- Home
- Sports
- Cricket
- ಟೀಂ ಇಂಡಿಯಾಗೆ ಅಣ್ಣ ಎಂಟ್ರಿ ಕೊಡೋ ಮುನ್ನವೇ ಅಬ್ಬರಿಸಿದ ತಮ್ಮ! 10ನೇ ವಯಸ್ಸಲ್ಲೇ ಸೆಂಚುರಿ ಬಾರಿಸಿದ ವೈಭವ್ ಸೂರ್ಯವಂಶಿ ಬ್ರದರ್!
ಟೀಂ ಇಂಡಿಯಾಗೆ ಅಣ್ಣ ಎಂಟ್ರಿ ಕೊಡೋ ಮುನ್ನವೇ ಅಬ್ಬರಿಸಿದ ತಮ್ಮ! 10ನೇ ವಯಸ್ಸಲ್ಲೇ ಸೆಂಚುರಿ ಬಾರಿಸಿದ ವೈಭವ್ ಸೂರ್ಯವಂಶಿ ಬ್ರದರ್!
Ashirwad Sooryavanshi Smashes Century: ವೈಭವ್ ಸೂರ್ಯವಂಶಿ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇದೀಗ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರಿಸಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿರುವ ವೈಭವ್ ಸೂರ್ಯವಂಶಿ
19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಪ್ರಚಂಡ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಇದರ ಜತೆಗೆ ಆರೆಂಜ್ ಕ್ಯಾಪ್, ಟಾಟಾ ಸಿಯಾರ ಕಾರು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿರುವ ಅತಿಕಿರಿಯ ಕ್ರಿಕೆಟಿಗ ವೈಭವ್
ಇದರ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಆಟಕ್ಕೆ ಮನಸೂತ ಬಿಸಿಸಿಐ ಆಯ್ಕೆ ಸಮಿತಿ, ಇದೀಗ ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಆಯ್ಕೆ ಮಾಡಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅತಿಕಿರಿಯ ಪುರುಷ ಕ್ರಿಕೆಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಆಕರ್ಷಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ ಸಹೋದರ
ಇದೀಗ ವೈಭವ್ ಸೂರ್ಯವಂಶಿ, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಮುನ್ನವೇ ಅವರ ಕಿರಿಯ ಸಹೋದರ 10 ವರ್ಷದ ಆಶೀರ್ವಾದ್ ಸೂರ್ಯವಂಶಿ, ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೇವಲ 87 ಎಸೆತಗಳಲ್ಲಿ ಶತಕ ಸಿಡಿಸಿದ ಆಶೀರ್ವಾದ್
ಆಶೀರ್ವಾದ್ ಸೂರ್ಯವಂಶಿ, ಬಿಹಾರದ ಸಮಷ್ಠಿಪುರದ ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೇವಲ 87 ಎಸೆತಗಳನ್ನು ಎದುರಿಸಿ 20 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 103 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಇನ್ನು ತಮ್ಮನ ಆಟಕ್ಕೆ ವೈಭವ್ ಸೂರ್ಯವಂಶಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಶತಕ ಸಿಡಿಸಿ ಸಂಭ್ರಮಿಸಿದ ಆಶೀರ್ವಾದ್ ಸೂರ್ಯವಂಶಿ
ಆಶೀರ್ವಾದ್ ಸೂರ್ಯವಂಶಿ, ತಮ್ಮ ಅಣ್ಣನಂತೆ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ. ಆಶೀರ್ವಾದ್ ಸೂರ್ಯವಂಶಿ ಶತಕದ ನೆರವಿನಿಂದ ತಾಜ್‌ಪುರ್ ಕ್ರಿಕೆಟ್ ಅಕಾಡೆಮಿ ತಂಡವು 29.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು. ಆಶೀರ್ವಾದ್ ಶತಕ ಸಿಡಿಸುತ್ತಿದ್ದಂತೆಯೇ ಹೆಲ್ಮೆಟ್ ಹಾಗೂ ಬ್ಯಾಟ್ ಎತ್ತಿ ಹಿಡಿದು ಸಂಭ್ರಮಾಚರಣೆ ಮಾಡಿದರು.
ಆಶೀವಾರ್ದ್ ಸೂರ್ಯವಂಶಿಯಲ್ಲಿ ಮನೆಯಲ್ಲಿ ಸಂಭ್ರಮಾಚರಣೆ
ಇನ್ನು ಆಶೀರ್ವಾದ್ ಸೂರ್ಯವಂಶಿ ಚೊಚ್ಚಲ ಶತಕ ಸಿಡಿಸಿದ್ದರ ಬಗ್ಗೆ ಅವರ ಅಣ್ಣ ಉಜ್ವಲ್ ಸೂರ್ಯವಂಶಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಮನೆಯಲ್ಲಿ ಇದೀಗ ಸಂತಸ ಮನೆ ಮಾಡಿದೆ. ಸದ್ಯ ವೈಭವ್ ಸೂರ್ಯವಂಶಿ, ಭಾರತ ಎ ತಂಡದ ಪರವಾಗಿ ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

