ದರು, ಇನ್ನುಳಿದ ಹುದ್ದೆಗಳಿಗಾಗಿ ಈ ಮೊದಲೇ ನಿಗದಿಯಾದಂತೆ ಮುಂಬರುವ ಡಿಸೆಂಬರ್ 07ರಂದು ಯಥಾಪ್ರಕಾರ ಚುನಾವಣೆ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

