Ashwin on Ravi Shastri: ಮಾಜಿ ಕೋಚ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಆಫ್ ಸ್ಪಿನ್ನರ್..!
ನವದೆಹಲಿ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ಒಂದು ಹಂತದಲ್ಲಿ ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಆಲೋಚಿಸಿದ್ದರಂತೆ. ಇದರ ಜತೆಗೆ ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರವಿಶಾಸ್ತ್ರಿಯ ಒಂದು ಹೇಳಿಕೆ ತಮ್ಮನ್ನು ಘಾಸಿಗೊಳಿಸಿದ್ದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

2019ರಲ್ಲಿ ಆಸ್ಪ್ರೇಲಿಯಾ ಪ್ರವಾಸದ ವೇಳೆ ಮಾಜಿ ಕೋಚ್ ರವಿ ಶಾಸ್ತ್ರಿ ನೀಡಿದ್ದ ಹೇಳಿಕೆಗೆ ಭಾರತದ ತಾರಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ವಿದೇಶಗಳಲ್ಲಿ ಕುಲ್ದೀಪ್ ಯಾದವ್ ನಮ್ಮ ನಂ.1 ಬೌಲರ್ ಎಂಬ ಶಾಸ್ತ್ರಿ ಹೇಳಿಕೆ ನನ್ನನ್ನು ಬಸ್ ನಿಂದ ಕೆಳಕ್ಕೆ ತಳ್ಳಿದಂತೆ ಮಾಡಿತ್ತು. ನಾನು ತೀವ್ರ ಆಘಾತಕ್ಕೊಳಗಾಗಿದ್ದೆ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ನಾನೂ ಕೂಡ ಉತ್ತಮ ಬೌಲಿಂಗ್ ಮಾಡಿದ್ದೆ, ಆದರೆ ಐದು ವಿಕೆಟ್ ಪಡೆದಿರಲಿಲ್ಲ. ಆಸೀಸ್ ಪಿಚ್‌ನಲ್ಲಿ 5 ವಿಕೆಟ್ ಪಡೆಯುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತಿತ್ತು ಎಂದು ಹೇಳಿದ್ದಾರೆ
ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್ ಸಾಧನೆ ಬಗ್ಗೆ ಸಂತೋಷವಿತ್ತು. ಆದರೆ ಶಾಸ್ತ್ರಿ ಹೇಳಿಕೆ ನನ್ನನ್ನು ತುಂಬಾ ಘಾಸಿ ಮಾಡಿದ್ದಲ್ಲದೇ, ಸಂಪೂರ್ಣವಾಗಿ ಕುಗ್ಗುವಂತೆ ಮಾಡಿತ್ತು. ತಂಡ ಸರಣಿ ಗೆದ್ದಾಗ ಆಟಗಾರರ ಜೊತೆ ಪಾರ್ಟಿಗೆ ಹೋಗಲು ಸಹ ನನಗೆ ಕಷ್ಟವಾಗಿತ್ತು’ ಎಂದಿದ್ದಾರೆ.
ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರ ಈ ಹೇಳಿಕೆಯಿಂದ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂದು ಪದೇ ಪದೇ ಕೇಳಿಬರುತ್ತಿದ್ದ ಆರೋಪವು ನಿಜವಿರಬಹುದು ಎನಿಸಿದೆ.
ಇನ್ನು 2018-2020ರ ಅವಧಿಯಲ್ಲಿ ಸತತವಾಗಿ ಗಾಯಗೊಳ್ಳುತ್ತಿದ್ದ ಕಾರಣ ಅನೇಕ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಬಗ್ಗೆ ಯೋಚಿಸಿದ್ದೆ ಎಂದು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.
‘ಸಾಕಷ್ಟು ಪ್ರಯತ್ನಪಟ್ಟರೂ ಉತ್ತಮವಾಗಿ ಆಡಲು ಆಗುತ್ತಿರಲಿಲ್ಲ. ದೇಹ ಸ್ಪಂದಿಸುತ್ತಿರಲಿಲ್ಲ. 6 ಎಸೆತಗಳನ್ನು 6 ವಿಭಿನ್ನ ಶೈಲಿಗಳಲ್ಲಿ ಎಸೆಯಬೇಕಿತ್ತು. ಒಂದೊಂದು ಎಸೆತದ ಬಳಿಕವೂ ನೋವು ಹೆಚ್ಚಾಗುತ್ತಿತ್ತು. ಒಂದು ಓವರ್ ಬೌಲ್ ಮಾಡಿದ ಬಳಿಕ ಉಸಿರುಗಟ್ಟಿದಂತೆ ಆಗುತ್ತಿತ್ತು’ ಎಂದಿದ್ದಾರೆ.
ಇದೇ ವೇಳೆ ಕಠಿಣ ಸನ್ನಿವೇಶಗಳಲ್ಲಿ ಯಾರಿಂದಲೂ ತಮಗೆ ಸರಿಯಾದ ಬೆಂಬಲ ಸಿಕ್ಕಿರಲಿಲ್ಲ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಎರಡು ಮೂರು ವರ್ಷಗಳ ದೂರವೇ ಉಳಿದಿದ್ದರು. ಆದರೆ ಟಿ20 ವಿಶ್ವಕಪ್ ಟೂರ್ನಿ ವೇಳೆಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.