ಈ 8 ಆಟಗಾರರಿಗೆ ಸನ್‌ರೈಸರ್ಸ್ ಹೈದರಾಬಾದ್ ಗೇಟ್‌ಪಾಸ್! ಯಾರ್ಯಾರು ಗೊತ್ತಾ?
ಐಪಿಎಲ್ 2026ರ ಮಿನಿ ಹರಾಜಿಗೆ ಸಮಯ ಹತ್ತಿರವಾಗ್ತಿದೆ. ಈ ಹಿನ್ನೆಲೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾವ ಆಟಗಾರರನ್ನು ಬಿಡುಗಡೆ ಮಾಡಲಿದೆ, ಯಾರನ್ನು ಉಳಿಸಿಕೊಳ್ಳಲಿದೆ ಅನ್ನೋ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ಆ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ
ಐಪಿಎಲ್ 2026ರ ಮಿನಿ ಹರಾಜು ಡಿಸೆಂಬರ್ 13-15ರಂದು ನಡೆಯಲಿದೆ. ನವೆಂಬರ್ 15ರೊಳಗೆ ತಂಡಗಳು ತಮ್ಮ ರಿಟೆನ್ಶನ್ ಪಟ್ಟಿ ಸಲ್ಲಿಸಬೇಕು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಟ್ಟಿ ಹೇಗಿರಲಿದೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.
ಏಳು ಆಟಗಾರರಿಗೆ ಆರೆಂಜ್ ಆರ್ಮಿ ಗೇಟ್‌ಪಾಸ್
ಹೈದರಾಬಾದ್ ಫ್ರಾಂಚೈಸಿ ಹಲವು ಆಟಗಾರರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆಡಂ ಜಂಪಾ, ಸಚಿನ್ ಬೇಬಿ, ಮೊಹಮ್ಮದ್ ಶಮಿ ಸೇರಿದಂತೆ 7 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಗಾಯ ಮತ್ತು ಫಾರ್ಮ್ ಕೊರತೆಯಿಂದ ಶಮಿಯನ್ನು ಕೈಬಿಡಲಾಗುತ್ತಿದೆ.
ಇಶಾನ್ ಕಿಶನ್ ಮೇಲೆ ಎಲ್ಲರ ಚಿತ್ತ
ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಬಗ್ಗೆ SRH ಮ್ಯಾನೇಜ್ಮೆಂಟ್ ಚರ್ಚಿಸುತ್ತಿದೆ. ಕಳೆದ ಸೀಸನ್‌ನಲ್ಲಿ ಕಿಶನ್ 14 ಪಂದ್ಯಗಳಲ್ಲಿ 354 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು 94* ರನ್‌ಗಳ ಇನ್ನಿಂಗ್ಸ್ ಸೇರಿದೆ.
ಕ್ಲಾಸೇನ್ ಬಿಟ್ಟು ಖರೀದಿಸಲು ಪ್ಲಾನ್
ಹೆನ್ರಿಚ್ ಕ್ಲಾಸೆನ್‌ರನ್ನು ಸಹ ಫ್ರಾಂಚೈಸಿ ಬಿಡುಗಡೆ ಮಾಡಬಹುದು ಎಂಬ ವದಂತಿಗಳಿವೆ. ಆದರೆ, ಕ್ಲಾಸೆನ್‌ರನ್ನು ಬಿಟ್ಟರೆ ಮತ್ತೆ ಖರೀದಿಸುವುದು ಕಷ್ಟ. ಈ ಹಿಂದೆ SRH ಪ್ರಮುಖ ಆಟಗಾರರನ್ನು ಕೈ ಬಿಟ್ಟು ಪಶ್ಚಾತ್ತಾಪಪಟ್ಟಿತ್ತು.
ಇಶಾನ್ ಕಿಶನ್ ಕೈಬಿಟ್ಟು ಕ್ಯಾಮರೋನ್ ಗ್ರೀನ್ ಖರೀದಿಸಲು ಮಾಸ್ಟರ್ ಪ್ಲಾನ್
ಇಶಾನ್ ಕಿಶನ್‌ರನ್ನು ಬಿಡುಗಡೆ ಮಾಡಿ, ಕ್ಲಾಸೆನ್ ಮತ್ತು ಗ್ರೀನ್‌ರನ್ನು ಆಡಿಸಲು ಹೈದರಾಬಾದ್ ಯೋಚಿಸುತ್ತಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಪ್ಯಾಟ್ ಕಮಿನ್ಸ್ ಉಳಿಯುವುದು ಖಚಿತ. ಶಮಿ ಬಿಡುಗಡೆಯಾದರೆ, SRH ಹೊಸ ಬೌಲರ್‌ಗಾಗಿ ಹುಡುಕಾಟ ನಡೆಸಲಿದೆ.