ಕ್ರಿಕೆಟ್ ಇತಿಹಾಸದ ಟಾಪ್ 5 ಡೆಡ್ಲಿ ಫಾಸ್ಟ್ ಬೌಲರ್ಸ್, ಎಲ್ಲಾ ಪ್ಯಾಡ್ ಹಾಕಿದ್ರೂ ಇಂಜುರಿ ಖಚಿತ
ಕ್ರಿಕೆಟ್ ಇತಿಹಾಸದಲ್ಲಿ ಹಲವರು ದಿಗ್ಗಜ ಬೌಲರ್ಸ್ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನ ಈ ಐವರು ಫಾಸ್ಟ್ ಬೌಲರ್ಸ್ ಮಾರಕ ದಾಳಿ, ವಿಕೆಟ್ ಯಾರು ಮೀರಿಸಲು ಸಾಧ್ಯವಿಲ್ಲ. ಎಂಥಾ ಬ್ಯಾಟರ್ ಆದರೂ ನಡುಗುತ್ತಿದ್ದ ಈ ಐವರು ಬೌಲರ್ಸ್ ಇಲ್ಲಿದ್ದಾರೆ.

ಜೊಯೆಲ್ ಗಾರ್ನರ್
ವೆಸ್ಟ್ ಇಂಡೀಸ್ ವೇಗಿ ಜೊಯೆಲ್ ಗಾರ್ನರ್ ಕೇವಲ 58 ಟೆಸ್ಟ್ ಪಂದ್ಯದಲ್ಲಿ 259 ವಿಕೆಟ್ ಕಬಳಿಸಿದ್ದಾರೆ. 6.8 ಅಡಿ ಎತ್ತರದ ಗಾರ್ನರ್ ಯಾರ್ಕರ್ ಬೌಲಿಂಗ್ ಮೂಲಕವೇ ಜನಪ್ರಿಯರಾಗಿದ್ದರು. ಗಾರ್ನರ್ ಯಾರ್ಕರ್ ಬೌಲಿಂಗ್‌ಗೆ ವಿಕೆಟ್ ಉಳಿಸಿಕೊಂಡ ಬ್ಯಾಟರ್ ಇಲ್ಲ. ಇನ್ನು ಬೌನ್ಸರ್ ಹಾಕಿದರೆ ಬ್ಯಾಟರ್ ಇಂಜುರಿ ಖಚಿತ.

ವಕಾರ್ ಯೂನಿಸ್
ಪಾಕಿಸ್ತಾನದ ಮಾರಕ ವೇಗಿ ವಕಾರ್ ಯೂನಿಸ್ 87 ಟೆಸ್ಟ್ ಪಂದ್ಯದಿಂದ 373 ವಿಕೆಟ್ ಕಬಳಿಸಿದ್ದಾರೆ. ಸರಾಸರಿ 23.56. ಪಾಕಿಸ್ತಾನದಿಂದ ಬಂದ ಹಲವು ದೈತ್ಯ ಹಾಗೂ ದಿಗ್ಗಜ ವೇಗಿಗಳ ಪೈಕಿ ವಕಾರ್ ಮೊದಲ ಸ್ಥಾನ. ಅತ್ಯಂತ ಕರಾರುವಕ್ ಲೈನ್ ಆ್ಯಂಡ್ ಲೆಂಥ್ ಬೌಲಿಂಗ್ ಮೂಲಕ ವಕಾರ್ ಪ್ರಸಿದ್ಧ.
ವೆಸ್ ಹಾಲ್
ವೆಸ್ಟ್ ಇಂಡೀಸ್ ಮತ್ತೊರ್ವ ವೇಗಿ ವೆಸ್ ಹಾಲ್ 48 ಟೆಸ್ಟ್ ಪಂದ್ಯದಿಂದ 192 ವಿಕೆಟ್ ಪಡೆದಿದ್ದಾರೆ. ಸರಾಸರಿ 26.38. ಕೆರಿಬಿಯನ್ ಡೆಮೊನ್ ವೇಗಿ ಎಂದೇ ಗುರುತಿಸಿಕೊಂಡಿದ್ದರು. ವೆಸ್ ಹಾಲ್ ಬೌಲಿಂಗ್ ದಾಳಿಗೆ ಹಲವು ಬ್ಯಾಟರ್ ಇಂಜುರಿಯಾಗಿದ್ದಾರೆ. ವೆಸ್ ಹಾಲ್ ಬೌಲಿಂಗ್ ಮಾಡಲು ಬಂದರೆ ಎದುರಾಳಿ ಇಂಜುರಿ ಖಚಿತ ಅನ್ನೋ ಮಾತಿತ್ತು.
ಅಲನ್ ಡೋನಾಲ್ಡ್
ಸೌತ್ ಆಫ್ರಿಕಾ ವೇಗಿ ಅಲನ್ ಡೋನಾಲ್ಡ್ ಬೌನ್ಸರ್ ಎಸೆತದ ಮೂಲಕವೇ ಜನಪ್ರಿಯರಾಗಿದ್ದಾರೆ. ಪ್ರತಿ ಎಸೆತವನ್ನು ಬಾಡಿ ಲೆವೆಲ್‌ಗೆ ಹಾಕುತ್ತಿದ್ದ ಅಲನ್ ಡೋನಾಲ್ಡ್ 72 ಟೆಸ್ಟ್ ಪಂದ್ಯದಿಂದ 330 ವಿಕೆಟ್ ಕಬಳಿಸಿದ್ದಾರೆ. 22.25 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಕರ್ಟ್ಲಿ ಆ್ಯಂಬ್ರೂಸ್
ಟೆಸ್ಟ್ ಕ್ರಿಕೆಟ್‌ನಲ್ಲಿ ಕರ್ಟ್ಲಿ ಆ್ಯಂಬ್ರೂಸ್ ಹೆಸರು ಬಹುತೇಕರು ಕೇಳಿದ್ದಾರೆ. ವೆಸ್ಟ್ ಇಂಡೀಸ್ ಮಾರಕ ವೇಗಿ ಆ್ಯಂಬ್ರೂಸ್ ಕೇವಲ 98 ಟೆಸ್ಟ್ ಪಂದ್ಯದಿಂದ 405 ವಿಕೆಟ್ ಪಡೆದಿದ್ದಾರೆ. ಆ್ಯಂಬ್ರೂಸ್ ಸರಾಸರಿ 20.99. ಆ್ಯಂಬ್ರೂಸ್ ಅತೀ ಎತ್ತರದ ವೇಗಿಯಾಗಿದ್ದ ಕಾರಣ ಬರೋಬ್ಬರಿ 100 ಅಡಿ ಎತ್ತರದಿಂದ ಬಾಲ್ ರಿಲೀಸ್ ಮಾಡುತ್ತಿದ್ದರು. ಹಲವು ಬ್ಯಾಟರ್ ದವಡೆ ಮುರಿದ ಉದಾಹರಣೆಗಳೂ ಇವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

