ಶ್ರೀಶಾಂತ್ - ಅಮಿತ್ ಮಿಶ್ರಾ: ಜೈಲಿನ ಕಂಬಿ ಎಣಿಸಿದ ಕ್ರಿಕೆಟಿಗರು!
ಕ್ರಿಕೆಟ್ ಜಂಟಲ್‌ಮೆನ್ ಗೇಮ್ ಎಂದೇ ಫೇಮಸ್. ಕೆಲವರು ಇದಕ್ಕೆ ವಿರುದ್ಧವಾಗಿ ನೆಡೆದುಕೊಂಡ ಉದಾಹರಣೆಗಳಿವೆ. ಕೆಲವು ಕ್ರಿಕೆಟಿಗರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಲ್ಲದೆ, ಜೈಲಿನ ಕಂಬಿ ಸಹ ಎಣಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ನಿಂದ ಹಿಡಿದು, ಭ್ರಷ್ಟಾಚಾರದ ಆರೋಪಗಳವರೆಗೆ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದಾರೆ ಕೆಲವು ಪ್ರಮುಖ ಆಟಗಾರರು.
ಕ್ರಿಕೆಟ್ ಜಟಲ್‌ಮೆನ್ ಗೇಮ್ ಎಂದೇ ಫೇಮಸ್. ಕ್ರೀಡೆಯನ್ನು ನ್ಯಾಯವಾಗಿ ಆಡಿ ಸ್ವಚ್ಛವಾಗಿರಿಸುವುದರ ಜೊತೆ ಸರಿಯಾದ ಮನೋಭಾವದಿಂದ ಆಡುವುದೂ ಅಷ್ಟೇ ಮುಖ್ಯ. ಆದರೆ ಕೆಲವರು ಇದಕ್ಕೆ ತತ್ವಿರುದ್ಧವಾಗಿ ನಡೆದುಕೊಂಡ ಉದಾಹರಣೆಗಳಿವೆ.
ಕೆಲವು ಕ್ರಿಕೆಟಿಗರು ತಮ್ಮ ಜೀವನವನ್ನು ಅಪಾಯಕ್ಕೆ ತಳ್ಳುವುದರ ಜೊತೆಗೆ ಕ್ರೀಡೆಯ ಖ್ಯಾತಿಯನ್ನು ಹಾಳು ಮಾಡಿದ್ದಾರೆ. ಅನೇಕರು ಇದಕ್ಕಾಗಿ ಶಿಕ್ಷೆಯನ್ನೂ ಎದುರಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್‌ನಿಂದ ಹಿಡಿದು ಭ್ರಷ್ಟಾಚಾರದ ಆರೋಪಗಳಿಂದು ಶ್ರೀ ಕೃಷ್ಣ ಜನ್ಮ ಸ್ಥಾನಕ್ಕೂ ಹೋಗಿ ಬಂದವರಿದ್ದಾರೆ. ಅಂಥ ಕೆಲವು ಕ್ರಿಕೆಟಿಗರು ಇವರು.
ಎಸ್.ಶ್ರೀಶಾಂತ್:
ಶ್ರೀಶಾಂತ್ ಎಂಬುದು ಭಾರತೀಯ ಕ್ರಿಕೆಟ್‌ನಲ್ಲಿ ಪರಿಚಿತ ಹೆಸರು. 2007 ರ ಐಸಿಸಿ ವಿಶ್ವ ಟಿ 20 ಮತ್ತು 2011 ರ ಐಸಿಸಿ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದ ಈ ವೇಗಿ ಸೀನಿಯರ್ ಟೀಂನ ತಂಡದ ಪ್ರಮುಖ ಸದಸ್ಯರಾಗಿದ್ದರು. ಆದರೆ, ಇದು 2013 ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಸಾಬೀತಾಯಿತು. ಇದರ ಪರಿಣಾಮವಾಗಿ, ಬಿಸಿಸಿಐ ಅವರಿಗೆ ಜೀವಾವಧಿ ನಿಷೇಧ ವಿಧಿಸಿತು. ಸಲಾಯಿತು. 2015 ರಲ್ಲಿ ಖುಲಾಸೆಗೊಳ್ಳುವ ಮೊದಲು ಅವರನ್ನು ಜೈಲಿಗೆ ಕಳುಹಿಸಲಾಯಿತು. ಅವರ ನಿಷೇಧವನ್ನು ನಂತರ ಕೇರಳ ಹೈಕೋರ್ಟ್ ರದ್ದುಗೊಳಿಸಿತು ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಮತ್ತೊಮ್ಮೆ ಆಡುವ ಸಾಧ್ಯತೆಯಿದೆ.
ಅಮಿತ್ ಮಿಶ್ರಾ:
ಮತ್ತೊಂದು ಆಘಾತಕಾರಿ ಹೆಸರು, ವಿಚಿತ್ರ ಕಾರಣಕ್ಕಾಗಿ ಜೈಲಿಗೆ ಹೋದ ಭಾರತೀಯ ಆಟಗಾರ ಇವರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಸರಣಿಯ ಭಾಗವಾಗಿ 2015 ರಲ್ಲಿ ಬೆಂಗಳೂರಿನಲ್ಲಿ ಕಂಡೀಷನಿಂಗ್ ಕ್ಯಾಂಪ್‌ನಲ್ಲಿ ಲೆಗ್ ಸ್ಪಿನ್ನರ್ ಭಾಗವಹಿಸಿದಾಗ ಈ ಘಟನೆ ನೆಡೆಯಿತು. ತನ್ನ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳಾ ಸ್ನೇಹಿತೆಯನ್ನು ಕಂಡಾಗ ಕಿರಿಕಿರಿಗೊಂಡ ಅವರು ಆಕೆ ಮೇಲೆ ಒಂದು ಕೆಟಲ್ ಎಸೆದರು. ಪೊಲೀಸರು ಆತನನ್ನು ಬಂಧಿಸಿದರು ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು ಅಮಿತ್ ಮಿಶ್ರಾ.
ಬೆನ್ ಸ್ಟೋಕ್ಸ್:
ಇಂಗ್ಲಿಷ್ ಆಲ್ರೌಂಡರ್ ಡೊಡ್ಡ ಬೀದಿ ಜಗಳದಲ್ಲಿ ಭಾಗಿಯಾದ ನಂತರ ಜೈಲಿಗೆ ಹೋದರು. 2017 ರಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ಘಟನೆಯೊಂದರಲ್ಲಿ, ಸ್ಟೋಕ್ಸ್ ಒಬ್ಬ ವ್ಯಕ್ತಿಯನ್ನು ಹೊಡೆದು ನಂತರ, ಅವನ ಸ್ನೇಹಿತರು ಮತ್ತು ಸಲಿಂಗಕಾಮಿ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು ಜೈಲಿಗೆ ಹೋದರು. ನಂತರ ಅವರು ಹಲವಾರು ನ್ಯಾಯಾಲಯದ ವಿಚಾರಣೆಗಳಿಗೆ ಒಳಗಾದರು ಮತ್ತು ಇಂಗ್ಲೆಂಡ್‌ನ ಉಪನಾಯಕ ಸ್ಥಾನವನ್ನು ಕಳೆದುಕೊಂಡಿರುವುದರ ಜೊತೆಗೆ ಅದೇ ವರ್ಷ ಆಶಸ್ ಅನ್ನು ತಪ್ಪಿಸಿಕೊಂಡರು.
ರುಬೆಲ್ ಹೊಸೈನ್:
ಬಾಂಗ್ಲಾದೇಶದ ಪ್ರಮುಖ ವೇಗಿಯ ಗೆಳತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ ಕಾರಣ ಜೈಲು ಪಾಲಾದರು. 2015 ರ ಐಸಿಸಿ ವಿಶ್ವಕಪ್‌ಗೆ ಮುಂಚೆಯೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಅದೇನೇ ಇದ್ದರೂ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಅವರನ್ನು ರಾಷ್ಟ್ರೀಯ ಹಿತಾಸಕ್ತಿಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸಿತು. ಬಿಡುಗಡೆಯಾದ ಅವರು ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ವರೆಗೆ ಆಡಿದ್ದರು. ಅವರ ಗೆಳತಿ ನಂತರ ದೂರನ್ನು ಹಿಂತೆಗೆದುಕೊಂಡರು .
ಮಖಾಯಾ ಎನ್ಟಿನಿ:
ದಕ್ಷಿಣ ಆಫ್ರಿಕಾದ ಖ್ಯಾತ ವೇಗಿ ಟೀನ್‌ಎಜರ್‌ಳ ಅತ್ಯಾಚಾರದ ಗಂಭೀರ ಆರೋಪದಲ್ಲಿ ಭಾಗಿಯಾಗಿದ್ದನು ಮತ್ತು 1999 ರಲ್ಲಿ ಅವನಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅಲ್ಪಾವಧಿಗೆ ಜೈಲು ಶಿಕ್ಷೆ ಅನುಭವಿಸಿದ ನಂತರ ಅವನ ವಕೀಲರ ಮನವಿಯ ಮೇಲೆ ಬಿಡುಗಡೆ ಮಾಡಲಾಯಿತು.