ಟೆಸ್ಟ್ ಕ್ರಿಕೆಟ್‌ನ ಟಾಪ್ 5 ಎಡಗೈ ವೇಗಿಗಳಿವರು; ಏಕೈಕ ಭಾರತೀಯ ವೇಗಿಗೆ ಸ್ಥಾನ!
21ನೇ ಶತಮಾನದ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಐದು ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳನ್ನು ನೋಡೋಣ. ನಿರ್ಣಾಯಕ ಸ್ಪೆಲ್‌ಗಳಿಂದ ಹಿಡಿದು ದಶಕಗಳವರೆಗಿನ ಸ್ಥಿರತೆಯವರೆಗೆ, ಇಲ್ಲಿದೆ ಆಯ್ಕೆ.

ಮಿಚೆಲ್ ಸ್ಟಾರ್ಕ್
ಆಧುನಿಕ ಯುಗದ ಎಡಗೈ ವೇಗಿಗಳ ವಿಷಯದಲ್ಲಿ ಮಿಚೆಲ್ ಸ್ಟಾರ್ಕ್ ಮುಂಚೂಣಿಯಲ್ಲಿದ್ದಾರೆ. 99 ಟೆಸ್ಟ್‌ಗಳಲ್ಲಿ 27.39 ಸರಾಸರಿಯಲ್ಲಿ 395 ವಿಕೆಟ್‌ಗಳೊಂದಿಗೆ, ಅವರು ವಿವಿಧ ಖಂಡಗಳಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರದರ್ಶನವು ತವರಿನಲ್ಲಿ ಮತ್ತು ಹೊರಗೆ ಸ್ಥಿರವಾಗಿರುತ್ತದೆ.
2. ಮಿಚೆಲ್ ಜಾನ್ಸನ್
ಮಿಚೆಲ್ ಜಾನ್ಸನ್‌ರಂತೆ ಕೆಲವೇ ಬೌಲರ್‌ಗಳು ಮಾತ್ರ ಎದುರಾಳಿ ಬ್ಯಾಟರ್‌ಗಳಲ್ಲಿ ಭಯವನ್ನುಂಟು ಮಾಡಿದ್ದಾರೆ. 2007 ರಿಂದ 2015 ರವರೆಗೆ 73 ಟೆಸ್ಟ್‌ಗಳನ್ನು ಆಡಿ, ಜಾನ್ಸನ್ 28.40 ಸರಾಸರಿಯಲ್ಲಿ 313 ವಿಕೆಟ್‌ಗಳನ್ನು ಪಡೆದರು. ಅವರು ತಮ್ಮ ವೃತ್ತಿಜೀವನದಲ್ಲಿ 12 ಐದು ವಿಕೆಟ್‌ಗಳನ್ನು ಮತ್ತು ಮೂರು 10 ವಿಕೆಟ್‌ಗಳನ್ನು ಪಡೆದರು.
ಜಹೀರ್ ಖಾನ್
ಜಹೀರ್ ಖಾನ್ ಕಡಿಮೆ ಸರಾಸರಿಯನ್ನು ಹೊಂದಿಲ್ಲದಿರಬಹುದು, ಆದರೆ 21 ನೇ ಶತಮಾನದಲ್ಲಿ 90 ಟೆಸ್ಟ್‌ಗಳಲ್ಲಿ ಅವರ 306 ವಿಕೆಟ್‌ಗಳನ್ನು ಕಬಳಿಸಿದ್ದು ಸುಲಭದ ಸಾಧನೆಯೇನಲ್ಲ. ಅವರು ವಿದೇಶದಲ್ಲಿ 53 ಟೆಸ್ಟ್‌ಗಳನ್ನು ಆಡಿ 204 ವಿಕೆಟ್‌ಗಳನ್ನು ಪಡೆದರು. ಒತ್ತಡದಲ್ಲಿ ಸ್ವಿಂಗ್ ಮತ್ತು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಕಲೆ ಅವರನ್ನು ತಮ್ಮ ಕಾಲದ ಅತ್ಯಂತ ಪ್ರಭಾವಶಾಲಿ ಎಡಗೈ ವೇಗಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ.
ನೀಲ್ ವ್ಯಾಗ್ನರ್
ನೀಲ್ ವ್ಯಾಗ್ನರ್ ಯಾವಾಗಲೂ ಹೆಡ್‌ಲೈನ್‌ಗಳನ್ನು ಮಾಡದಿರಬಹುದು, ಆದರೆ ಅವರ ಸ್ಟ್ಯಾಟ್ಸ್ ಬಹಳಷ್ಟು ಹೇಳುತ್ತವೆ. 64 ಟೆಸ್ಟ್‌ಗಳಲ್ಲಿ, ಎಡಗೈ ವೇಗಿ 27.57 ರಲ್ಲಿ 260 ವಿಕೆಟ್‌ಗಳನ್ನು ಪಡೆದರು. ಅವರು ತವರಿನಲ್ಲಿ ಮತ್ತು ಹೊರಗೆ ಸಮಾನವಾಗಿ ಪರಿಣಾಮಕಾರಿ ದಾಳಿ ನಡೆಸುವ ಮೂಲಕ ಮಿಂಚಿದ್ದಾರೆ. ಅವರು ಕಿವೀಸ್ ಕ್ರಿಕೆಟ್ ಕಂಡ ಅತ್ಯಂತ ಅಪಾಯಕಾರಿ ಎಡಗೈ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಟ್ರೆಂಟ್ ಬೌಲ್ಟ್
ಟ್ರೆಂಟ್ ಬೌಲ್ಟ್ 78 ಟೆಸ್ಟ್‌ಗಳಲ್ಲಿ 317 ವಿಕೆಟ್‌ಗಳು ಅವರೆಷ್ಟು ಅಪಾಯಕಾರಿ ವೇಗಿ ಎನ್ನುವುದನ್ನು ತೋರಿಸುತ್ತದೆ. ಟಿಮ್ ಸೌಥಿ ಜೊತೆಗೆ ಬ್ಲ್ಯಾಕ್ ಕ್ಯಾಪ್ಸ್ ಪರ ಮಾರಕ ದಾಳಿ ನಡೆಸುವ ಮೂಲಕ ಎದುರಾಳಿ ಪಡೆಯನ್ನು ಕಾಡಲಾರಂಬಿಸಿದರು. 10 ಬಾರಿ 5+ ವಿಕೆಟ್‌ಗಳನ್ನು ಮತ್ತೆ ಒಮ್ಮೆ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.