ಸೌತ್ ಆಫ್ರಿಕ ಕ್ರಿಕೆಟಿಗ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ, ಹೆಮ್ಮೆಯ ಸನಾತನಿ ಎಂದ ಫ್ಯಾನ್ಸ್!
ಐಸಿಸಿ ವಿಶ್ವಕಪ್ ಟೂರ್ನಿಗಾಗಿ ಸೌತ್ ಆಫ್ರಿಕಾ ತಂಡ ಭಾರತದಲ್ಲಿ ಬೀಡು ಬಿಟ್ಟಿದೆ. ಅಭ್ಯಾಸ ಪಂದ್ಯವಾಡುತ್ತಾ ಭರ್ಜರಿ ತಾಲೀಮು ನಡೆಸಿದೆ. ಸೌತ್ ಆಫ್ರಿಕಾ ತಂಡದಲ್ಲಿರುವ ಹಿಂದೂ ಕ್ರಿಕೆಟಿಗ ಇದೀಗ ಟೂರ್ನಿಗೂ ಮುನ್ನ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಇದರ ಬೆನ್ನಲ್ಲೇ ಭಾರತದ ಅಭಿಮಾನಿಗಳು ಹೆಮ್ಮೆಯ ಸನಾತನಿ, ಹಿಂದೂ ಧರ್ಮದ ಹೆಮ್ಮೆಯ ಪುತ್ರ ಎಂದು ಬಣ್ಣಿಸಿದ್ದಾರೆ.
ಭಾರತ ಆತಿಥ್ಯವಹಿಸಿರುವ ಐಸಿಸಿ ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಾಲೀಮು ನಡೆಸಿ ಸಜ್ಜಾಗಿದೆ. ಸೌತ್ ಆಫ್ರಿಕಾ ತಂಡ ಈಗಾಗಲೇ ಭರ್ಜರಿ ಶುಭಾರಂಭದ ವಿಶ್ವಾಸದಲ್ಲಿದೆ.
ಸೌತ್ ಆಫ್ರಿಕಾ ತಂಡದಲ್ಲಿರುವ ಹಿಂದೂ ಕ್ರಿಕೆಟಿಗ ಕೇಶವ್ ಮಹಾರಾಜ್, ಟೂರ್ನಿ ಆರಂಭಕ್ಕೂ ಮುನ್ನ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
ಬಿಳಿ ಪಂಚೆ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಶವ್ ಮಹಾರಾಜ್ ಟೂರ್ನಿಯಲ್ಲಿ ವೈಯುಕ್ತಿಕ ಹಾಗೂ ತಂಡ ಉತ್ತಮ ಪ್ರದರ್ಶನ ನೀಡಲು ದೇವರ ಬಳಿ ಬೇಡಿಕೊಂಡಿದ್ದಾರೆ. ಇದೀಗ ಕೇಶವ ಮಹಾರಾಜ್ ಹೆಮ್ಮೆಯ ಸನಾತನಿ, ಹಿಂದೂ ಧರ್ಮದ ಹೆಮ್ಮೆಯ ಪುತ್ರ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಕೇಶವ್ ಮಹಾರಾಜ್ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ಭಾರತ ವಿರುದ್ದಧ ಟಿ20 ಸರಣಿಗಾಗಿ ಆಗಮಿಸಿದ್ದ ಕೇಶವ್ ಮಹಾರಾಜ್ ಇದೇ ಅನಂತಪದ್ಮನಾಭ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿದ್ದರು.
ಪ್ರತಿ ಭಾರಿ ಭಾರತ ಪ್ರವಾಸದಲ್ಲಿ ಕೇಶವ್ ಮಹಾರಾಜ್, ಆಯಾ ಪಂದ್ಯ ಆಯೋಜನಗೊಳ್ಳುವ ಹತ್ತಿರದ ದೇವಸ್ಥಾನಕ್ಕೆ ಬೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. 2014ರಲ್ಲಿ ಬೆಂಗಳೂರಿನ ಬಾನಸವಾಡಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಕೇಶವ್ ಮಹಾರಾಜ್ ಶ್ರೀರಾಮ ಹಾಗೂ ಹನುಮಾನ್ ಭಕ್ತ. ಸೌತ್ ಆಫ್ರಿಕಾದಲ್ಲಿ ಹುಟ್ಟಿ ಬೆಳೆದರೂ ಕೇಶವ್ ಮಹಾರಾಜ್ ಹಿಂದೂ ಸಂಪ್ರದಾಯ, ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿದ್ದಾರೆ.
ಕೇಶವ್ ಮಹಾರಾಜ್ ಪೋಷಕರು ಉತ್ತರ ಪ್ರದೇಶ ಸುಲ್ತಾನ್‌ಪುರ ಮೂಲದವರು. ಹಲವು ದಶಕಗಳ ಹಿಂದೆ ಸೌತ್ ಆಫ್ರಿಕಾದ ಡರ್ಬನ್‌ಗೆ ತೆರಳಿ ಅಲ್ಲಿಯ ನಿವಾಸಿಗಳಾಗಿದ್ದಾರೆ.
2022ರಲ್ಲಿ ಕೇಶವ್ ಮಹಾರಾಜ್ ಬಹುಕಾಲದ ಗೆಳತಿ ಲೆರಿಶಾ ಮುನ್ಸಾಮಿ ವಿವಾಹವಾಗಿದ್ದಾರೆ. ಲೇರಿಶಾ ಖ್ಯಾತ ಕಥಕ್ ಡ್ಯಾನ್ಸರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.