- Home
- Sports
- Cricket
- ಐಪಿಎಲ್ ಮುಗಿಯುತ್ತಿದ್ದಂತೆಯೇ ಈ ಐವರಿಗೆ ಸನ್‌ರೈಸರ್ಸ್ ಹೈದರಾಬಾದ್ ಗೇಟ್‌ಪಾಸ್ ನೀಡೋದು ಗ್ಯಾರಂಟಿ!
ಐಪಿಎಲ್ ಮುಗಿಯುತ್ತಿದ್ದಂತೆಯೇ ಈ ಐವರಿಗೆ ಸನ್‌ರೈಸರ್ಸ್ ಹೈದರಾಬಾದ್ ಗೇಟ್‌ಪಾಸ್ ನೀಡೋದು ಗ್ಯಾರಂಟಿ!
ಐಪಿಎಲ್ 2025: ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2025ರಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಐದು ಮಂದಿ ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್: ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ 2025ರಲ್ಲಿ ಕೇವಲ 3 ಗೆಲುವು. ಹೀಗಾಗಿ ಕೆಲವು ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ.
1. ಇಶಾನ್ ಕಿಶನ್:
ಎಡಗೈ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿಸಿದ್ದರೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಆರೆಂಜ್ ಆರ್ಮಿಯಿಂದ ಕಿಶನ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.
2. ಹೆನ್ರಿಚ್ ಕ್ಲಾಸೆನ್
ದಕ್ಷಿಣ ಆಫ್ರಿಕಾ ಮೂಲದ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರನ್ನು ದುಬಾರಿ ಮೊತ್ತಕ್ಕೆ ರಿಟೈನ್ ಮಾಡಿಕೊಂಡರೂ ಸನ್‌ರೈಸರ್ಸ್ ಪರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.ಹೀಗಾಗಿ ಸನ್‌ರೈಸರ್ಸ್ ಕ್ಲಾಸೆನ್ ರಿಲೀಸ್ ಮಾಡುವ ಸಾಧ್ಯತೆಯಿದೆ.
3. ಮೊಹಮ್ಮದ್ ಶಮಿ
1ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿಸಿದ್ದರೂ ಕಳಪೆ ಪ್ರದರ್ಶನ ನೀಡಿದ್ದಾರೆ. ಆರೆಂಜ್ ಆರ್ಮಿ ಪರ ಶಮಿ 9 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ
4. ರಾಹುಲ್ ಚಹರ್
ಅನುಭವಿ ಲೆಗ್‌ಸ್ಪಿನ್ನರ್ ರಾಹುಲ್ ಚಹರ್‌ಗೆ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಪರ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿಲ್ಲ, ಮುಂದಿನ ಹರಾಜಿಗೂ ಮುನ್ನ ಚಹರ್ ಅವರನ್ನು ಸನ್‌ರೈಸರ್ಸ್ ರಿಲೀಸ್ ಮಾಡುವ ಸಾಧ್ಯತೆಯಿದೆ.
5. ಜಯದೇವ್ ಉನಾದ್ಕತ್
ಎಡಗೈ ಮಧ್ಯಮ ವೇಗದ ಬೌಲರ್ ಜಯದೇವ್ ಉನಾದ್ಕತ್‌ಗೆ ಸಾಕಷ್ಟು ಉತ್ತಮ ಅವಕಾಸ ಸಿಕ್ಕರೂ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಾಗಿ ಉನಾದ್ಕತ್ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ.