ನಿರ್ಣಾಯಕ ಟಿ20 ಪಂದ್ಯಕ್ಕೆ ಸಂಭಾವ್ಯ ಟೀಂ ಇಂಡಿಯಾ ಪ್ರಕಟ; 2 ಬದಲಾವಣೆ?
First Published Mar 20, 2021, 1:36 PM IST
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟಿ20 ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಕಳೆದ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ ಟೀಂ ಇಂಡಿಯಾ, ಇದೀಗ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕೊನೆಯ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ

1. ರೋಹಿತ್ ಶರ್ಮಾ: ಹಿಟ್‌ಮ್ಯಾನ್ ಖ್ಯಾತಿಯ ಆರಂಭಿಕ ಬ್ಯಾಟ್ಸ್‌ಮನ್


3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್

4. ಸೂರ್ಯಕುಮಾರ್ ಯಾದವ್: ಸಿಕ್ಕ ಅವಕಾಶ ಬಳಸಿಕೊಂಡಿರುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್

5. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

6. ಶ್ರೇಯಸ್ ಅಯ್ಯರ್: ಮಧ್ಯಮ ಕ್ರಮಾಂಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್

7. ಹಾರ್ದಿಕ್ ಪಾಂಡ್ಯ: ಸ್ಟಾರ್ ಆಲ್ರೌಂಡರ್, ಬೌಲಿಂಗ್‌ನಲ್ಲಿ ಸೈ ಎನಿಸಿಕೊಂಡಿದ್ದು, ಬ್ಯಾಟಿಂಗ್‌ನಲ್ಲಿ ಅಬ್ಬರಿಸಬೇಕಿದೆ

8. ಟಿ ನಟರಾಜನ್: ವಾಷಿಂಗ್ಟನ್ ಸುಂದರ್ ಬದಲಿಗೆ ವೇಗಿ ನಟರಾಜನ್ ತಂಡ ಕೂಡಿಕೊಳ್ಳುವ ಸಾಧ್ಯತೆ

9. ಶಾರ್ದೂಲ್ ಠಾಕೂರ್: ಡೆತ್ ಓವರ್ ಚಾಣಾಕ್ಷ ಬೌಲಿಂಗ್ ನಡೆಸುವ ಸ್ಪೆಷಲಿಸ್ಟ್ ವೇಗಿ

10. ಭುವನೇಶ್ವರ್ ಕುಮಾರ್: ದೀರ್ಘಕಾಲದ ಬಳಿಕ ತಂಡ ಕೂಡಿಕೊಂಡಿರುವ ಅನುಭವಿ ವೇಗಿ, ಆರಂಭದಲ್ಲೇ ವಿಕೆಟ್ ಕಬಳಿಸಬಲ್ಲ ವೇಗಿ

11. ರಾಹುಲ್ ಚಹರ್: 4ನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಗಮನ ಸೆಳೆದಿರುವ ಲೆಗ್‌ಸ್ಪಿನ್ನರ್