ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ 5 ಭಾರತೀಯ ಬ್ಯಾಟರ್‌ಗಳಿವರು
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಶತಕ ಬಾರಿಸಿರುವ 5 ಭಾರತೀಯ ಬ್ಯಾಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ.
| Published : Jun 10 2025, 05:28 PM
1 Min read
Share this Photo Gallery
- FB
- TW
- Linkdin
Follow Us
17
)
Image Credit : ANI
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ
ಐಪಿಎಲ್ 2025 ಮುಗಿದ ನಂತರ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ತೆರಳಿದ್ದು, ಅಲ್ಲಿ ಜೂನ್ 20 ರಿಂದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಶುಭಮನ್ ಗಿಲ್ ನೇತೃತ್ವದ ತಂಡವು ಸಂಪೂರ್ಣವಾಗಿ ಯುವ ಆಟಗಾರರಿಂದ ಕೂಡಿದೆ.
27
Image Credit : ANI
ಅತಿಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು
ಇಂಗ್ಲೆಂಡ್ ವಿರುದ್ಧ ಗರಿಷ್ಠ ಶತಕಗಳನ್ನು ಬಾರಿಸಿರುವ 5 ಭಾರತೀಯ ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಈ ಬ್ಯಾಟ್ಸ್‌ಮನ್‌ಗಳು ಇಂಗ್ಲಿಷ್ ಬೌಲರ್‌ಗಳನ್ನು ಚೆನ್ನಾಗಿ ಆಡಿದ್ದಾರೆ.
37
Image Credit : x/icc
1. ರಾಹುಲ್ ದ್ರಾವಿಡ್ (7 ಶತಕ)
ಮೊದಲ ಸ್ಥಾನದಲ್ಲಿ ಟೆಸ್ಟ್ ಕ್ರಿಕೆಟ್‌ನ ದಿ ಗ್ರೇಟ್ ವಾಲ್ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಇದ್ದಾರೆ. ದ್ರಾವಿಡ್ ಇಂಗ್ಲೆಂಡ್ ವಿರುದ್ಧ 21 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ. 2007 ರಲ್ಲಿ ಭಾರತವು ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದ್ದು ಇವರ ನಾಯಕತ್ವದಲ್ಲಿ.
47
Image Credit : x/icc
2. ಸಚಿನ್ ತೆಂಡೂಲ್ಕರ್ (7 ಶತಕ)
ಎರಡನೇ ಸ್ಥಾನದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 32 ಪಂದ್ಯಗಳ 53 ಇನ್ನಿಂಗ್ಸ್‌ಗಳಲ್ಲಿ ಒಟ್ಟು 7 ಶತಕಗಳನ್ನು ಬಾರಿಸಿದ್ದಾರೆ.
57
Image Credit : x/icc
3. ಮೊಹಮ್ಮದ್ ಅಜರುದ್ದೀನ್ (6 ಶತಕ)
ಮೂರನೇ ಸ್ಥಾನದಲ್ಲಿ ಮತ್ತೊಬ್ಬ ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಇದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ 15 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅಜರುದ್ದೀನ್‌ಗೆ ಇಂಗ್ಲೆಂಡ್‌ನ ಬೌಲರ್‌ಗಳನ್ನು ಆಡುವ ಸಂಪೂರ್ಣ ಕೌಶಲ್ಯವಿತ್ತು.
67
Image Credit : ANI
4. ವೆಂಗ್‌ಸರ್ಕರ್, ಪೂಜಾರ ಮತ್ತು ವಿರಾಟ್ (5-5 ಶತಕ)
ನಾಲ್ಕನೇ ಸ್ಥಾನದಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಮೂವರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಹೌದು, ದಿಲೀಪ್ ಬಲ್ವಂತ್ ವೆಂಗ್‌ಸರ್ಕರ್, ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ 5-5 ಶತಕಗಳನ್ನು ಬಾರಿಸಿದ್ದಾರೆ.
77
Image Credit : ANI
5. ರೋಹಿತ್ ಶರ್ಮಾ (4 ಶತಕ)
ಇಂಗ್ಲೆಂಡ್ ವಿರುದ್ಧ ಗರಿಷ್ಠ ಟೆಸ್ಟ್ ಶತಕಗಳನ್ನು ಬಾರಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ರೋಹಿತ್ ಶರ್ಮಾ ಇದ್ದಾರೆ. ಹಿಟ್‌ಮ್ಯಾನ್ ಇಂಗ್ಲೆಂಡ್ ವಿರುದ್ಧ 14 ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ ಒಟ್ಟು 4 ಶತಕಗಳನ್ನು ಬಾರಿಸಿದ್ದಾರೆ.