ಟೀಮ್ ಇಂಡಿಯಾದ ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ಗೊತ್ತಾ?
ಟೀಮ್ ಇಂಡಿಯಾದ ಆಟಗಾರರು ಯಾವ ಜನಪ್ರಿಯತೆಯಲ್ಲಿ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಇವರ ಆಟದ ಜೊತೆ ಪರ್ಸನಲ್ ಲೈಫ್ ಸಹ ಸದಾ ಪ್ರಚಾರದಲ್ಲಿರುತ್ತದೆ. ಹಾಗೇ ಕ್ರಿಕೆಟಿಗರ ಪತ್ನಿಯರ ಬಗ್ಗೆ ಸಹ ತಿಳಿದಿಕೊಳ್ಳಲು ಫ್ಯಾನ್ಸ್ ಕೂತುಹಲ ತೋರಿಸುತ್ತಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ 12ನೇ ತರಗತಿ ನಂತರ ತಮ್ಮ ಓದು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಆದರೆ ಅವರ ಪತ್ನಿ ಅನುಷ್ಕಾ ಅವರಿಗಿಂತ ಡಬಲ್ ಓದಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾದ ಹಲವು ಕ್ರಿಕೆಟಿಗರ ಪತ್ನಿಯರು ತಮ್ಮ ಪತಿಗಿಂತ ಹೆಚ್ಚು ಓದಿದ್ದಾರೆ.
ಅನುಷ್ಕಾ ಶರ್ಮಾ:
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಕಾರಣದಿಂದಾಗಿ 12ನೇ ತರಗತಿ ನಂತರ ಶಿಕ್ಷಣ ಮುಂದುವರೆಸಲಿಲ್ಲ. ಆದೇ ಪತ್ನಿ ಬಾಲಿವುಡ್ ನಟಿ ಅನುಷ್ಕಾಶರ್ಮ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.
ಸಾಕ್ಷಿ ಧೋನಿ:
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಹೋಟೆಲ್ ಮ್ಯಾನೇಂಜ್ಮೆಂಟ್ ಕೋರ್ಸ್ ಮಾಡಿದ್ದಾರೆ. ಔರಂಗಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಗ್ರಿ ಪಡೆದಿದ್ದಾರೆ.
ರಿತಿಕಾ ಸಜ್ದೇಹ್:
ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಸ್ಪೋರ್ಟ್ಸ್ ಇವೆಂಟ್ ಮ್ಯಾನೇಜರ್ ಆಗಿದ್ದರು. ರಿತಿಕಾ ಪದವೀಧರೆ.
ಅಂಜಲಿ ತೆಂಡೂಲ್ಕರ್:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.
ಪ್ರಿಯಾಂಕಾ ರೈನಾ:
ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ರೈನಾ ಬಿ.ಟೆಕ್ ಡಿಗ್ರಿ ಪಡೆದಿದ್ದಾರೆ. ಪ್ರಿಯಾಂಕಾ ಅಕ್ಸೆಂಚರ್ ಮತ್ತು ವಿಪ್ರೊ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ರಾಧಿಕಾ:
ಟೆಸ್ಟ್ ಟೀಮ್‌ನ ವೈಸ್ ಕ್ಯಾಪ್ಟನ್ ಅಜಿಂಕ್ಯ ರಹಾನೆ ಅವರ ಪತ್ನಿ ರಾಧಿಕಾ ಪದವಿ ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದ ಗಣೇಶ್ ವಿನಾಯಕ್ ಪಿಜಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.
ಸಂಜನಾ ಗಣೇಶನ್:
ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಕ್ರೀಡಾ ನಿರೂಪಕಿ ಸಂಜನಾ ಗಣೇಶ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ. ಸಂಜನಾ ಪುಣೆಯ ಸಿಂಬಯೋಸಿಸ್ ಇನ್ಸ್ಟಿಟ್ಯೂಟ್‌ನಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ.
ಪ್ರೀತಿ ಅಶ್ವಿನ್:
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ಅಶ್ವಿನ್ ಎಸ್‌ಎಸ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿದರು. ಪ್ರೀತಿ ಅಶ್ವಿನ್ ಮಾಹಿತಿ ತಂತ್ರಜ್ಞಾನದಿಂದ ಬಿ.ಟೆಕ್ ಮಾಡಿದ್ದಾರೆ. ಕೆಲವು ಕಂಪನಿಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
ರಿವಾ ಸೋಲಂಕಿ:
ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸೋಲಂಕಿ ರಾಜ್‌ಕೋಟ್‌ನ ಅಟೋಮಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ.
ಧನಶ್ರೀ ವರ್ಮಾ:
ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಡೆಂಟಿಸ್ತ್ರಿ ಅಧ್ಯಯನ ಮಾಡಿದ್ದಾರೆ. ಅವರು ನವೀ ಮುಂಬಯಿಯ ಡಿವೈ ಪಾಟೀಲ್ ಡೆಂಟಲ್ ಕಾಲೇಜಿನಲ್ಲಿ ಓದಿದ್ದಾರೆ.