ಸ್ಮೃತಿ ಮಂಧನಾಗೆ ಮತ್ತೊಂದು ಶಾಕ್, ತಂದೆ ಬೆನ್ನಲ್ಲೇ ಭಾವಿ ಪತಿ ಪಲಾಶ್ ಆಸ್ಪತ್ರೆ ದಾಖಲು, ಶ್ರೀನಿವಾಸ್ ಮಂಧನಾ ಆರೋಗ್ಯ ಹದಗೆಡುತ್ತಿದ್ದಂತೆ ಪಲಾಶ್ ತೀವ್ರ ಆತಂಕಗೊಂಡಿದ್ದಾರೆ, ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

ಸಾಂಗ್ಲಿ (ನ.24) ಭಾರತ ಮಹಿಳಾ ತಂಡದ ಸ್ಮೃತಿ ಮಂಧನಾ ಹಾಗೂ ಮ್ಯೂಸಿಕ್ ನಿರ್ದೇಶಕ ಪಲಾಶ್ ಮುಚ್ಚಾಲ್ ಮದುವೆ ನಿನ್ನೆ (ನ.23) ನಡೆಯಬೇಕಿತ್ತು. ಆದರೆ ಮದುವೆಗೂ ಮುನ್ನ ಸ್ಮತಿ ಮಂಧನಾ ತಂದೆ ಶ್ರೀನಿವಾಸ್ ಮಂಧನಾ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದರು. ಹೀಗಾಗಿ ಮದುವೆ ಮುಂದೂಡಲಾಗಿತ್ತು. ತಂದೆ ಉಪಸ್ಥಿತಿಯಲ್ಲೇ ಮದುವೆಯಾಗುತ್ತೇನೆ ಎಂದು ಸ್ಮೃತಿ ಮಂಧನಾ ಹೇಳಿದ ಬೆನ್ನಲ್ಲೇ ಮದುವೆ ಮುಂದೂಡಿಕೆಯಾಗಿತ್ತು. ತಂದೆ ಆರೋಗ್ಯದ ಏರುಪೇರು ಸ್ಮೃತಿ ಮಂಧನಾ ತೀವ್ರ ಆತಂಕ ಸೃಷ್ಟಿಸಿತ್ತು. ಇದರ ಬೆನಲ್ಲೇ ಭಾವಿ ಪತ್ನಿ ಪಲಾಶ್ ಮುಚ್ಚಾಲ್ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

ಶ್ರೀನಿವಾಸ್ ಮಂಧನಾ ಆರೋಗ್ಯದ ಬೆನ್ನಲ್ಲೇ ಪಲಾಶ್ ಅಸ್ವಸ್ಥ

ಸ್ಮೃತಿ ಮಂಧನಾ ತಂದೆ ಆರೋಗ್ಯ ಏರುಪೇರಾದ ಕಾರಣ ಸಾಂಗ್ಲಿಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ವೈದ್ಯರ ತಂಡ ಶ್ರಿನಿವಾಸ್ ಮಂಧನಾಗೆ ಚಿಕಿತ್ಸೆ ನೀಡಿದ್ದರು. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮೃತಿ ಮಂಧನಾ ತಂದೆ ಜೊತೆ ಹೆಚ್ಚು ಆತ್ಮೀಯವಾಗಿದ್ದ ಕಾರಣ ತಂದೆ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ತೀವ್ರ ಆತಂಕಗೊಂಡಿದ್ದರು. ಸ್ಮೃತಿ ಮಂಧನಾ ಆತಂಕ ನೋಡಿ ಇತ್ತ ಪಲಾಶ್ ಮುಚ್ಚಾಲ್ ಕೂಡ ಆತಂಕಗೊಂಡಿದ್ದರು.ನಿನ್ನೆಯಿಂದ ಆಸ್ಪತ್ರೆಯಲ್ಲಿ ಕಳೆದಿದ್ದರು. ಹೀಗಾಗಿ ಪಲಾಶ್ ಅಸ್ವಸ್ಥರಾಗಿದ್ದರು, ನಿದ್ದೆ, ಆಹಾರ ಸರಿಯಾಗಿ ಪಡೆದುಕೊಳ್ಳದ ಕಾರಣ ಪಲಾಶ್ ಅಸ್ವಸ್ಥಗೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪಲಾಶ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಶ್ರೀನಿವಾಸ್ ಮಂಧನಾ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಆತಂಕಗೊಂಡಿದ್ದ ಪಲಾಶ್

ಶ್ರೀನಿವಾಸ್ ಮಂಧನಾ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಪಲಾಶ್ ಮುಚ್ಚಾಲ್ ತೀವ್ರ ಆತಂಕಗೊಂಡಿದ್ದರು ಎಂದು ಸ್ಮೃತಿ ಮಂಧನಾ ತಾಯಿ ಹೇಳಿದ್ದಾರೆ. ಸ್ಮೃತಿ ಮಂಧನಾ ಅಳುತ್ತಿದ್ದಂತೆ ಪಲಾಶ್ ಕೂಡ ಅತ್ತಿದ್ದಾರೆ. ಇದರಿಂದ ಪಲಾಶ್ ಅಸ್ವಸ್ಥಗೊಂಡಿದ್ದಾರೆ ಎಂದು ತಾಯಿ ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಪಲಾಶ್ ಮುಂಬೈಗೆ ಮರಳಿದ್ದಾರೆ.ಪಲಾಶ್ ತಮ್ಮ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಾಯಿ ಹೇಳಿದ್ದಾರೆ.

ಸ್ಮೃತಿಗಿಂತ ಮೊದಲು ಪಲಾಶ್ ಮದುವೆ ಮುಂದೂಡಲು ಸೂಚಿಸಿದ್ದರು.

ಸ್ಮೃತಿ ಮಂಧನಾ ತಂದೆ ಶ್ರೀನಿವಾಸ್ ಜೊತೆ ಹೆಚ್ಚು ಆತ್ಮೀಯರಾಗಿದ್ದಾರೆ. ತಮ್ಮ ವಿಶ್ರಾಂತಿ ಸಮಯದಲ್ಲಿ ತಂದೆ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಶ್ರೀನಿವಾಸ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಮದುವೆ ಮುಂದೂಡಲು ಪಲಾಶ್ ಸೂಚಿಸಿದ್ದರು. ಇತ್ತ ಸ್ಮೃತಿ ಮಂಧನಾ ಕೂಡ ಇದೇ ಅಭಿಪ್ರಾಯದಲ್ಲಿದ್ದರು. ಹೀಗಾಗಿ ಮದುವೆ ಮುಂದೂಡಲಾಯಿತು ಎಂದು ತಾಯಿ ಹೇಳಿದ್ದಾರೆ.