11:30 PM (IST) Mar 08

IND vs NZ World Cup Final 2026ಟೀಕಾಕಾರರ ಬಾಯಿ ಮುಚ್ಚಿಸಿದ ಗೌತಮ್‌ ಗಂಭೀರ್; ಆಟಗಾರನಾಗಿ, ಕೋಚ್ ಆಗಿ ವಿಶ್ವಕಪ್ ಗೆದ್ದು ಇತಿಹಾಸ!

ಗೌತಮ್ ಗಂಭೀರ್, ಆಟಗಾರನಾಗಿ (2007) ಮತ್ತು ಕೋಚ್ ಆಗಿ (2026) ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ವ್ಯಕ್ತಿ ಎಂಬ ವಿಶಿಷ್ಟ ದಾಖಲೆ ಬರೆದಿದ್ದಾರೆ. ಅವರ ಕೋಚಿಂಗ್ ಶೈಲಿಯಲ್ಲಿ ಭಾರತ ತಂಡವು ಆಕ್ರಮಣಕಾರಿ ಬ್ಯಾಟಿಂಗ್ ಅಳವಡಿಸಿಕೊಂಡು, 2025ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಯಶಸ್ಸು ಕಂಡಿದೆ.
Read Full Story
11:07 PM (IST) Mar 08

IND vs NZ World Cup Final 2026Sanju Samson - ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ಸಂಜು ಬರೆದ 5 ದಾಖಲೆಗಳಿವು! ಸಿಕ್ಸರ್ ದಾಖಲೆ ನುಚ್ಚುನೂರು

ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸಂಜು ಸ್ಯಾಮ್ಸನ್ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಹಲವು ಐತಿಹಾಸಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Read Full Story
10:50 PM (IST) Mar 08

IND vs NZ World Cup Final 2026ಆಡಿದ್ದು 5 ಮ್ಯಾಚ್, ಸಿಡಿಸಿದ್ದು 24 ಸಿಕ್ಸರ್! ಒಂದೇ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 24 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಸಂಜು ಸ್ಯಾಮ್ಸನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದರೊಂದಿಗೆ, 321 ರನ್ ಗಳಿಸಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ವಿರಾಟ್ ಕೊಹ್ಲಿಯ 12 ವರ್ಷಗಳ ಹಳೆಯ ದಾಖಲೆಯನ್ನೂ ಅವರು ಮುರಿದಿದ್ದಾರೆ

Read Full Story
10:46 PM (IST) Mar 08

IND vs NZ World Cup Final 2026ಕಿವೀಸ್ ಮಣಿಸಿದ ಭಾರತ ಟಿ20 ಚಾಂಪಿಯನ್, ದಾಖಲೆ ಜೊತೆ ಮೊದಲ ಬಾರಿಗೆ ಆತಿಥ್ಯ ದೇಶಕ್ಕೆ ಟ್ರೋಫಿ

ಕಿವೀಸ್ ಮಣಿಸಿದ ಭಾರತ ಟಿ20 ಚಾಂಪಿಯನ್, ದಾಖಲೆ ಜೊತೆ ಮೊದಲ ಬಾರಿಗೆ ಆತಿಥ್ಯ ದೇಶಕ್ಕೆ ಟ್ರೋಫಿ, ಅದ್ಭುತ ಪ್ರದರ್ಶನ, ಭರ್ಜರಿ ಗೆಲುವಿನ ಮೂಲಕ ಟೀಂ ಇಂಡಿಯಾ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.

Read Full Story
08:46 PM (IST) Mar 08

IND vs NZ World Cup Final 2026ಸಂಜು, ಶರ್ಮಾ, ಇಶಾನ್ ಸಿಕ್ಸರ್‌‌ಗೆ ನ್ಯೂಜಿಲೆಂಡ್ ಕಂಗಾಲು, ಟಿ20 ವಿಶ್ವಕಪ್ ಫೈನಲ್‌ನಲ್ಲಿ 256 ರನ್ ಸವಾಲು

ಸಂಜು, ಶರ್ಮಾ, ಇಶಾನ್ ಸಿಕ್ಸರ್‌‌ಗೆ ನ್ಯೂಜಿಲೆಂಡ್ ಕಂಗಾಲು, ಟಿ20 ವಿಶ್ವಕಪ್ ಫೈನಲ್‌ನಲ್ಲಿ 256 ರನ್ ಸವಾಲು, ಅಬ್ಬರದ ಇನ್ನಿಂಗ್ಸ್ 200 ರನ್ ಗಡಿದಾಟಿದ ಬೆನ್ನಲ್ಲೇ ಕುಸಿತ ಕಂಡಿತ್ತು. ಆದರೂ ನ್ಯೂಜಿಲೆಂಡ್ ತಂಡಕ್ಕೆ 256 ರನ್ ಗುರಿ ನೀಡಲಾಗಿದೆ.

Read Full Story
08:12 PM (IST) Mar 08

IND vs NZ World Cup Final 2026ಟಿ20 ವಿಶ್ವಕಪ್‌ನಲ್ಲಿ 7 ಓವರ್‌ಗೆ ಹಲವು ದಾಖಲೆ, ಸಂಜು ಫಿಫ್ಟಿ ಮೂಲಕ ಬೃಹತ್ ಮೊತ್ತದತ್ತ ಭಾರತ

ಟಿ20 ವಿಶ್ವಕಪ್‌ನಲ್ಲಿ 7 ಓವರ್‌ಗೆ ಹಲವು ದಾಖಲೆ, ಸಂಜು ಫಿಫ್ಟಿ ಮೂಲಕ ಬೃಹತ್ ಮೊತ್ತದತ್ತ ಭಾರತ, ಫೈನಲ್ ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದು ಮಾತ್ರವಲ್ಲ ಹಲವು ಮೈಲಿಗಲ್ಲು ನಿರ್ಮಿಸಿದೆ.

Read Full Story
06:41 PM (IST) Mar 08

IND vs NZ World Cup Final 2026ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಆರಂಭದಲ್ಲೇ ಭಾರತಕ್ಕೆ ಸಿಕ್ತು ಗೆಲುವಿನ ಸುಳಿವು

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಆರಂಭದಲ್ಲೇ ಭಾರತಕ್ಕೆ ಸಿಕ್ತು ಗೆಲುವಿನ ಸುಳಿವು, ಅಹಮ್ಮಬಾದ್‌ ಕ್ರೀಡಾಂಗಣದಲ್ಲಿ ಅಭಿಮಾನಿಗಳು ತುಂಬಿದ್ದಾರೆ. ನ್ಯೂಜಿಲೆಂಡ್ ಟಾಸ್ ಗೆದ್ದುಕೊಂಡಿದೆ. ಇದು ಭಾರತಕ್ಕೆ ವರವೋ, ಶಾಪವೋ?

Read Full Story
05:32 PM (IST) Mar 08

IND vs NZ World Cup Final 2026'ಆ ನೋವು ನನಗೂ ಗೊತ್ತು'; ಸಂಜು ಸ್ಯಾಮ್ಸನ್‌ಗೆ ಧೈರ್ಯ ತುಂಬಿದ್ದರ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಹಿಟ್‌ಮ್ಯಾನ್!

ಟಿ20 ವಿಶ್ವಕಪ್ ಆರಂಭದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗದಿದ್ದಾಗ ನಾಯಕ ರೋಹಿತ್ ಶರ್ಮಾ ನೀಡಿದ ಭರವಸೆಯ ಮಾತುಗಳ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆ ಬಳಿಕ ಅವಕಾಶ ಪಡೆದ ಸಂಜು ಪ್ರಮುಖ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತವನ್ನು ಫೈನಲ್‌ಗೆ ತಲುಪಿಸಿದ್ದಾರೆ.

Read Full Story
03:19 PM (IST) Mar 08

IND vs NZ World Cup Final 2026‘ಪ್ರೇಕ್ಷಕರ ಸದ್ದಗಿಸುತ್ತೇವೆ’ - ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಕಿವೀಸ್ ಕ್ಯಾಪ್ಟನ್!

ಅಹಮದಾಬಾದ್: ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಈ ಫೈನಲ್‌ಗೂ ಮುನ್ನ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನದು?

Read Full Story
02:10 PM (IST) Mar 08

IND vs NZ World Cup Final 2026T20 World Cup 2026 - ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ ಅಲ್ಲ, ಈ ಚಾನೆಲ್‌ನಲ್ಲಿ ಫ್ರೀ ಆಗಿ ಫೈನಲ್ ಮ್ಯಾಚ್ ನೋಡಿ

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಅಹಮದಾಬಾದ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಸತತ ಎರಡನೇ ಬಾರಿ ಕಪ್ ಗೆಲ್ಲಲು ಭಾರತ ಸಜ್ಜಾಗಿದ್ದರೆ, ಕಿವೀಸ್ ತನ್ನ ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಉಚಿತವಾಗಿ ವೀಕ್ಷಿಸುವ ಮಾಹಿತಿಯೂ ಇಲ್ಲಿದೆ.
Read Full Story
02:00 PM (IST) Mar 08

IND vs NZ World Cup Final 2026India vs New Zealand - ಈ 3 ಸಮಸ್ಯೆ ಸರಿಪಡಿಸಿದರಷ್ಟೇ ಭಾರತಕ್ಕೆ 3ನೇ ಟಿ20 ವಿಶ್ವಕಪ್!

ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿರುವ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಸ್ಪಿನ್ನರ್‌ಗಳ ವಿರುದ್ಧ ಅಭಿಷೇಕ್ ಶರ್ಮಾ ಅವರ ವೈಫಲ್ಯ, ವರುಣ್ ಚಕ್ರವರ್ತಿ ಅವರ ದುಬಾರಿ ಬೌಲಿಂಗ್ ಮತ್ತು ಆರನೇ ಬೌಲಿಂಗ್ ಆಯ್ಕೆಯಾಗಿರುವ ಶಿವಂ ದುಬೆ ಅವರ ಕಳಪೆ ಪ್ರದರ್ಶನ ತಂಡಕ್ಕೆ ಪ್ರಮುಖ ಸವಾಲುಗಳಾಗಿವೆ.
Read Full Story
12:29 PM (IST) Mar 08

IND vs NZ World Cup Final 2026T20 World Cup 2026 - ಕಿವೀಸ್ ವಿರುದ್ಧ ಟೀಂ ಇಂಡಿಯಾಗೆ ಗೆಲ್ಲೋ ಚಾನ್ಸ್ ಎಷ್ಟಿದೆ? ಟ್ರ್ಯಾಕ್ ರೆಕಾರ್ಡ್ ಹೇಗಿದೆ?

T20 ವಿಶ್ವಕಪ್ 2026ರ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಹಿಂದಿನ ದಾಖಲೆಗಳು ಮತ್ತು ಆಟಗಾರರ ಫಾರ್ಮ್ ಗಮನಿಸಿದರೆ, ಟೀಂ ಇಂಡಿಯಾ ಹಾಟ್ ಫೇವರಿಟ್ ಆಗಿ ಕಾಣುತ್ತಿದೆ.

Read Full Story
10:40 AM (IST) Mar 08

IND vs NZ World Cup Final 2026ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ? ಫ್ಯಾನ್ಸ್ ಶಾಕ್!

ಟಿ20 ವಿಶ್ವಕಪ್ 2026ರ ಫೈನಲ್‌ಗೆ ಭಾರತ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಆದರೆ, ಇದೇ ಹೊತ್ತಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿವೃತ್ತಿ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂರ್ಯ ನಿಜವಾಗಿಯೂ ನಿವೃತ್ತಿ ಘೋಷಿಸುತ್ತಾರಾ?
Read Full Story
10:03 AM (IST) Mar 08

IND vs NZ World Cup Final 2026ಫೈನಲ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್! ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಳ್ಳಲು ರೆಡಿಯಾದ್ರಾ ಗಂಭೀರ್?

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ಜೊತೆ ಅಭಿಷೇಕ್ ಶರ್ಮಾ ಆಡುತ್ತಾರೆಯೇ ಮತ್ತು ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಬದಲಿಗೆ ಕುಲ್‌ದೀಪ್ ಯಾದವ್‌ಗೆ ಅವಕಾಶ ಸಿಗುವುದೇ ಎಂಬುದು ಕುತೂಹಲ ಮೂಡಿಸಿದೆ.

Read Full Story
09:21 AM (IST) Mar 08

IND vs NZ World Cup Final 2026ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ!

ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿವೆ. ಈ ಬಾರಿ ಐಸಿಸಿ ದಾಖಲೆಯ ಬಹುಮಾನದ ಮೊತ್ತವನ್ನು ಘೋಷಿಸಿದ್ದು, ಗೆದ್ದ ತಂಡಕ್ಕೆ ಸುಮಾರು 27.48 ಕೋಟಿ ರೂ. ಹಾಗೂ ರನ್ನರ್-ಅಪ್ ತಂಡಕ್ಕೆ ಸುಮಾರು 14.65 ಕೋಟಿ ರೂ. ಸಿಗಲಿದೆ.

Read Full Story