ಭಾರತ ತಂಡದ ಜೊತೆ ಹೋಳಿ ಬಣ್ಣದಲ್ಲಿ ಮಿಂದೆದ್ದ ಆಸೀಸ್ ಆಟಗಾರರು
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ (India) ಮತ್ತು ಆಸ್ಟ್ರೇಲಿಯಾ ( Australia) ಎರಡೂ ತಂಡಗಳು ಹೋಳಿ ಹಬ್ಬ ಆಚರಿಸಿವೆ. . ಭಾರತ ತಂಡದ ಆಟಗಾರರು ಹೋಳಿ ಆಚರಿಸಿದ್ದಲ್ಲದೆ, ಆಸ್ಟ್ರೇಲಿಯ ಆಟಗಾರರು ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಬಣ್ಣದಲ್ಲಿ ನಮುಳುಗಿರುವ ಕ್ರಿಕೆಟರ್ಸ್ ಪೋಟೋಗಳು ಸಖತ್ ವೈರಲ್ ಆಗಿವೆ.

Holi
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಹೋಳಿ ಆಡಿದೆ. ನಾಯಕ ರೋಹಿತ್ ಶರ್ಮಾ ಸೇರಿ ತಂಡದ ಎಲ್ಲಾ ಆಟಗಾರರು ವಿವಿಧ ಬಣ್ಣಗಳ ಜೊತೆ ಹೋಳಿ ಎಂಜಾಯ್ ಮಾಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಹೋಳಿ ಆಡಿದೆ. ಅಷ್ಠ ಅಲ್ಲ ಆಸ್ಷೇಲಿಯಾದ ಆಟಗಾರರು ಕೂಡ ಉತ್ಸಾಹದಿಂದ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
Holi
ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಹೋಳಿ ಶುಭಾಶಯಗಳನ್ನು ಹೇಳುತ್ತಿರುವ ವಿಡಿಯೋವನ್ನೂ ಬಿಸಿಸಿಐ ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
Holi
ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾದ ಆಟಗಾರರು ಕೂಡ ಹೋಳಿ ಬಣ್ಣದಲ್ಲಿ ಮುಳುಗಿದ್ದರು. ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಸಹ ಆಟಗಾರರೊಂದಿಗೆ ಹೋಳಿ ಹಬ್ಬ ಆಚರಿಸಿದರು.
ಅಹಮದಾಬಾದ್ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯದ ಆಟಗಾರರು ಹೋಳಿಯನ್ನು ಸಂಭ್ರಮಿಸಿದ್ದಾರೆ. ನಾಯಕ ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕ್ಯಾರಿ ಮತ್ತು ಸಹ ಆಟಗಾರರು ಪರಸ್ಪರ ಕಲರ್ ಬಳಿದುಕೊಂಡರು.
Holi
ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹೋಳಿ ಆಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಸ್ಮಿತ್ ನಾಯಕತ್ವದಲ್ಲಿ ಗೆದ್ದುಕೊಂಡಿತು. ಅದೇ ಸಮಯದಲ್ಲಿ, ಸ್ಟೀವ್ ಸ್ಮಿತ್ ನಾಲ್ಕನೇ ಟೆಸ್ಟ್‌ನಲ್ಲೂ ನಾಯಕತ್ವ ವಹಿಸಿದ್ದಾರೆ.
virat kohli
ಬಣ್ಣ ಬಳಿದುಕೊಂಡಿರುವ ವಿರಾಟ್ ಕೊಹ್ಲಿ ಮತ್ತು ರೋಹೀತ್ ಶರ್ಮ ಫೋಟೋಗೆ ಪೋಸ್ ನೀಡಿದ್ದು ಹೀಗೆ. ವಿರಾಟ್ ಮತ್ತು ರೋಹಿತ್ ಅವರ ಈ ಫೋಟೋ ಸಖತ್ ವೈರಲ್ ಆಗಿದೆ
ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಮುಖದ ತುಂಬಾ ಬಣ್ಣಗಳಿಂದ ತುಂಬಿದೆ. ಸೂರ್ಯಕುಮಾರ್ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.